Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಶಕ್ತಿ ಯೋಜನೆ'ಗೆ ಶೀಘ್ರ ಸ್ಮಾರ್ಟ್ ಕಾರ್ಡ್

Advertisement

ಬೆಂಗಳೂರು: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ 'ಶಕ್ತಿ' ಯೋಜನೆಯಡಿ ಶೀಘ್ರದಲ್ಲಿ 'ಸ್ಮಾರ್ಟ್ ಕಾರ್ಡ್' ವಿತರಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಇದರ ಮುಂದಿನ ಹೆಜ್ಜೆಯಾಗಿ, ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ 'ಸ್ಮಾರ್ಟ್ ಕಾರ್ಡ್' ನೀಡುವ ಮೂಲಕ, 'ಶಕ್ತಿ' ಯೋಜನೆ ಸೌಲಭ್ಯ ಅರ್ಹರಿಗಷ್ಟೇ ತಲುಪಿಸುವತ್ತ ಇಲಾಖೆ ಹೆಜ್ಜೆ ಇಡತೊಡಗಿದೆ.

ನೂತನ ಸಾರಿಗೆ ಸಚಿವರಾಗಿ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸೋಮವಾರ ಕಾರ್ಯಾರಂಭ ಮಾಡಿದ ಬೈರತಿ ಸುರೇಶ್‌, ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಬಳಿಕ ಈ ಮಾಹಿತಿ ನೀಡಿದರು. 'ಶಕ್ತಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು' ಎಂದು ಅವರು ಹೇಳಿದರು.

'ಮೂರು ಕೋಟಿಗೂ ಹೆಚ್ಚು ಜನರಿಗೆ 'ಶಕ್ತಿ' ಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು. ಮಹಿಳೆಯರಿಗೆ ಈ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗುವುದು. ಪುರುಷರು 'ನಮ್ಮ ಮೆಟ್ರೊ' ಕಾರ್ಡ್ ಮಾದರಿಯಲ್ಲಿ ಹಣ ಪಾವತಿಸಿ ಈ ಕಾರ್ಡ್ ಪಡೆದುಕೊಳ್ಳಬಹುದು. ಕಾರ್ಡ್‌ನಲ್ಲಿ ಹಣ ಖಾಲಿಯಾದ ಬಳಿಕ ರೀ ಚಾರ್ಜ್ ಮಾಡಬೇಕಾಗುತ್ತದೆ' ಎಂದು ಅವರು ತಿಳಿಸಿದರು.

'ದೊಡ್ಡ ಸಂಖ್ಯೆಯಲ್ಲಿ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸಬೇಕಾದ ಅಗತ್ಯ ಇರುವುದರಿಂದ, ಅವುಗಳನ್ನು ಸಿದ್ಧಪಡಿಸಲು ಜಾಗತಿಕ ಟೆಂಡ‌ರ್ ಕರೆಯಲಾಗುವುದು. ಬಳಿಕ ಕಾರ್ಡ್ ವಿತರಿಸುವ ಪ್ರಕ್ರಿಯೆಯನ್ನು ಪೈಲಟ್ ಯೋಜನೆಯಡಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದೂ ಸಚಿವರು ತಿಳಿಸಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾರು ಚಾಲನೆ ಮಾಡಿದ ಬಾಲಕನ ತಪ್ಪಿಗೆ ಪಾಲಕರಿಗೆ  ದಂಡ ವಿಧಿಸಿದ ಪೊಲೀಸರುಮಳೆಯ ಅಬ್ಬರಕ್ಕೆ ವಿಭೂತಿ ಜಲಪಾತ ಬಂದ್‌: ಪ್ರವಾಸಿಗರ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧಶಕ್ತಿ ಯೋಜನೆ'ಗೆ ಶೀಘ್ರ ಸ್ಮಾರ್ಟ್ ಕಾರ್ಡ್ಸಿಎಂ ಡಿಕೆಶಿ ಮುಖ್ಯ ಸಲಹೆಗಾರರಾಗಿ ಚುನಾವಣಾ ತಂತ್ರಗಾರ ಸುನೀಲ್ ಕನುಗೋಳು ನೇಮಕದೀದಿ ಪಕ್ಷದಲ್ಲಿ ‘ಮಹಾಬಂಡಾಯ’ | ಸ್ಪೀಕರ್‌ಗೆ 20 ಟಿಎಂಸಿ ಸಂಸದರ ಪತ್ರ ; ಪ್ರತ್ಯೇಕ ಪಕ್ಷ ರಚಿಸುವ ಸಾಧ್ಯತೆ ; ಎನ್‌ಡಿಎ ಒಕ್ಕೂಟ ಸೇರಲು ಸಜ್ಜು ಎರಡನೇ ಹಂತದ ಸಚಿವ ಸಂಪುಟ ರಚನೆ ವೇಳೆ ಗಾಣಿಗ ಸಮಾಜದ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಅವಕಾಶ ನೀಡಲು ಗಾಣಿಗ ಮುಖಂಡರ ಮನವಿಬಣ್ಣದ ಕುಂಚದಿಂದ ಕ್ಯಾಮೆರಾದ ಕಣ್ಣಿನವರೆಗೆ  ಕರ್ನಾಟಕ ಛಾಯಾ ರತ್ನ ಪಿ.ಕೆ. ಬಡಿಗೇರ ಅವರ ಸಾಧನೆಯ ಬೆಳಕುಈಜು ಬಾರದ ಅಣ್ಣ-ತಮ್ಮ ನೀರುಪಾಲುಈಜಲು ಹೋದ ಬಾಲಕ ಸಾವುಶಿವಗಿರಿ ಸೊಸೈಟಿ : ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ