Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 183 ಇಳಿಕೆ

ನವದೆಹಲಿ: ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡ‌ರ್ ದರವನ್ನು ಬುಧವಾರ ಪರಿಷ್ಕರಿಸಿವೆ.

19 ಕೆ.ಜಿ. ವಾಣಿಜ್ಯ ಸಿಲಿಂಡರ್ ದರ ₹183.50ಯಷ್ಟು ಕಡಿಮೆಯಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಈ ವರ್ಷದಲ್ಲಿ ವಾಣಿಜ್ಯ ಸಿಲಿಂಡ‌ರ್ ದರದಲ್ಲಿ ಆದ ಮೊದಲ ಇಳಿಕೆ ಇದಾಗಿದೆ.

ಬೆಂಗಳೂರಲ್ಲಿ 19 ಕೆ.ಜಿ ಸಿಲಿಂಡ‌ರ್ ಬೆಲೆ ₹3,021ರಷ್ಟಿದ್ದರೆ, ದೆಹಲಿಯಲ್ಲಿ ₹2,930ಕ್ಕೆ ಇಳಿದಿದೆ. ಕೋಲ್ಕತ್ತದಲ್ಲಿ ₹3,081ರಷ್ಟಿದೆ.

ಇಂದಿನಿಂದ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 183.50 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ಇಂದಿನಿಂದ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 2930 ರೂ.ಗಳಷ್ಟು ಕಡಿಮೆಯಾಗಲಿದೆ. ಇಂದಿನಿಂದ 5 ಕೆಜಿ ಎಫ್‌ಟಿಎಲ್ ಬೆಲೆಯನ್ನು 13 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ದೆಹಲಿಯಲ್ಲಿ 5 ಕೆಜಿ ಎಫ್‌ಟಿಎಲ್ ಬೆಲೆ 808.50 ರೂ.ಗಳಷ್ಟು ಕಡಿಮೆಯಾಗಲಿದೆ.

ಗೃಹ ಬಳಕೆಯ 14.2 ಕೆ.ಜಿ. ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಸಿಲಿಂಡರ್‌ ಬೆಲೆ ಬೆಂಗಳೂರಲ್ಲಿ ₹944, ದೆಹಲಿಯಲ್ಲಿ ₹942, ಕೋಲ್ಕತ್ತದಲ್ಲಿ ₹968, ಮುಂಬೈಯಲ್ಲಿ ₹941 ಮತ್ತು ಚೆನ್ನೈಯಲ್ಲಿ ₹957 ಆಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವನ್ನು 60 ದಿನಗಳವರೆಗೆ ವಿಸ್ತರಿಸಲು ಒಪ್ಪಿಕೊಂಡ ಬೆನ್ನಲೇ ಆ ಪ್ರದೇಶದಲ್ಲಿ ಉದ್ವಿಗ್ನತೆ ಕಡಿಮೆಯಾಗಿದ್ದು, ಜಾಗತಿಕ ಕಚ್ಚಾ ತೈಲ ಬೆಲೆಗಳು ಕುಸಿತ ಕಂಡಿವೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬ್ರಿಕ್ಸ್‌ ಶೃಂಗಸಭೆಗಾಗಿ ಇರಾನ್ ಅಧ್ಯಕ್ಷರು ಭಾರತಕ್ಕೆ : ಯುದ್ಧದ ನಡುವೆ ಪೆಝೆಶ್ಕಿಯನ್ ಭೇಟಿ ಯಾಕೆ ಮಹತ್ವದ್ದು ?ಅಮಿತ್ ಶಾ ವಿರುದ್ಧದ ಹೇಳಿಕೆ: ರಾಹುಲ್ ಗಾಂಧಿಗೆ ಹಕ್ಕುಚ್ಯುತಿ ನೋಟಿಸ್, ಆ.28ರೊಳಗೆ ಉತ್ತರಿಸಲು ಲೋಕಸಭೆ ಸಚಿವಾಲಯ ಸೂಚನೆಪಾಕಿಸ್ತಾನದಿಂದ ಹಿಡಿದು ಅಮೆರಿಕದವರೆಗೆ ಜಗತ್ತು ʼಭಾರತʼವನ್ನು ಹೇಗೆ ನೋಡುತ್ತದೆ ? 36 ದೇಶಗಳ ಸಮೀಕ್ಷೆಯಲ್ಲಿ ಬಹಿರಂಗಸಿಪಿಐ ಗಡ್ಡೆಕರ್‌ಗೆ ರಾಷ್ಟ್ರಪತಿ ಹಾಗೂ ಮೂವರು ಪೊಲೀಸ್ ಅಧಿಕಾರಿಗಳಿಗೆ ಡಿಜಿ, ಐಜಿಪಿ ಪದಕಮೂವರು ಮನೆಗಳ್ಳರನ್ನು ಬಂಧಿಸಿದ ಯಮಕನಮರಡಿ ಪೊಲೀಸರುಬೆಳಗಾವಿಗೆ ಸತೀಶ, ಉತ್ತರ ಕನ್ನಡಕ್ಕೆ ಲಕ್ಷ್ಮಣ ಸವದಿ ಉಸ್ತುವಾರಿ ಸಚಿವರಾಗಿ ನೇಮಕ ಬೆಳಗಾವಿಗೆ ಸತೀಶ, ಉತ್ತರ ಕನ್ನಡಕ್ಕೆ ಲಕ್ಷ್ಮಣ ಸವದಿ ಉಸ್ತುವಾರಿ ಸಚಿವರಾಗಿ ನೇಮಕ ಲಿಂಗರಾಜ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಕಣಬರಗಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನಪ್ರತಿಯೊಬ್ಬರಲ್ಲಿ ಪರಿಸರ ಸಂರಕ್ಷಣೆ ಪ್ರಜ್ಞೆಯನ್ನು ಜಾಗೃತಿಗೊಳಿಸಬೇಕು : ಎಸ್.ಬಿ.ತಾರದಾಳೆದೇಶದ ಅಭಿವೃದ್ಧಿಗೆ ಶ್ರಮಿಸುವುದು ನಿಜವಾದ ದೇಶಪ್ರೇಮ : ಎಸ್.ಬಿ.ತಾರದಾಳೆ