Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅನೈತಿಕ ಸಂಬಂಧ : ಕೊಲೆಯಲ್ಲಿ ಅಂತ್ಯ

ಬೆಳಗಾವಿ: ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಆಕೆಯ ಪತಿ ಹಾಗೂ ಆತನ ಸ್ನೇಹಿತರು ಸೇರಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಂಕೇಶ್ವರದಲ್ಲಿ ನಡೆದಿದೆ.

ಈ ಕುರಿತು ಬೆಳಗಾವಿ ಎಸ್ ಪಿ ಕೆ ರಾಮರಾಜನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಸಂಕೇಶ್ವರ ಪಟ್ಟಣದ ಜನತಾ ಪ್ಲಾಟ್ ನಿವಾಸಿ ಬಾಬು ಭೂಸಗೋಳ (35) ಕೊಲೆಯಾಗಿದ್ದು, ಆರೋಪಿಗಳು ಬಾಬು ಅವರ ತಲೆ ಕಲ್ಲಿನಿಂದ ಜಜ್ಜಿ ಹಾಗೂ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಅನೈತಿಕ ಸಂಬಂಧ ಹಾಗೂ ಹಳೆ ದ್ವೇಷ ಹಿನ್ನೆಯಲ್ಲಿ ಬಾಬು ಅವರ ಕೊಲೆಯಾಗಿದೆ ಎಂದರು.

ವರ್ಷಾ (35) ಎಂಬಾಕೆ ತನ್ನ ಗಂಡ ಸುಬ್ಬರಾವ್ ಬಿಟ್ಟು ಹೋಗಿ ಕೊಲೆಯಾದ ಬಾಬು ಜೊತೆ ಸಂಬಂಧ ಹೊಂದಿದ್ದಳು. ಜೊತೆಗೆ ಬಾಬುಗೆ ಸಂಕೇಶ್ವರ ಜನತಾ ಪ್ಲಾಟ್ ಮರಡಿ ಕುಟುಂಬಸ್ಥರ ಜೊತೆ ದಾರಿ ವಿಚಾರವಾಗಿ ಜಗಳವಾಗಿತ್ತು.‌ ವರ್ಷಾ ಪತಿ ಮತ್ತು ಮರಡಿ ಗ್ಯಾಂಗ್ ಸ್ನೇಹಿತರು ಕೂಡ. ಹಾಗಾಗಿ ವರ್ಷಾ ಪತಿ ಹಾಗೂ ಮರಡಿ ಗ್ಯಾಂಗ್ ಸೇರಿಕೊಂಡು ಈ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾರೆ. ಕೊಲೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಸಂಕೇಶ್ವರ ಠಾಣೆಯ ಪೊಲೀಸರು ತಕ್ಷಣವೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು. 

ವರ್ಷಾ ಪತಿ ಸುಬ್ಬರಾವ್, ಅಕ್ಷಯ ಮರಡಿ (24), ಪವನ ಮರಡಿ (23), ಅನಿಲ ಮರಡಿ (27) ಸಂದೀಪ ಮರಡಿ (32) ಹಾಗೂ ಮರಡಿ ಕುಟುಂಬದ ಜೊತೆ ಕೆಲಸ ಮಾಡುತ್ತಿದ್ದ ಅಭಿಷೇಕ (23) ಎಂಬಾತ ಸೇರಿ ಕೊಲೆ ಮಾಡಿದ್ದಾರೆ. ಈ ಅಭಿಷೇಕ ಬಾಬು ಕೊಲೆಯಾದ ದಿನ ಬಾಬು ಮೇಲೆ ನಿಗಾ ಇಟ್ಟು ಉಳಿದ ಐದು ಜನ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ.  ಈ ಕೊಲೆಗೆ ಅನೈತಿಕ‌ ಸಂಭಂದ ಕಾರಣವಲ್ಲ ಬದಲಾಗಿ ಈ ಹಿಂದೆಯು ಬಾಬು ಮೇಲೆ ಈ ಮರಡಿ ಗ್ಯಾಂಗ್ ಸಾಕಷ್ಟು ಸಲ ಕೊಲೆಗೆ ಯತ್ನಿಸಿದೆ. ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ಆರೋಪಿಸಲಾಗಿದೆ.‌ ಸದ್ಯ ಎಲ್ಲಾ ಆರೋಪಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮತ್ತೆ ಬೇರೆ ಯಾರಾದರು ಭಾಗಿ ಆಗಿದ್ದಾರಾ ಎನ್ನುವುದು ನೋಡಬೇಕಾಗಿದೆ ಎಂದು  ಅವರು ತಿಳಿಸಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SIR : ಗಣತಿ ನಮೂನೆ ಸಲ್ಲಿಸಲು 17 ರವರೆಗೆ ಅವಕಾಶಈ ನಿಗೂಢ ಬಾವಿಯಲ್ಲಿ ಮತ್ತೆ ಅಚ್ಚರಿ ; ಸಮುದ್ರದ ಅಲೆಯಂತೆ ತನ್ನಷ್ಟಕ್ಕೆ ತಾನೇ ಏರಿಳಿಯುವ ನೀರು..!ವಿಭಾಗೀಯ ಕಚೇರಿಗಳನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಕ್ರಮ ಕೈಕೊಂಡವರು ಅರಸುಮದುವೆ ಮನೆಯಲ್ಲಿ ಪೊಲೀಸ್ ಅಧಿಕಾರಿ ಹತ್ಯೆ ; ಹೆಸರು ಬದಲಿಸಿಕೊಂಡು ನಕಲಿ ವೈದ್ಯನಾಗಿ ಬದುಕಿದ್ದ ಆರೋಪಿ 28 ವರ್ಷಗಳ ನಂತರ ಸೆರೆ…!ಕರ್ನಾಟಕದ 4 ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಮುನ್ಸೂಚನೆ ; ಆರೆಂಜ್‌ ಅಲರ್ಟ್‌ ಘೋಷಣೆಪುತ್ರಿಯರಿಗಾಗಿ ಜೀವನ ಮುಡಿಪಾಗಿಟ್ಟಿದ್ದ ತಂದೆ ವೃದ್ಧಾಶ್ರಮದಲ್ಲಿ ನಿಧನ ; ₹5100 ಕಳುಹಿಸಿ ವಿಡಿಯೊ ಕಾಲ್‌ನಲ್ಲಿ ಕೊನೆ ವಿದಾಯ ಹೇಳಿದ ಪುತ್ರಿಯರು...!ಯುವಜನತೆ  ಪಠ್ಯ ಮತ್ತು ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ಕುಲಪತಿ ತ್ಯಾಗರಾಜಗುರಿ, ಶಿಸ್ತು ಮತ್ತು ಸಾಧನೆಯಿಂದ ಯಶಸ್ಸು ಸಾಧ್ಯ: ಡಾ. ಸಿದ್ದು ಹುಲ್ಲೊಳ್ಳಿ  ಲಕ್ಷ್ಮೀ ಇದ್ದರೆ DK ಸಂಪುಟಕ್ಕೆ ಶೋಭೆ:  ಹೆಬ್ಬಾಳ್ಕರ್ ಯಾಕೆ ಸಂಪುಟಕ್ಕೆ ಅತ್ಯಂತ ಅವಶ್ಯಕ ಗೊತ್ತೇ ? ಬೆಳಗಾವಿಗೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದ ಮಹಾನಾಯಕಿಲಕ್ಷ್ಮೀ ಇದ್ದರೆ ಶೋಭೆ:  ಹೆಬ್ಬಾಳ್ಕರ್ ಯಾಕೆ ಸಂಪುಟಕ್ಕೆ ಅತ್ಯಂತ ಅವಶ್ಯಕ ಗೊತ್ತೇ ? ಬೆಳಗಾವಿಗೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದ ಮಹಾನಾಯಕಿ