Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಎಚ್.ಕೆ.ಪಾಟೀಲ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮನವಿ

Advertisement

ಬೆಳಗಾವಿ : ರಾಜ್ಯದ ನೂತನ ಸಂಪುಟದಲ್ಲಿ ಹಿರಿಯ ರಾಜಕಾರಣಿ, ಮುತ್ಸದ್ಧಿ, ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ರಾಜಕೀಯ ಹಾದಿಯನ್ನು ಕ್ರಮಿಸುತ್ತ ಬಂದಿರುವ ಎಚ್.ಕೆ.ಪಾಟೀಲ ಅವರು ಸೇರ್ಪಡೆಯಾಗದೇ ಇರುವುದು ನಾಡಿನ ಪ್ರಜ್ಞಾವಂತ ನಾಗರಿಕರಿಗೆ ಅಚ್ಚರಿ ಹಾಗೂ  ಆಘಾತವನ್ನುಂಟು ಮಾಡಿದೆ. ವಿಶೇಷವಾಗಿ ಗಡಿನಾಡು ಹಾಗೂ ಹೊರನಾಡು ಕನ್ನಡಿಗರಿಗೆ ಮತ್ತು ಕನ್ನಡ ಪರ ಸಂಘಟನೆಗಳಿಗೆ ಭಾರಿ ನಿರಾಸೆಯನ್ನುಂಟು ಮಾಡಿದೆ ಎಂದು ಬೆಳಗಾವಿಯ ವಿವಿಧ ಕನ್ನಡ ಸಂಘಟನೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ.  

ಈ ಬಗ್ಗೆ ಬೆಳಗಾವಿಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರ ನೇತೃತ್ವದಲ್ಲಿ ಕನ್ನಡ ಸಂಘಟನೆಗಳು ಮುಖ್ಯಮಂತ್ರಿಗೆ ಮನವಿ ರವಾನೆ ಮಾಡಿವೆ.

ಗಡಿನಾಡು ಹಾಗೂ ಹೊರನಾಡು ಕನ್ನಡಿಗರ ಒತ್ತಾಯದ ಮೇರೆಗೆ 2016 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಚ್.ಕೆ. ಪಾಟೀಲ ಅವರನ್ನು ಗಡಿ ಉಸ್ತುವಾರಿ ಮಂತ್ರಿಗಳನ್ನಾಗಿ ನೇಮಕ ಮಾಡಿದ್ದರು. ನಾಡು, ನುಡಿ, ಗಡಿಯ ಸಮಸ್ಯೆಗಳ ಬಗ್ಗೆ ಆಳವಾದ ಅಭ್ಯಾಸ ಹಾಗೂ ಅಧ್ಯಯನ ಮಾಡಿರುವ ಅವರು ಕರ್ನಾಟಕದ ಗಡಿ ಭಾಗದ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಚರ್ಚಿಸುತ್ತ ಬಂದಿರುವ ಪರಿಣಾಮವಾಗಿ 2023 ರಲ್ಲಿ ಮತ್ತೆ ಅವರನ್ನೇ ಗಡಿ  ಉಸ್ತವಾರಿ ಸಚಿವರನ್ನಾಗಿ ಸಿದ್ದರಾಮಯ್ಯನವರು ನೇಮಕ ಮಾಡಿದ್ದರು. ಬೆಳಗಾವಿ  ಗಡಿ ಭಾಗದ ಕನ್ನಡ ಸಂಘಟನೆಗಳೊಂದಿಗೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿರುವ ಅವರು ರಾಜ್ಯ ರಚನೆಯಾಗಿ 70 ವರ್ಷಗಳ ನಂತರವೂ ಕನ್ನಡ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿರದ ಗ್ರಾಮಗಳಲ್ಲಿ ಶಾಲೆಗಳನ್ನು ಮಂಜೂರು ಮಾಡಿಕೊಟ್ಟರು. ರಾಜ್ಯ ರಚನೆಯಾಗಿ 70 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲು ಬೆಳಗಾವಿ ಕರ್ನಾಟಕ ರಾಜ್ಯೋತ್ಸವ ಆಚರಣೆಗಾಗಿ ತಮ್ಮ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದರು.  ಎಚ್.ಕೆ. ಪಾಟೀಲ ಅವರ ತಂದೆ, ಹುಲಕೋಟಿ ಹುಲಿ ದಿ.ಕೆ.ಎಚ್.ಪಾಟೀಲ ಅವರು 1973 ರಲ್ಲಿ ದೇವರಾಜ ಅರಸು ಸಂಪುಟದಲ್ಲಿ ಗಡಿ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಂತವರ ಪುತ್ರ ಎಚ್.ಕೆ. ಪಾಟೀಲರವರು ಕರ್ನಾಟಕ ಕಂಡ ಸಭ್ಯ ಹಾಗೂ ಸೈದ್ಧಾಂತಿಕ ರಾಜಕಾರಣಿ. ಅವರನ್ನು ಸಂಪುಟದಿಂದ ದೂರವಿಟ್ಟಿರುವುದರಿಂದ ಕರ್ನಾಟಕದ ಜನತೆಗೆ ತಪ್ಪು ಸಂದೇಶ ಹೋಗಿದೆ. ಇದನ್ನು ಸರಿಪಡಿಸುವ ಹೊಣಗಾರಿಕೆ ತಮ್ಮ ಮೇಲಿದೆ ಎಂದು ಸಂಘಟನೆಗಳು ಹೇಳಿವೆ.

ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಾವು ಸಂಪುಟದ ವಿಸ್ತರಣೆಯ ಸಂದರ್ಭದಲ್ಲಿ ಅವರನ್ನು ಮರು ಸೇರ್ಪಡೆ ಮಾಡಿಕೊಂಡು ಸೈದ್ಧಾಂತಿಕ ನೆಲಗಟ್ಟಿನ ರಾಜಕೀಯಕ್ಕೆ ಇನ್ನೂ ಆಸ್ಪದವಿದೆಯೆಂಬ ಸಂದೇಶವನ್ನು ರಾಜ್ಯದ ಜನತೆಗೆ  ಕಳಿಸಬೇಕೆಂದು ಕಳಕಳಿಯಿಂದ ಮನವಿ ಮಾಡುತ್ತೇವೆ ಎಂದು ತಿಳಿಸಿವೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿ ಮತ್ತೊಂದು ಪ್ರಕರಣ ಬಯಲಿಗೆ ಕಂಪನಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳುಎಚ್.ಕೆ.ಪಾಟೀಲ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮನವಿಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಿಎಂ ಡಿ.ಕೆ. ಶಿವಕುಮಾರ್ಈಡಿಗ ನಾಯಕ ಬಿ.ಕೆ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಸಾರಥ್ಯಸಿಎಂ ನಮನ : ವಿಧಾನಸೌಧದ ಉತ್ತರ ದ್ವಾರದ ಮೆಟ್ಟಿಲಿಗೆ ನಮಿಸಿ ಪ್ರವೇಶವಿಧಾನ ಪರಿಷತ್ ಚುನಾವಣೆ: ಹರಿಪ್ರಸಾದ್ ಸೇರಿ ನಾಲ್ವರಿಗೆ ಕಾಂಗ್ರೆಸ್ ಟಿಕೆಟ್ಸಂವಿಧಾನದ ಪ್ರತಿ ಹಿಡಿದು, ವೀರ ಗಂಗಾಧರ ಅಜ್ಜಯ್ಯ ಹೆಸರಲ್ಲಿ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನನೂತನ ಸಚಿವ ಸಂಪುಟ...ಡಿ.ಕೆ. ಶಿವಕುಮಾರ್‌ ಜೊತೆ ಪ್ರಮಾಣವಚನ ಸ್ವೀಕರಿಸುವವರು ಇವರು...ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ವೃದ್ಧೆ: ತಾಯಿಯನ್ನು ಬಿಟ್ಟು ಪರಾರಿಯಾದ ಪುತ್ರ, ವೈರಲ್ ಆಯ್ತು ವೃದ್ಧೆಯ ನೋವು – ಮಾನವೀಯತೆ ಮರೆತ ಮಗನ ವಿರುದ್ಧ ಕಠಿಣ ಕ್ರಮಕ್ಕೆ ಜನರ ಒತ್ತಾಯ