ಬೆಳಗಾವಿ: ನಗರದ ಧರ್ಮನಾಥ ಭವನದಲ್ಲಿ ನ. 28ರಂದು ಮಧ್ಯಾಹ್ನ 3.30ಕ್ಕೆ ರಾಷ್ಟ್ರದ ಬಗ್ಗೆ ಕಾಳಜಿ ಹೊಂದಿದ 'ಪ್ರಬುದ್ಧರ ಸಮಾವೇಶ' ಆಯೋಜಿಸಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ವಿವಿಧೆಡೆಯಿಂದ ಸುಮಾರು 600ಕ್ಕೂ ಹೆಚ್ಚು ಪ್ರಬುದ್ಧರು ಭಾಗವಹಿಸಲಿದ್ದಾರೆ. ಆಯ್ದ ಚಿಂತಕರನ್ನು ಆಹ್ವಾನಿಸಲಾಗಿದೆ. ವೈದ್ಯರು, ವಕೀಲರು, ಉದ್ಯಮಿಗಳು, ಉಪನ್ಯಾಸಕರು, ವಿವಿಧ ಸಮಾಜಗಳ ಜೊತೆಗೆ ಎಲ್ಲ ಜಾತಿ, ಧರ್ಮದವರನ್ನೂ ಕರೆಸುತ್ತಿದ್ದಾರೆ. ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಲಿದ್ದಾರೆ.
ಭಾರತದ ಸಂವಿಧಾನಕ್ಕೆ ಧಕ್ಕೆ ತರುವಂಥ ಶಕ್ತಿಗಳನ್ನು ದೂರ ಇಡಲು, ಸಂವಿಧಾನದ ಆಶಯಗಳನ್ನು ಜಗತ್ತಿಗೆ ತಿಳಿಸಲು ಇಂತಹ ಕಾರ್ಯಕ್ರಮಗಳು ಸೇರಿಸಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್)ಮುಖಂಡರು ತಮ್ಮ ಕಾರ್ಯಕರ್ತರನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಗಡಿಭಾಗದ ಮರಾಠಿ ಭಾಷಿಕರಿಗೆ ಅನ್ಯಾಯ ಆಗುತ್ತಿದೆ ಎಂದು ನಾಯಕರು ದೂರು ಕೊಡಲು ನಿರ್ಧರಿಸಿರುವ ಜೊತೆಗೆ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶ್ರವಣ್
ಕುಮಾರ ಲಿಂಬಾಳೆ ಅವರು ಬೆಳಗಾವಿ ಕುರಿತು ಮರಾಠಿ ಭಾಷಿಕರಿಗೆ ನಿರಾಶೆ ಆಗುವ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಸಮ್ಮೇಳದಿಂದ ದೂರ ಇಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.