Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಶ್ರೀ ಕ್ಷೇತ್ರ ಗೋಕರ್ಣ ದ್ವಿಭುಜ ಗಣಪ.......

ಶ್ರೀ ಕ್ಷೇತ್ರ ಗೋಕರ್ಣವು ಭೂಕೈಲಾಸ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ, ಅದಕ್ಕೆ ಬಹುಮುಖ್ಯ ಕಾರಣ ಇಲ್ಲಿರುವ ಸಾಕ್ಷಾತ್ ಪರಶಿವನ ಆತ್ಮಲಿಂಗ ರೂಪಿ ಮಹಾಬಲೇಶ್ವರ ದೇವರು , ಆ ಆತ್ಮಲಿಂಗವನ್ನು ಸ್ಥಾಪಿಸಿದ್ದೆ ಶ್ರೀ ಶಂಕರ ಸುತ ಮಹಾಗಣಪತಿ, ಸಿಟ್ಟಿನಿಂದ ರಾವಣ ತಲೆಗೆ ಗುದ್ದಿದರಿಂದ ಗಣಪನು ಒಂದಿಷ್ಟು ಹೆಜ್ಜೆ ದೂರ ಸರಿದು ಅಲ್ಲೇ ನೆಲೆನಿಂತ ಎಂಬುದು ಪುರಾಣ ಕಥನ,

ಅದಕೆ ಸಾಕ್ಷಿ ಎಂಬಂತೆ ಗಣಪನ ಶಿರದ ಮೇಲೆ ಸಣ್ಣ ಕುಳಿ ಇದೆ.
ಒಂದು ಕೈಯಲ್ಲಿ ಕಮಲ ಇನ್ನೊಂದು ಕೈಯಲ್ಲಿ ಮೋದಕ ಪಾತ್ರೆಯನ್ನು ಹಿಡಿದುಕೊಂಡು ಬಂದ ಭಕ್ತರನ್ನು ಹರಸುತ್ತ ನೆಲೆ ನಿಂತಿದ್ದಾನೆ ಮಹಾಗಣಪ.
ಶ್ರೀ ಮಹಾಬಲೇಶ್ವರ ದೇವರನ್ನು ದರ್ಶಿಸುವ, ಪೂಜಿಸುವ ಮೊದಲು ಶ್ರೀ ಮಹಾಗಣಪತಿಯನ್ನು ಪೂಜಿಸಿ, ದರ್ಶಿಸಿ ಹೋಗುವುದು ಸಂಪ್ರದಾಯ ಹಾಗೂ ಅದು ನಿಯಮವಿದ್ದಂತೆ.
ಕಳೆದ ಕೆಲ ದಿನದ ಹಿಂದಷ್ಟೇ ಶ್ರೀ ಮಹಾಗಣಪತಿ ದೇವರನ್ನು ಭಕ್ತರು ಸ್ಪರ್ಶಿಸಿ ಪೂಜಿಸುವುದು ನಿರ್ಬಂಧಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ ಪ್ರಕಾರ ಪ್ರಾಚೀನವಾದ ಶತ ಶತಮಾನಗಳ ಕಾಲದ ಈ ಶಿಲಾ ಪ್ರತಿಮೆಯು  ಸಂರಕ್ಷಣೆಯ ಹಾಗೂ ಮುಂದಿನ ದಿನದಲ್ಲಿ ಈ ದಿವ್ಯ ವಿಗ್ರಹದ ಕಳೆ ಕಾಯ್ದುಕೊಳ್ಳುವ ಸಲುವಾಗಿ ಸ್ಪರ್ಶ ದರ್ಶನವನ್ನು ನಿರ್ಬಂಧಿಸಲಾಗಿದೆ. ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಹುಟ್ಟಿ ಇಷ್ಟು ವರ್ಷ ಆ ಪ್ರಥಮ ಪೂಜಿತ ಶ್ರೀ ಮಹಾಗಣಪತಿಯನ್ನು ಸ್ಪರ್ಶಿಸಿ ಪೂಜಿಸಿದ್ದು ನಮ್ಮ ಭಾಗ್ಯ ಎಂದು ಹೇಳುವುದಕ್ಕಿಂತ ಅದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದರೇ ತಪ್ಪಾಗದು.

ಲೇಖನ : ಶ್ರೇಯಸ್ ಭಟ್ ಗೋಕರ್ಣ

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೊಸ ಬೋರ್ ವೆಲ್ ವಿಡಿಯೋ, ಫೋಟೊ, ಜಿಪಿಎಸ್ ಕಡ್ಡಾಯ: ಸಿಎಂಶ್ರೀ ಕ್ಷೇತ್ರ ಗೋಕರ್ಣ ದ್ವಿಭುಜ ಗಣಪ.......ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ; ರಾಜಕೀಯ ಹಿನ್ನಡೆಯೋ ಅಥವಾ ಲೆಕ್ಕಾಚಾರದ ನಡೆಯೋ..?ಪತ್ರಕರ್ತರ ಸೋಗಿನಲ್ಲಿ 1.60 ಲಕ್ಷ ರೂ.ಸುಲಿಗೆ: ಕೊನೆಗೂ ಯೂಟ್ಯೂಬರ್‌ಗಳ ಬಂಧನ..!!!ಕೊಲೆ ಕೇಸ್‌ನಲ್ಲಿ ಪರಾರಿಯಾಗಿದ್ದ ಆರೋಪಿ ಈಗ ಗಾಂಜಾ ಕೇಸ್‌ನಲ್ಲಿ ಸೆರೆಪ್ರಹ್ಲಾದ ಜೋಶಿಗೆ ಕೇಂದ್ರ ಶಿಕ್ಷಣ ಇಲಾಖೆ ಹೊಣೆನೀಟ್ ಪೇಪರ್ ಸೋರಿಕೆ ಪ್ರಕರಣ : ಹೋರಾಟಕ್ಕೆ ಮಣಿದ ಕೇಂದ್ರ ರಾಜ್ಯದ ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಅರಬ್ಬಿ ಸಮುದ್ರದ ಬೃಹತ್ ʼವಾಯು ಸುಳಿʼಯೇ ಪಶ್ಚಿಮ ಕರಾವಳಿ-ಗುಜರಾತ್‌ನಲ್ಲಿ ದಿಢೀರ್‌ ಮಳೆ ಆರ್ಭಟಕ್ಕೆ ಕಾರಣ; ಏನಿದು ವಾಯು ಸುಳಿ..?ಕರ್ನಾಟಕದ 17 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ; ಯೆಲ್ಲೋ ಅಲರ್ಟ್‌ ಘೋಷಣೆ