This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Sports News

ಸಿಡಿಲಬ್ಬರದ ಶತತ ಗಳಿಸಿದ ರೋಹಿತ್, ಗಿಲ್! Rohit Gill scored a thunderous century!


 

ಇಂದೋರ್ :
ಭಾರತದ ಓಪನರ್ ಬ್ಯಾಟ್ಸ್ ಮನ್ ಗಳಾದ ನಾಯಕ ರೋಹಿತ್ ಶರ್ಮ ಹಾಗೂ ಶುಭ ಮನ್ ಗಿಲ್ ಅವರು ಸಿಡಿಲಬ್ಬರದ ಶತಕ ಗಳಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಇವರಿಬ್ಬರು ಮೊದಲ ವಿಕೆಟ್‌ಗೆ 212 ರನ್ ಗಳಿಸಿದ್ದಾರೆ. ರೋಹಿತ್ ಶರ್ಮ 101 ರನ್ ಗಳಿಸಿ ಔಟ್ ಆಗಿದ್ದರೆ, ಶುಭ ಮನ ಗಿಲ್ ಅವರು 112 ರನ್ ಗಳಿಸಿ ಶತಕ ಗಳಿಸಿದ್ದಾರೆ. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಒಂಬತ್ತು ರನ್ ಹಾಗೂ ಇಶಾನ್ ಕಿಶಾನ್ ಆಡುತ್ತಿದ್ದು 30 ಓವರುಗಳಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 240 ಗಳಿಸಿದೆ.

ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರು ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಶತಕ ಗಳಿಸಿದ್ದಾರೆ. ಇದರೊಂದಿಗೆ, ಈ ಮಾದರಿಯಲ್ಲಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್‌ ದಿಗ್ಗಜ ರಿಕಿ ಪಾಂಟಿಂಗ್‌ ಅವರ ದಾಖಲೆ ಸರಿಗಟ್ಟಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 234ನೇ ಇನಿಂಗ್ಸ್‌ನಲ್ಲಿ ಬ್ಯಾಟ್‌ ಬೀಸುತ್ತಿರುವ ರೋಹಿತ್‌ಗೆ ಇದು 30ನೇ ಶತಕ. ರಿಕಿ ಪಾಂಟಿಂಗ್‌ ಅವರು 375 ಪಂದ್ಯಗಳ 365 ಇನಿಂಗ್ಸ್‌ಗಳಿಂದ ಇಷ್ಟೇ ಶತಕ ಗಳಿಸಿದ್ದಾರೆ.

2020ರ ಜನವರಿ ನಂತರ ರೋಹಿತ್‌ ಬ್ಯಾಟ್‌ನಿಂದ ಏಕದಿನ ಶತಕ ಮೂಡಿಬಂದಿರಲಿಲ್ಲ.

ರೋಹಿತ್‌ ಅವರೊಂದಿಗೆ ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್‌ ನಡೆಸಿದ ಶುಭಮನ್‌ ಗಿಲ್‌ ಅವರೂ ಶತಕ ಗಳಿಸಿ ವಿಕೆಟ್‌ ಒಪ್ಪಿಸಿದರು. ಅವರು ತಾವೆದುರಿಸಿದ 72ನೇ ಎಸೆತದಲ್ಲಿ ಮೂರಂಕಿಯ ಗಡಿ ದಾಟಿದರು.

ಏಕದಿನ ಕ್ರಿಕೆಟ್‌ನಲ್ಲಿ ಕಡಿಮೆ (19) ಇನಿಂಗ್ಸ್‌ಗಳಲ್ಲಿ ಸಾವಿರ ರನ್‌ ಪೂರೈಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಗಿಲ್‌ಗೆ ಈ ಮಾದರಿಯಲ್ಲಿ ಇದು 4ನೇ ಶತಕವಾಗಿದೆ.

ರೋಹಿತ್‌ ಮತ್ತು ಗಿಲ್‌ ಮೊದಲ ವಿಕೆಟ್‌ಗೆ 212 ರನ್‌ಗಳ ಜೊತೆಯಾಟವಾಡಿದರು. ರೋಹಿತ್‌, 85 ಎಸೆತಗಳಲ್ಲಿ 6 ಬೌಂಡರಿ ಮತ್ತು 9 ಸಿಕ್ಸರ್‌ ಸಹಿತ 101 ರನ್‌ ಗಳಿಸಿ ಔಟಾದರು. ಗಿಲ್‌, 78 ಎಸೆತಗಳಲ್ಲಿ 13 ಬೌಂಡರಿ ಮತ್ತು 5 ಸಿಕ್ಸರ್‌ ಸಹಿತ 112 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಸದ್ಯ ಭಾರತ ತಂಡದ ಮೊತ್ತ 30 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 243 ರನ್‌ ಆಗಿದೆ. ವಿರಾಟ್‌ ಕೊಹ್ಲಿ (20) ಮತ್ತು ಇಶಾನ್‌ ಕಿಶನ್‌ (0) ಕ್ರೀಸ್‌ನಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಐವರು

1. ಸಚಿನ್‌ ತೆಂಡೂಲ್ಕರ್‌ (ಭಾರತ) – 452 ಇನಿಂಗ್ಸ್‌ಗಳಲ್ಲಿ 49 ಶತಕ

2. ವಿರಾಟ್ ಕೊಹ್ಲಿ (ಭಾರತ) – 261 ಇನಿಂಗ್ಸ್‌ಗಳಲ್ಲಿ 46 ಶತಕ

3. ರೋಹಿತ್‌ ಶರ್ಮಾ (ಭಾರತ) – 234 ಇನಿಂಗ್ಸ್‌ಗಳಲ್ಲಿ 30 ಶತಕ

4. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ ) – 365 ಇನಿಂಗ್ಸ್‌ಗಳಲ್ಲಿ 30 ಶತಕ

5. ಸನತ್‌ ಜಯಸೂರ್ಯ (ಶ್ರೀಲಂಕಾ) – 433 ಇನಿಂಗ್ಸ್‌ಗಳಲ್ಲಿ 28 ಶತಕ


Jana Jeevala
the authorJana Jeevala

Leave a Reply