Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಾನೂನು ಹೋರಾಟಕ್ಕೆ ತೆರೆ; ಭಾವುಕರಾದ ಚೈತ್ರಾ ಕುಂದಾಪುರ..!

ಕಾನೂನು ಹೋರಾಟಕ್ಕೆ ತೆರೆ; ಭಾವುಕರಾದ ಚೈತ್ರಾ ಕುಂದಾಪುರ..!

Advertisement

ಕುಂದಾಪುರ :ಹಿಂದುತ್ವ ಭಾಷಣಗಾರ್ತಿ ಹಾಗೂ ಬಿಗ್ ಬಾಸ್ ಕನ್ನಡ ಖ್ಯಾತಿಯ ಚೈತ್ರಾ ಕುಂದಾಪುರ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಐದು ಪ್ರಕರಣಗಳಲ್ಲಿ ನಿರ್ದೋಷಿಯಾಗಿ ಬಿಡುಗಡೆಯಾಗಿರುವುದಾಗಿ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.ಸುಮಾರು ಒಂಬತ್ತು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ಬಳಿಕ ನ್ಯಾಯ ದೊರೆತಿದೆ ಎಂದು ಹೇಳಿರುವ ಚೈತ್ರಾ, ತಮ್ಮ ಜೀವನದ ಹೋರಾಟದ ಅನುಭವಗಳನ್ನು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

“ಆ ಹೆಣ್ಣುಮಗಳಿಗಿರುವ ಧೈರ್ಯ ನಮ್ಮೂರಲ್ಲಿ ಯಾವ ಗಂಡಸರಿಗೂ ಇಲ್ಲ' ಎಂಬ ಮಾತಿನೊಂದಿಗೆ ಆರಂಭವಾದ ಹೋರಾಟ ಇಂದು ತಾರ್ಕಿಕ ಅಂತ್ಯ ಕಂಡಿದೆ. ನನ್ನ ಸಾಮಾಜಿಕ ಬದುಕಿಗೆ ಶಕ್ತಿ ತುಂಬಿದ ಗಂಗಾವತಿಯೊಂದಿಗಿನ ಕೊನೆಯ ಬಂಧವೂ 
 ಕಳಚಿಕೊಂಡಿದೆ” ಎಂದು ಅವರು ಬರೆದುಕೊಂಡಿದ್ದಾರೆ.

“ಒಂಬತ್ತು ವರ್ಷಗಳಲ್ಲಿ ಐದು ಪ್ರಕರಣಗಳನ್ನು ಎದುರಿಸಿದ್ದೇನೆ. ಇವೆಲ್ಲವೂ ಒಂದು ಚಿಂತನೆ ಮತ್ತು ಒಂದು ರಾಜಕೀಯ ಪಕ್ಷಕ್ಕಾಗಿ ಎದುರಿಸಿದ ಹೋರಾಟಗಳಾಗಿವೆ. ಈ ಪಯಣದಲ್ಲಿ ರಾಜಕೀಯ ಪಿತೂರಿಗಳು, ನಂಬಿದವರಿಂದಾದ ನಿರಾಸೆಗಳು ಹಾಗೂ ಬದುಕಿನ ಪಾಠಗಳನ್ನು ಕಲಿತಿದ್ದೇನೆ” ಎಂದು ಅವರು ಉಲ್ಲೇಖಿಸಿದ್ದಾರೆ.

2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಹಿಂದುತ್ವ ಪರ ಪ್ರಚಾರ ನಡೆಸಿದ್ದ ವೇಳೆ ಚೈತ್ರಾ ಕುಂದಾಪುರ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಅವಹೇಳನಕಾರಿ ಹೇಳಿಕೆ, ತೇಜೋವಧೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣಗಳು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಇದೀಗ ಎಲ್ಲ ಐದು ಪ್ರಕರಣಗಳಲ್ಲೂ ತಮಗೆ ನ್ಯಾಯ ಸಿಕ್ಕಿದ್ದು, ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿದೆ ಎಂದು ಚೈತ್ರಾ ತಿಳಿಸಿದ್ದಾರೆ.

“ಇಂದು ವಯಸ್ಸಿನ ಹಂಗಿಲ್ಲದೆ ಲಕ್ಷಾಂತರ ಜನರು ನನ್ನನ್ನು 'ಅಕ್ಕಾ' ಎಂದು ಕರೆಯುತ್ತಾರೆ. ಅದಕ್ಕಿಂತ ದೊಡ್ಡ ಪ್ರೀತಿ ನನಗೆ ಬೇರೆ ಇಲ್ಲ” ಎಂದು ಅವರು ತಮ್ಮ ಭಾವುಕ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂಗಾರು ಸಂಪೂರ್ಣ ಸ್ಥಗಿತ: ಶೇ.41 ರಷ್ಟು ಮಳೆ ಕೊರತೆ..ಚಿಕ್ಕೋಡಿಯಲ್ಲಿ ಗಾರ್ಮೆಂಟ್ಸ್ ಅಂಗಡಿಗೆ ಬೆಂಕಿ ; ಲಕ್ಷಾಂತರ ರೂ. ಮೌಲ್ಯದ ಬಟ್ಟೆ ಭಸ್ಮ..ಕರ್ನಾಟಕದಲ್ಲಿ ಮುಂಗಾರು ಕ್ಷೀಣ : ಕರಾವಳಿ-ಮಲೆನಾಡಿನ ಜಿಲ್ಲೆಗಳಲ್ಲೇ ಭಾರಿ ಮಳೆ ಕೊರತೆ….!ಕಾನೂನು ಹೋರಾಟಕ್ಕೆ ತೆರೆ; ಭಾವುಕರಾದ ಚೈತ್ರಾ ಕುಂದಾಪುರ..!ಕಾನೂನು ಹೋರಾಟಕ್ಕೆ ತೆರೆ; ಭಾವುಕರಾದ ಚೈತ್ರಾ ಕುಂದಾಪುರ..!ಬೆಳಗಾವಿ : ನಕಲಿ ದಾಖಲೆ ಸೃಷ್ಟಿಸಿದವರ ಬಂಧನಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು – ಇದು ಏನನ್ನು ಸೂಚಿಸುತ್ತದೆ ?ವಿಧಾನ ಪರಿಷತ್‌ ಚುನಾವಣೆ | ಕಾಂಗ್ರೆಸ್ಸಿನ ಐವರು, ಬಿಜೆಪಿಯ ಇಬ್ಬರಿಗೆ ಗೆಲುವು ; ಜೆಡಿಎಸ್‌ಗೆ ಸೋಲು..ಬೈಕಿನಲ್ಲಿ ಸಾಗುತ್ತಿದ್ದಾಗ ನಡೆದ ದುರ್ಘಟನೆ : ನಾಯಿ ಉಳಿಸಲು ಹೋಗಿ ಹೆತ್ತಮ್ಮನೇ ಸಾವು...ಬಸ್ ಸೇವೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ ಪ್ರಮೋದ ಕೊಚೇರಿ