Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅಕ್ಟೋಬರ್‌ 1ರಿಂದ ಡ್ರೈವಿಂಗ್ ಲೈಸೆನ್ಸ್, ಆಧಾರ ಕಾರ್ಡ್‌, ಸರ್ಕಾರಿ ಉದ್ಯೋಗ ಪಡೆಯಲು ಜನನ ಪ್ರಮಾಣಪತ್ರ ಒಂದೇ ದಾಖಲೆ

 

ದೆಹಲಿ:
ಅಕ್ಟೋಬರ್ 1 ರಿಂದ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ವಿವಾಹ ನೋಂದಣಿ, ಚಾಲಕರ ಪರವಾನಗಿ, ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಸೇರಿದಂತೆ ಹಲವಾರು ಸೇವೆಗಳನ್ನು ಪಡೆಯಲು ನಾಗರಿಕರಿಗೆ ಜನನ ಪ್ರಮಾಣಪತ್ರಗಳು ಒಂದೇ ದಾಖಲೆಯಾಗಲಿವೆ.

ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ-2023 ಅನ್ನು ಅನುಷ್ಠಾನಗೊಳಿಸುವ ದಿನಾಂಕವನ್ನು ಪ್ರಕಟಿಸಿದ ಕೇಂದ್ರ ಗೃಹ ಸಚಿವಾಲಯವು ಹೊಸ ಉಪಕ್ರಮವನ್ನು ‘ಸಾರ್ವಜನಿಕ ಸೇವೆಗಳು ಮತ್ತು ಸಾಮಾಜಿಕ ಪ್ರಯೋಜನಗಳು ಮತ್ತು ಡಿಜಿಟಲ್ ನೋಂದಣಿಯ ಸಮರ್ಥ ಮತ್ತು ಪಾರದರ್ಶಕ ವಿತರಣೆ ಸಲುವಾಗಿ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದೆ.

ಪ್ರಮುಖ ಅಂಶಗಳು:
1. ಈ ಕಾಯಿದೆ ಜನನ ಮತ್ತು ಮರಣಗಳ ರಾಷ್ಟ್ರೀಯ ನೋಂದಣಿಯನ್ನು ಮೇಲ್ವಿಚಾರಣೆ ಮಾಡಲು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಕ್ಕೆ ಅಧಿಕಾರ ನೀಡುತ್ತದೆ. ರಾಜ್ಯದಿಂದ ನೇಮಕಗೊಂಡ ಮುಖ್ಯ ರಿಜಿಸ್ಟ್ರಾರ್‌ಗಳು ಮತ್ತು ರಿಜಿಸ್ಟ್ರಾರ್‌ಗಳು ಈ ರಾಷ್ಟ್ರೀಯ ಡೇಟಾಬೇಸ್‌ಗೆ ಅಂಕಿ-ಅಂಶ ನೀಡುತ್ತಾರೆ. ಮುಖ್ಯ ರಿಜಿಸ್ಟ್ರಾರ್‌ಗಳು ರಾಜ್ಯ ಮಟ್ಟದ ಡೇಟಾಬೇಸ್‌ಗಳನ್ನು ನಿರ್ವಹಿಸುತ್ತಾರೆ.

2. ಈ ಹಿಂದೆ, ಜನನ ಮತ್ತು ಮರಣಗಳನ್ನು ರಿಜಿಸ್ಟ್ರಾರ್‌ಗೆ ನಿರ್ದಿಷ್ಟ ವ್ಯಕ್ತಿ ವರದಿ ಮಾಡಬೇಕಾಗಿತ್ತು. ಉದಾಹರಣೆಗೆ, ಮಗುವಿನ ಜನನದ ಆಸ್ಪತ್ರೆಯ ಉಸ್ತುವಾರಿ ವೈದ್ಯಕೀಯ ಅಧಿಕಾರಿಯು ಮಗುವಿನ ಜನ್ಮವನ್ನು ವರದಿ ಮಾಡಬೇಕಿತ್ತು. ಆದರೆ ಹೊಸ ಕಾಯಿದೆಯಲ್ಲಿ ಜನನ ಪ್ರಕರಣಗಳಲ್ಲಿ, ನಿರ್ದಿಷ್ಟ ವ್ಯಕ್ತಿಗಳು ಪೋಷಕರು ಮತ್ತು ಮಾಹಿತಿದಾರರ ಆಧಾರ್ ಸಂಖ್ಯೆಯನ್ನು ಸಹ ಒದಗಿಸಬೇಕಾಗುತ್ತದೆ.

3.ಹೊಸ ಕಾಯಿದೆಯ ಅಡಿಯಲ್ಲಿ, ಇದನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿದೆ. ದತ್ತು ಪಡೆದ ಪೋಷಕರು, ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಗು ಮತ್ತು ಒಂಟಿ ಪೋಷಕರಿಗೆ ಅಥವಾ ಅವಿವಾಹಿತ ತಾಯಿ ಮಗುವಿನ ಜನನದ ಸಂದರ್ಭದಲ್ಲಿ ಯಾರು ಪೋಷಕರು ಇರುತ್ತಾರೆ ಅವರ ದಾಖಲೆಗಳನ್ನು ನೀಡಬಹುದು.

4.ಹೊಸ ಶಾಸನವು ಕೇಂದ್ರ ಸರ್ಕಾರದ ಅನುಮೋದನೆಗೆ ಒಳಪಟ್ಟು ಜನಸಂಖ್ಯೆಯ ನೋಂದಣಿಗಳು, ಮತದಾರರ ಪಟ್ಟಿಗಳು ಮತ್ತು ಇತರ ಅಧಿಕೃತ ಪ್ರಾಧಿಕಾರಗಳೊಂದಿಗೆ ರಾಷ್ಟ್ರೀಯ ಡೇಟಾಬೇಸ್​​ನ್ನು ಹಂಚಿಕೊಳ್ಳಲು ಅನುಮತಿ ನೀಡಲಾಗಿದೆ. ಜತೆಗೆ ರಾಜ್ಯದ ಡೇಟಾಬೇಸ್‌ಗಳನ್ನು ರಾಜ್ಯ-ಅನುಮೋದಿತ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಹುದು.

5.ಕಾಯಿದೆಯ ಪ್ರಕಾರ, ರಿಜಿಸ್ಟ್ರಾರ್ ಅಥವಾ ಜಿಲ್ಲಾ ರಿಜಿಸ್ಟ್ರಾರ್‌ರ ಸರಿಯಾಗಿ ಪ್ರಕ್ರಿಯೆ ಅಥವಾ ಮನವಿಯನ್ನು ಸ್ವೀಕರಿಸದಿದ್ದರೆ, ಜಿಲ್ಲಾ ರಿಜಿಸ್ಟ್ರಾರ್ ಅಥವಾ ಮುಖ್ಯ ರಿಜಿಸ್ಟ್ರಾರ್‌ಗೆ ಮೇಲ್ಮನವಿ ಸಲ್ಲಿಸಬಹುದು. ಈ ಮನವಿಯನ್ನು 30 ದಿನಗಳಲ್ಲಿ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಮೇಲ್ಮನವಿಯ ದಿನಾಂಕದಿಂದ 90 ದಿನಗಳಲ್ಲಿ ತಮ್ಮ ನಿರ್ಧಾರವನ್ನು ನೀಡಬೇಕಾಗುತ್ತದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ