ಬೆಳಗಾವಿ: ಸಂಘ- ಸಂಸ್ಥೆ ವಿಚಾರ ಬಂದಾಗ ಎ. ಬಿ. ಪಾಟೀಲ ಹಾಗೂ ನಾವು ಬೇರೆ ಬೇರೆ, ಆದರೆ ಪಕ್ಷದ ವಿಚಾರ ಬಂದಾಗ ನಾವು ಅವರು ಒಂದೇ ಎಂದು ಲೋಕೋಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಹುಕ್ಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳೀಯವಾಗಿ ಸಂಘ-ಸಂಸ್ಥೆಗಳ ಚುನಾವಾಣೆ ಬಂದಾಗ ಮಾಜಿ ಸಚಿವ ಎ.ಬಿ.ಪಾಟೀಲ ಅವರು ಬೇರೆ ಬೇರೆಯಾಗಿದ್ದೇವೆ ಹೊರತು ಪಕ್ಷದ ವಿಚಾರ ಬಂದಾಗ ನಾವು ಅವರು ಕೂಡಿ ಪ್ರಚಾರ ಮಾಡುತ್ತೇವೆ. ಈ ಕುರಿತು ಅವರು ಸಹ ಇದೇ ರೀತಿಯಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪಕ್ಷದ ಚಿಹ್ನೆ ಬಂದಾಗ ನಾವು- ಮಾಜಿ ಸಚಿವ ಎ.ಬಿ.ಪಾಟೀಲ ಒಟ್ಟಾಗಿ ಪಕ್ಷದ ಪರ ಪ್ರಚಾರ ಮಾಡುತ್ತೇವೆ ಎನ್ನುವ ಮೂಲಕ ವಿರೋಧಿಗಳಿಗೆ ನಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದರು.
ಭೂಗಳ್ಳರ ವಿರುದ್ಧ ಕಠಿಣ ಕಾನೂನು ಕ್ರಮ: ನಕಲಿ ಆಧಾರ ಕಾರ್ಡ್ ಸೃಷ್ಟಿಸಿ ಜಮೀನು ಕಬಳಿಕೆ ಮಾಡುವಂತಹ ಭೂಗಳ್ಳರ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಹುಕ್ಕೇರಿ ತಾಲೂಕಿನಲ್ಲಿ ಭೂಗಳ್ಳರ ಪ್ರಕರಣಗಳು ಸಾಕಷ್ಟುಕಂಡು ಬರುತ್ತಿದ್ದು, ಇಂಥಹ ದಂಧೆಗೆ ಕೈಹಾಕಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಂತಹ ಭೂಗಳ್ಳತನ ದಂಧೆಯನ್ನು ಮಾಡಿಕೊಂಡ ತಂಡದ ವಿರುದ್ದ ನಾವು ಕೂಡಾ ಹೆಚ್ಚು ಮುತುವರ್ಜಿ ವಹಿಸಿ ಕಡಿವಾಣ ಹಾಕುವಂತಾ ಕೆಲಸ ಮಾಡುತ್ತೀದ್ದೇವೆ. ಅಲ್ಲದೇ ಇಡಿ ಜಿಲ್ಲೆಯಲ್ಲೇ ಈ ಭೂ ಮಾಫೀಯಾಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ದಲಿತ ಸಿಎಂ ಕೂಗು ನಮ್ಮ ಕೈಯಲಿಲ್ಲ: ದಲಿತ ಸಿಎಂ ಬಗ್ಗೆ ಹೇಳುವದರಿಂದ ಸುಮ್ಮನೆ ಅನಾವಶ್ಯಕ ಸಮಸ್ಯೆ ಉದ್ಭವವಾಗುತ್ತಿದೆ ಹೊರತು ಉಪಯೋಗ ಏನು ಆಗುವದಿಲ್ಲ. ಅಷ್ಟಾಗ್ಯೂ ದಲಿತ ಸಿಎಂ ಕೂಗು ನಮ್ಮ ಕೈಯಲ್ಲಿಲ್ಲ ಎಂದು ಹೇಳಿದರು.
25 ಶಾಸಕರು ನಮಗೂ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, 25 ಶಾಸಕರಿಗೆ ಸಚಿವ ಸ್ಥಾನ ಬೇಕೆನ್ನುವದರಲ್ಲಿ ತಪ್ಪೇನಿದೆ. ಅವರವರ ಅರ್ಹತೆ ನೋಡಿ ಅವರಿಗೆ ಕೊಡಬಹುದು. ಇಲ್ಲವೆಂದು ಯಾರು ಎಲ್ಲಿಯೂ ಹೇಳಿಲ್ಲ ಎಂದು ಹೇಳಿದರು.
ಖಾಲಿ ಹುದ್ದೆಗಳ ಭರ್ತಿಗೆ ಬಿಜೆಪಿ-ಕಾಂಗ್ರೆಸ್ ಸಮಸ್ಯೆಯಲ್ಲ: ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ಸಮಸ್ಯೆಯಲ್ಲ. ಇದರ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಒಂದು ಸಭೆ ಮಾಡಿದ್ದಾರೆ ಎಂದು ಹೇಳಿದರು.


