ಬೆಂಗಳೂರು : ಬೆಂಗಳೂರಿನ ಅಂತರಾಷ್ಟ್ರೀಯ ಏರ್ರ್ಫೋಟ್ ರಸ್ತೆಯ ಜಿಕೆವಿಕೆ ಕ್ಯಾಂಪ್ಸ್ನ ಡಾ.ಬಾಬು ರಾಜೇಂದ್ರ ಪ್ರಸಾದ ಇಂಟರ್ನ್ಯಾಷನಲ್ ಕನ್ವಷೇನ್ ಸೆಂಟರ್ದಲ್ಲಿ ಜರುಗಿದ ವ್ಯಾಪ್ಸ್ ಅಕ್ಷಯ ಫೌಂಡೇಶನ್ ಟ್ರಸ್ಟ್ ಬೆಳ್ಳಿಹಬ್ಬದಲ್ಲಿ ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರಿಗೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಮೋಘ ಕೊಡುಗೆಗೆ ವ್ಯಾಪ್ಸ್ ಗ್ರೂಫ್ ವಿದ್ಯಾ ವರೇಣ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿತು.
ಮೈಸೂರು ಸುತ್ತೂರುಮಠದ ಪೂಜ್ಯ ಶ್ರೀ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ಶ್ರೀ ಜಗದ್ಗುರು ನಿರ್ಮಲಾನಂದ ಸ್ವಾಮೀಜಿ, ಕರ್ನಾಟಕ ಗೌರವಾನ್ವಿತ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಡಾ. ಕೋರೆಯವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಡಾ.ಪರಿತೋಷ ಕನ್ನಿಂಗ್, ಡಾ.ಅನೀಲ ಕುಮಾರ, ಸುನೀಲ ಶಾಸ್ತ್ರಿ ಹಾಗೂ ವ್ಯಾಪ್ಸ್ ಗ್ರೂಫ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.


