Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿಭಾಗೀಯ ಕಚೇರಿಗಳನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಕ್ರಮ ಕೈಕೊಂಡವರು ಅರಸು

ಬೆಳಗಾವಿ : ಕರ್ನಾಟಕದಲ್ಲಿ ಸಾಮಾಜಿಕವಾಗಿ,ರಾಜಕೀಯವಾಗಿ ಕ್ರಾಂತಿಕಾರಿ ಹೆಜ್ಜೆಗಳನ್ನು ಇರಿಸುವ ಮೂಲಕ ತಮ್ಮ

ಗಟ್ಟಿಯಾದ ಹೆಜ್ಜೆಗಳನ್ನು ಮೂಡಿಸಿದ ದಿವಂಗತ 
ಮುಖ್ಯಮಂತ್ರಿ ದೇವರಾಜ ಅರಸು ಅವರ 111 ನೇ
ಜಯಂತಿಯನ್ನು ಆಗಸ್ಟ್ 20 ರಂದು ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುತ್ತಿದೆ.
        
ಆಗಸ್ಟ್ 6 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಅಧಿಕಾರಿಗಳನ್ನು ಹೊರತುಪಡಿಸಿ ಹಾಜರಿದ್ದವರು ಇಬ್ಬರೇ ಇಬ್ಬರು ! ನಾನು ಮತ್ತು ಶ್ರೀನಿವಾಸ ತಾಳೂಕರ.
       
ಮೀಸಲಾತಿಯ ಫಲಾನುಭವಿಗಳಾದ ಹಿಂದುಳಿದ ವರ್ಗದ ಲಕ್ಷಾಂತರ ಜನರಿದ್ದಾರೆ.1972 ರಲ್ಲಿ ಮುಖ್ಯಮಂತ್ರಿಯಾದ ಅರಸು ಅವರು ಎಲ್.ಜಿ.ಹಾವನೂರ ಅವರ ನೇತೃತ್ವದ ಆಯೋಗ ನೇಮಿಸಿ ಮೀಸಲಾತಿಯನ್ನು ಘೋಷಿಸಿದಾಗ ರಾಜ್ಯದಲ್ಲಿ ಪ್ರಬಲ ಕೋಮುಗಳಿಂದ ಬಹುದೊಡ್ಡ ಪ್ರತಿಭಟನೆ, ಆಕ್ರೋಶ ವ್ಯಕ್ತಗೊಂಡಿದ್ದು ಈಗ ಇತಿಹಾಸ. ಅರಸು ಅವರು ಮೈಸೂರು ರಾಜ್ಯವನ್ನು  ""ಕರ್ನಾಟಕ " ಎಂದು ಮರುನಾಮಕರಣ ಮಾಡಿದ್ದು ಇನ್ನೂ ದೊಡ್ಡ ಇತಿಹಾಸವೇ ಸರಿ.
       
ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಎಂಬ ಮರು ನಾಮಕರಣ ಮಾಡಿದ್ದನ್ನು "  The Hindu " ಇಂಗ್ಲಿಷ್ 
ದಿನಪತ್ರಿಕೆಯ 2022 ,ಜುಲೈ 22 ರಂದು ಪ್ರಕಟವಾದ 
" 50 ವರ್ಷಗಳ ಹಿಂದೆ" ಕಾಲಂ ನಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ ವಿವರಿಸಿದೆ.
          
ಮರುನಾಮಕರಣ ಆಗಿದ್ದು 1973 ರ ನವೆಂಬರ್ ಒಂದರಂದು.ಅದಕ್ಕೂ ಒಂದು ವರ್ಷ ಮೊದಲು 1972 ,ಜುಲೈ 22 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಬೆಂಗಳೂರಿನಲ್ಲಿ ನಡೆಯಿತು.ವಿಧಾನಸಭೆ ಹಾಗೂ ವಿಧಾನ ಪರಿಷತ್ತು ಸದಸ್ಯರು ಸೇರಿ ಒಟ್ಟು 190 ಶಾಸಕರು ಶಾಸಕಾಂಗ ಪಕ್ಷದಲ್ಲಿದ್ದರು.ಅಂದಿನ ಸಭೆಯಲ್ಲಿ ಹಾಜರಿದ್ದವರು 131.ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡುವ ಬಗ್ಗೆ ಚರ್ಚೆ ನಡೆಯಿತು. ಮೈಸೂರು ಭಾಗದ ಸಚಿವರು ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕಂದಾಯ ಸಚಿವರಾಗಿದ್ದ ಹುಚ್ಚಮಾಸ್ತಿಗೌಡ ಅವರು ಮಾತನಾಡಿ,1956 ರಲ್ಲಿ ಮೈಸೂರು ರಾಜ್ಯ ರಚನೆಯಾದಾಗಿನ ಸಂದರ್ಭದಲ್ಲಿ ಆಗಿರುವ ಒಪ್ಪಂದದಂತೆ ಮೈಸೂರು ಹೆಸರೇ ಮುಂದುವರೆಯಬೇಕು, ಹೀಗೆ ಹೇಳುವುದು ನನ್ನ ಕರ್ತವ್ಯವೂ ಆಗಿದೆ ಎಂದು ಪ್ರತಿಪಾದಿಸಿದರು.
        
 " ಮೈಸೂರು ಕರ್ನಾಟಕ",  " ಕನ್ನಡ ನಾಡು" ಎಂದು ನಾಮಕರಣ ಮಾಡಬೇಕೆಂಬ ಪ್ರಸ್ತಾವನೆಗಳನ್ನು ಸಹ ಸಭೆಯ ಮುಂದೆ ಇಡಲಾಯಿತು.ಆದರೆ ಅದಕ್ಕೆ ಬೆಂಬಲ ಸಿಗಲಿಲ್ಲ. ಸಭೆಯಲ್ಲಿದ್ದ ಮುಖ್ಯಮಂತ್ರಿ ಅರಸು ಅವರು ಕರ್ನಾಟಕ ಎಂಬ ಪ್ರಸ್ತಾವನೆಯನ್ನು ಬೆಂಬಲಿಸಿದರು.ಆಗ 131 ಶಾಸಕರ ಪೈಕಿ 89 ಶಾಸಕರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ಕರ್ನಾಟಕವೇ ಅಂತಿಮಗೊಂಡಿತು .
           
1956 ರ ನಂತರ ಯಾವುದೇ ಮುಖ್ಯಮಂತ್ರಿಗಳು ಮರು ನಾಮಕರಣ ಮಾಡುವ ಧೈರ್ಯ ಮಾಡಿರಲಿಲ್ಲ. 17 ವರ್ಷಗಳ ಕಾಲ ವಿಧಾನ ಸಭೆಯಲ್ಲಿ ಮರು ನಾಮಕರಣದ ವಿಷಯ ಪ್ರಸ್ತಾಪವಾದಾಗಲೆಲ್ಲ ವಾದ ಪ್ರತಿವಾದಗಳು ನಡೆದು ಮರು ನಾಮಕರಣ ನನೆಗುದಿಗೆ ಬೀಳುತ್ತಿತ್ತು. ಕೊನೆಗೆ 1972 ಕ್ಕೆ ಮರು ನಾಮಕರಣಕ್ಕೆ ಚಾಲನೆ ದೊರೆಯಿತು.
          
ಅರಸು ಅವರು ರಾಜ್ಯದ 24 ಸಂಸದರ ( ನಂತರ 28 ಆಯಿತು) ಸಭೆಯನ್ನು ಬೆಳಗಾವಿಯಲ್ಲಿ ನಡೆಸಿ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದದ ಹಿನ್ನೆಲೆಯಲ್ಲಿ ಕೈಕೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಿದರು. ಸರಕಾರಿ ಕಚೇರಿಗಳ ವಿಭಾಗೀಯ ಕಚೇರಿಗಳನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಕ್ರಮ ಕೈಕೊಂಡವರು ಅವರೇ.
           
ಅರಸು ಅವರನ್ನು ನನ್ನ 19 ನೇ ವಯಸ್ಸಿನಲ್ಲಿ ಪತ್ರಕರ್ತನಾಗಿ ಕೆಲಸ ಆರಂಭಿಸಿದಾಗ ನೋಡಿದ್ದೇನೆ. ಮಾಜಿ ಆದ ಮೇಲು ಸಹ ಅವರ ಪತ್ರಿಕಾ ಪರಿಷತ್ತುಗಳಿಗೆ ಹಾಜರಾಗಿದ್ದೇನೆ. ಅವರ ಕೊನೆಯ ದಿನಗಳು, ಇಂದಿರಾ ಗಾಂಧಿಯವರಿಗೆ ರಾಜಕೀಯವಾಗಿ ಸಡ್ಡು ಹೊಡೆದು ಅರಸು ಕಾಂಗ್ರೆಸ್ ಪಕ್ಷ ಕಟ್ಟಿ ದಯನೀಯ ಸೋಲು ಅನುಭವಿಸಿದ್ದನ್ನು ವರದಿ ಮಾಡಿದ್ದೇನೆ.
          
ಸಾಮಾಜಿಕವಾಗಿ, ರಾಜಕೀಯವಾಗಿ ಕ್ರಾಂತಿಕಾರಿ ಎನಿಸಿದ ಅರಸು ಅವರು ಹಿಂದುಳಿದ ವರ್ಗಗಳಿಗೆ ಮಾಡಿದ ಕೆಲಸಗಳು ಒಂದಲ್ಲ ಎರಡಲ್ಲ.ಅವರು ರಾಜಕೀಯವಾಗಿ ಬೆಳೆಸಿದ ಅನೇಕರು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
          
ಅರಸು ಅವರ 111 ನೆ ಜಯಂತಿಯನ್ನು ರಾಜ್ಯ ಸರಕಾರ ಆಗಸ್ಟ್ 20 ರಂದು ಆಚರಿಸುತ್ತಿದೆ.

-ಅಶೋಕ ಚಂದರಗಿ, ಬೆಳಗಾವಿ

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ