Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಇಂದಿನಿಂದ ಡಿಕೆಶಿ ದರ್ಬಾರ್ : ಸಂಜೆ ನೂತನ ಸಿಎಂ ಪ್ರಮಾಣವಚನ

ಬೆಂಗಳೂರು : ಕರುನಾಡಿನ 24ನೇ ಮುಖ್ಯಮಂತ್ರಿಯಾಗಿ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾ‌ರ್ ಬುಧವಾರ ಸಂಜೆ 4.05ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜತೆಗೆ, ತಮ್ಮ ನೂತನ ಸಂಪುಟಕ್ಕೆ ಬಹುತೇಕ 14 ಮಂದಿ ಸಚಿವರನ್ನು ಸೇರ್ಪಡೆಮಾಡಿಕೊಳ್ಳಲಿದ್ದಾರೆ. ಒಂದು ಡಿಸಿಎಂ ಹುದ್ದೆ ಸೃಷ್ಟಿಯಾಗಲಿದ್ದು, জে. ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಆಗಲಿದ್ದಾರೆ.

2023ರ ಮೇ 20 ರಂದು ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಉಪಮುಖ್ಯ ಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಡಿ.ಕೆ. ಶಿವಕುಮಾರ್ ಅವರು, ಮುಖ್ಯ ಮಂತ್ರಿಯಾಗಿಯೂ ಅಜ್ಜಯ್ಯ ಅವರ ಹೆಸರಿನಲ್ಲೇ ಗೋಪ್ಯತಾವಿಧಿ ಸ್ವೀಕರಿಸುವ ಸಾಧ್ಯತೆಯಿದೆ ಎನ್ನುತ್ತವೆ ಅವರ ಆಪ್ತ ಮೂಲಗಳು. ನಾಡಿನ ನೂತನ ದೊರೆಗೆ ಪಟ್ಟ ಕಟ್ಟಲು ಲೋಕಭವನ ಸಕಲ ರೀತಿಯಿಂದಲೂ ಸಜ್ಜುಗೊಂಡಿದ್ದು, ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಅವರಿಂದ ಮುಖ್ಯ ಮಂತ್ರಿ ಹಾಗೂ ಸಚಿವರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.

ತನ್ಮೂಲಕ 1980ರ ದಶಕದಲ್ಲಿ ವಿದ್ಯಾ ರ್ಥಿ ಕಾಂಗ್ರೆಸ್ ಮೂಲಕ ರಾಜಕೀಯ ಸಂಘಟನೆ ಶುರು ಮಾಡಿದ ಡಿ.ಕೆ. ಶಿವಕುಮಾರ್‌ಅವರ ನಾಲ್ಕೂವರೆ ದಶಕಗಳ ಪರಿಶ್ರಮಕ್ಕೆ ಫಲ ದೊರೆತಂತಾಗಲಿದೆ. ಸಾತನೂರಿನಿಂದ ರಾಜಕೀಯ ಶುರು ಮಾಡಿ ಎಚ್.ಡಿ.ದೇವೇಗೌಡರಂತಹ ದಿಗ್ಗಜರೊಂದಿಗೆ ಸೆಣಸಾಡಿ 8 ಬಾರಿ ಶಾಸಕರಾಗಿ, 5 ಬಾರಿ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿ ಆಗಿ ನಾಲ್ಕೂವರೆ ದಶಕದಲ್ಲಿ ಹಲವು ಮೆಟ್ಟಿಲುಗ ಳನ್ನು ಡಿಕೆಶಿ ಹತ್ತಿದ್ದಾರೆ. ಕಾಂಗ್ರೆಸ್‌ ಪಾಲಿನ 'ಟ್ರಬಲ್ ಶೂಟರ್' ಎಂದೇ ಹೆಸರಾಗಿರುವ ಅವರು 3 ದಶಕಗಳಿಂದ ಕನಸು ಕಂಡಿದ ಕ್ಷಣ ಇಂದು ನನಸಾಗುತ್ತಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರುಕೊನೆಗೂ ಲಾವಣ್ಯ ಹಂತಕನ ಸೆರೆಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಬೆಳಗಾವಿಗೆಲಾರ್ಡ್ಸ್ ನಲ್ಲಿ ರೋಹಿತ್ ಶರ್ಮಾ ಕೊನೆಯ ಆಟವೇ ?ಗೃಹಲಕ್ಷ್ಮೀಯರಿಗೆ ಸಿಹಿ ಸುದ್ದಿ: 31ನೇ ಕಂತಿನ ಹಣ ಬಿಡುಗಡೆವೃತ್ತಿ ಮಾರ್ಗದರ್ಶನ ಕೈಪಿಡಿಯನ್ನು ಬಿಡುಗಡೆಗೊಳಿಸಿದ ಈಶ್ವರ ಉಳ್ಳಾಗಡ್ಡಿನುಗ್ಗಾನಟ್ಟಿಯಲ್ಲಿ ಕೌಟುಂಬಿಕ ಕಲಹ: ಜೋಡಿ ಕೊಲೆ19 ವರ್ಷದ ಹಿಂದೆ ಮಗುವಿಗೆ ಸ್ನಾನ ಮಾಡಿಸಿ ಮಡಿಲಲ್ಲಿ ಮಲಗಿಸಿಕೊಂಡಿದ್ದ ಮೆಸ್ಸಿ ; ಈಗ ಆ ಮಗುವೇ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಎದುರಾಳಿ !