Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಗೋಕರ್ಣ ; ಭಾರಿ ಮಳೆಗೆ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ನೀರು

Advertisement

ಗೋಕರ್ಣ : ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಭಾನುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುರಿದ ಧಾರಾಕಾರ ಮಳೆ ಸುರಿದಿದೆ. ವಿಶೇಷವಾಗಿ ಸಿದ್ದಾಪುರ, ಹೊನ್ನಾವರ, ಕುಮಟಾ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು, ಕುಮಟಾ ತಾಲೂಕಿನ ಗೋಕರ್ಣ ಭಾಗದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೂ ನೀರು ಪ್ರವೇಶಿಸಿದೆ ಎಂದು ವರದಿಯಾಗಿದೆ.
ಸಮುದ್ರದ ಅಬ್ಬರದಿಂದ ಸಂಗಮ ನಾಲಾ ಕಡಲು ಸೇರುವ ಜಾಗದಲ್ಲಿ ಮಳೆ ನೀರು ಸಮುದ್ರ ಸೇರಲಾಗದೆ ಹಿಮ್ಮುಖವಾಗಿ ಹರಿದಿದೆ. ಪರಿಣಾಮವಾಗಿ, ಸೋಮಸೂತ್ರ ನಾಲದಿಂದ ನೀರು ಸಂಗಮಕ್ಕೆ ಹೋಗಲು ಸಾಧ್ಯವಾಗದ ಕಾರಣ ನೀರು ನಿಂತು ಗರ್ಭಗುಡಿ ಪ್ರವೇಶಿಸಿದೆ.

ದೇವಸ್ಥಾನದ ಸಿಬ್ಬಂದಿ ಪಂಪ್ ಸೆಟ್ ಬಳಸಿ ನೀರನ್ನು ಹೊರಹಾಕಿದ್ದಾರೆ ಎನ್ನಲಾಗಿದೆ.  ಅಲ್ಲದೆ, ಸೋಮಸೂತ್ರ ನಾಲಾಕ್ಕೆ ಗೇಟ್ ಅಳವಡಿಸಿ ಹೊರಗಿನ ಹೊಲಸು ನೀರು ಒಳಬರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಳೆಯ ರಭಸಕ್ಕೆ ಗೋಕರ್ಣದ ಮಹಾಗಣಪತಿ ಮುಂಭಾಗದ ರಸ್ತೆ ಮತ್ತು ಮೇಲಿನಕೇರಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಸಂಚಾರಕ್ಕೆ ತೊಂದರೆಯಾಗಿತ್ತು. ಚರಂಡಿಯ ಹೂಳು ತೆಗೆಯದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕುಮಟಾ ತಾಲೂಕಿನ ವಾಲಗಳ್ಳಿ ಬಳಿಯ ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ನೀರು ನಿಂತು ಹೊಳೆಯಂತಾಗಿ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಎಲ್ ಇ ಸಂಸ್ಥೆಗೆ ಡಾ.ಸುನಿಲ ಜಲಾಲಪುರೆ ನೂತನ ಕಾರ್ಯದರ್ಶಿಕೆಎಲ್ ಇ ಸಂಸ್ಥೆಗೆ ಡಾ.ಸುನಿಲ ಜಲಾಲಪುರೆ ನೂತನ ಕಾರ್ಯದರ್ಶಿಕೆಎಲ್ ಇ ಸಂಸ್ಥೆಗೆ ಡಾ.ಸುನಿಲ ಜಲಾಲಪುರೆ ನೂತನ ಕಾರ್ಯದರ್ಶಿಕರ್ನಾಟಕದ ಹಲವು ಜಿಲ್ಲೆಗಳಲ್ಲಿ 6 ದಿನ ಭಾರಿ ಮಳೆ ಸಾಧ್ಯತೆಮುತ್ತು ಮಾಸ್ಟರ್’ ಹೆಸರಿನಲ್ಲಿ 37 ವರ್ಷ ಪುರುಷನಂತೆ ಬದುಕಿದ ಮಹಿಳೆ : ಹೀಗೆ ಬದುಕುವ ನಿರ್ಧಾರದ ಹಿಂದಿನ ಕಾರಣವೇನು ?ಗೋಕರ್ಣ ; ಭಾರಿ ಮಳೆಗೆ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ನೀರುಡಾ.ಸುನಿಲ್ ಜಲಾಲಪುರೆ ಕೆ.ಎಲ್.ಇ ಸಂಸ್ಥೆಗೆ ನೂತನ ಕಾರ್ಯದರ್ಶಿಚಿಕ್ಕೋಡಿ-ನಿಪ್ಪಾಣಿ ಹೆದ್ದಾರಿಯಲ್ಲಿ ಭೀಕರ ಅಪಘಾತ: ಯುವಕರಿಬ್ಬರು ಸಾವುಗಂಡು ಮಗು ಹುಟ್ಟಿದ್ದಕ್ಕೆ ಎಣ್ಣೆ ಪಾರ್ಟಿ: ಮೊಹರಂ ಸಂಭ್ರಮಾಚರಣೆ ವೇಳೆಯೇ ಕೊಲೆಸತತ ಓದು, ಅಧ್ಯಯನವಿಲ್ಲದೆ ಕೃತಿ ಬರೆಯಲು ಸಾಧ್ಯವಿಲ್ಲ :  ಡಾ.ಬಸವರಾಜ ಜಗಜಂಪಿ