ಬೆಳಗಾವಿ : ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಡಾ.ಈಶ್ವರ ಉಳ್ಳಾಗಡ್ಡಿ ಇವರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ ವತಿಯಿಂದ ರಚಿಸಲ್ಪಟ್ಟ ವೃತ್ತಿ ಮಾರ್ಗದರ್ಶನ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಆಯುಕ್ತರ ಕಾರ್ಯಾಲಯದ ಉಪ ನಿರ್ದೇಶಕ ಗಿರೀಶ್ ಪದಕಿ,ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ ನಿರ್ದೇಶಕ ಬಸವರಾಜ ನಾಲತವಾಡ,ಎಲ್ಲ ಹಿರಿಯ ಉಪನ್ಯಾಸಕರು ಉಪನ್ಯಾಸಕರು ಹಾಗೂ ಆಯುಕ್ತರ ಕಾರ್ಯಾಲಯದ ಎಲ್ಲ ಸಿಬ್ಬಂದಿಯವರು ಮತ್ತು ಐಎಲ್‌ಪಿ ವಿಭಾಗದ ನೋಡಲ್ ಅಧಿಕಾರಿಗಳು ಹಾಜರಿದ್ದರು.