Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೆಎಲ್‌ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಕಾಲೇಜಿನಲ್ಲಿ ಎರಡು ದಿನಗಳ ʼನ್ಯಾಷನಲ್‌ ಲಾ ಫೆಸ್ಟ್‌ʼ

ಬೆಳಗಾವಿ : ಕೆಎಲ್‌ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವತಿಯಿಂದ ಮೇ 15 ಮತ್ತು 16 ರಂದು ಬೆಳಗಾವಿಯಲ್ಲಿ “ನ್ಯಾಷನಲ್ ಲಾ ಫೆಸ್ಟ್ 2026” ಆಯೋಜಿಸಲಾಗಿದ್ದು, ಇದರ ಅಂಗವಾಗಿ ಕ್ಲೈಂಟ್ ಕನ್ಸಲ್ಟೇಶನ್ ಹಾಗೂ ಲೀಗಲ್ ಕ್ವಿಜ್ ಸ್ಪರ್ಧೆಗಳು ನಡೆಯಲಿವೆ.

ದೇಶದ ವಿವಿಧ ಭಾಗಗಳಿಂದ 16 ಕ್ಕೂ ಹೆಚ್ಚು ಕಾನೂನು ಮಹಾವಿದ್ಯಾಲಯಗಳು ಈ ಉತ್ಸವದಲ್ಲಿ ಭಾಗವಹಿಸುತ್ತಿವೆ.
ಮೇ 15 ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ  ಆರ್. ಬಿ. ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ.

ಮೇ 16 ರಂದು ಬೆಳಗಾವಿಯ ಜೆಎನ್‌ಎಂಸಿ ಆವರಣದ ಡಾ.ಎಚ್‌.ಬಿ.ರಾಜಶೇಖರ ಕನ್ವೇಷನ್‌ ಸಭಾಂಗಣದಲ್ಲಿ ಕ್ಲೈಂಟ್ ಕನ್ಸಲ್ಟೇಶನ್ ಸ್ಪರ್ಧೆಯ ಅಂತಿಮ ಹಾಗೂ ಸಮಾರೋಪ ಸಮಾರಂಭ ಜರುಗಲಿದ್ದು,ಬೆಂಗಳೂರು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಎ. ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗೋವಾದ ವಿಎಂ ಸಲಗಾಂವಕರ್‌ ಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಬಾಬಾಗೌಡ ಪಾಟೀಲ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸರ್ಕಾರದ ಮುಖ್ಯ ಸಚೇತಕರಾಗಿದ್ದ ಹಾಗೂ ಕೆಎಲ್‌ಇ ಆಡಳಿತ ಮಂಡಳಿ ಸದಸ್ಯ ಮಹಾಂತೇಶ ಎಂ. ಕವಟಗಿಮಠ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯೆ ಡಾ. ಜ್ಯೋತಿ ಜಿ. ಹಿರೇಮಠ ಹಾಗೂ ಸಂಯೋಜಕ ಡಾ. ಸಂತೋಷ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಕ್ಷ್ಮಣ ಸವದಿಯವರಿಗೆ ಸಹಕಾರ ಖಾತೆಲಕ್ಷ್ಮಣ ಸವದಿಯವರಿಗೆ ಸಹಕಾರ ಖಾತೆ ಹಂಚಿಕೆನೂತನ ಸಚಿವರಿಗೆ ಸಚಿವ ಖಾತೆ ಹಂಚಿಕೆಅಥಣಿ ಸಾಹುಕಾರ್ ಗೆ ಕೃಷಿ ಮಾರುಕಟ್ಟೆಯೊಂದಿಗೆ ಹಳೆ ಖಾತೆ ಕರ್ನಾಟಕದಲ್ಲಿ ಗುಟ್ಕಾ, ಪಾನ್‌ ಮಸಾಲಾ ಮಾರಾಟಕ್ಕೆ ಒಂದು ವರ್ಷದ ನಿಷೇಧ ; ಸರ್ಕಾರದಿಂದ ಆದೇಶಮೂವರು ಹಿರಿಯ ಸಚಿವರ ಖಾತೆ ಬದಲಾವಣೆ: ಸಂಜೆಯೊಳಗೆ ಖಾತೆ ಹಂಚಿಕೆ ಸಾಧ್ಯತೆ ?ಬೆಳಗಾವಿ ಅಭಿವೃದ್ಧಿ ಕುಂಠಿತ : ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಬೇಡಿಕೆಕರ್ನಾಟಕ ವಿಧಾನಸಭೆಗೆ ಆಗಸ್ಟ್ 14 ರಂದು ನೂತನ ಸ್ಪೀಕರ್ ಆಯ್ಕೆಹೋಟೆಲ್‌, ರೆಸ್ಟೋರೆಂಟ್‌ಗಳು, ಧಾಬಾಗಳಿಗೆ ಖಡಕ್‌ ಸೂಚನೆ ; ಆಹಾರ ಸುರಕ್ಷತೆಗೆ ಸರ್ಕಾರದಿಂದ 12 ಅಂಶಗಳ ಮಾರ್ಗಸೂಚಿಬೆಳಗಾವಿಗೆ 9 ಕಿ.ಮೀ. ಎಲಿವೇಟೆಡ್ ರೈಲು ಮಾರ್ಗ: ಕೇಂದ್ರದ ಗಮನ ಸೆಳೆಯಲು ಸಿಟಿಜನ್ ಫೋರಂ ಆಗ್ರಹ