Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಯುವಜನತೆ  ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಕರೆ: ಎಸ್ಪಿ ಡಾ. ಕೆ.ರಾಮರಾಜನ್

ಬೆಳಗಾವಿ : ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸತತವಾಗಿ ಅಧ್ಯಯನ ಮಾಡಿದರೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯೆ ಹಾಗೂ ಸಂಸ್ಕಾರ ಅಳವಡಿಸಿ ಕೊಂಡರೆ ಉನ್ನತ ಸ್ಥಾನದಲ್ಲಿ ಇರಲು ಸಾಧ್ಯ  ಎಂದು ಬೆಳಗಾವಿ  ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ರಾಮರಾಜನ್ ಅಭಿಪ್ರಾಯಪಟ್ಟರು.

ನಗರದ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ ಸೋಮವಾರ 20-07-2026 ರಂದು ಬೆಳಗ್ಗೆ 9:30 ಕ್ಕೆ  ಹಮ್ಮಿಕೊಂಡ 2026- 27ನೇ ಸಾಲಿನ  ಬಿ ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ   ಸ್ವಾಗತ  ಹಾಗೂ ದೀಕ್ಷಾರಂಭ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.
ನಿರಂತರವಾಗಿ ಅಧ್ಯಯನ ಮಾಡಿದರೆ ಸುಂದರ ಜೀವನ ವಾಗುತ್ತದೆ. ಆಸಕ್ತಿ ಇರುವ ಕಾರ್ಯ ಮಾಡಬೇಕು. ಕಾಲೇಜಿನ ತರಗತಿ ಅನುಭವಗಳನ್ನು ಅನುಭವಿಸಬೇಕು.
ಶಿಕ್ಷಕರನ್ನು ಗೌರವಿಸಬೇಕು. ದಿನಾಲೂ ಹೊಸದನ್ನು ಓದಬೇಕು. ವಿದ್ಯಾರ್ಥಿಗಳು ಸಮಾಜ ಸೇವೆ ಮಾಡಬೇಕು. ಗ್ರಂಥಾಲಯ ಸದುಪಯೋಗ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಕಷ್ಟು ಅವಕಾಶಗಳು ಇವೆ. ಯುವಕರು ಕಠಿಣ ಪರಿಶ್ರಮ ಹಾಕಿದಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ದಿನಾಲೂ ದಿನಪತ್ರಿಕೆ, ವಾರಪತ್ರಿಕೆ ಮಾಸಿಕ ಪತ್ರಿಕೆ ಅಧ್ಯಯನ ಮಾಡಬೇಕು. ವಿಧದ ಕೌಶಲ್ಯಗಳನ್ನು ಹೊಂದಬೇಕು.ನಿನ್ನ ತಪ್ಪನ್ನು ನೀನೆ ತಿದ್ದಿಕೊಂಡು ಮುಂದೆ ಸಾಗಬೇಕು. ಜೀವನದಲ್ಲಿ ನಿರ್ದೇಶನ ಸರಿಯಾಗಿ ಇರಬೇಕು. ಕಾಲೇಜಿನಲ್ಲಿ ಒಳ್ಳೇಯ ಗೆಳೆಯರು ಹೊಂದಬೇಕು.
ವಿದ್ಯಾರ್ಥಿಗಳು  ದುಷ್ಟ ವ್ಯಸನಗಳಿಂದ  ದೂರ ಇರಬೇಕು ಎಂದು ಹೇಳಿದರು.

ಇಂದಿನ ಯುಗದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಮಾಹಿತಿಯ ಕೊರತೆಯಿಲ್ಲ.  ಅದನ್ನು ಸರಿಯಾಗಿ ಬಳಸುವ ವಿವೇಕ, ನೈತಿಕತೆ ಮತ್ತು ಮಾನವೀಯತೆ ಇರಬೇಕು. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಮಾತ್ರ ಕಲಿಯದೆ, ಜೀವನಕ್ಕಾಗಿ ಕಲಿಯಬೇಕು. ಪುಸ್ತಕಗಳ ಜೊತೆಗೆ ಜೀವನವನ್ನು ಅನುಭವಿಸಬೇಕು.
ವಿದ್ಯಾರ್ಥಿಗಳು ಕಲಿಯುವ ಶಿಕ್ಷಣ ನಿಮ್ಮ ಬದುಕು ಮತ್ತು ಮನೆಯ ಪರಿಸ್ಥಿತಿ ಬದಲಾಯಿಸಬೇಕು. ಜೀವನ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿ. ಇದು ಭವಿಷ್ಯದ ಮುನ್ನೋಟ, ಶೈಕ್ಷಣಿಕ ಜ್ಞಾನ , ಕೌಶಲ್ಯಗಳು  ವೃತ್ತಿಜೀವನದ ಯಶಸ್ಸಿಗೆ ಭೂಮಿಕೆಯಾಗಲಿದೆ. ಈ ಸಮಯವನ್ನು  ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ  ಪ್ರಾಚಾರ್ಯೆ ಡಾ.  ಜ್ಯೋತಿ ಕವಳೇಕರ   ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯವನ್ನು , ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಲಿದೆ.  ನೀವು ಯಾವುದೇ ಕೆಲಸ ಮಾಡಿದರೂ ಇಷ್ಟ ಪಟ್ಟು ಮಾಡಬೇಕು. ನಿಮ್ಮ ಮೇಲೆ ನಿಮಗೆ ಭರವಸೆ ಇರಲಿ. ಅದುವೇ ನಿಮ್ಮನ್ನು ಸಾಧನೆಯ ಪಥಕ್ಕೆ ಸೇರಿಸುತ್ತದೆ.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಕಾಲೇಜಿನ ನಿಯಮಗಳನ್ನು ಪಾಲಿಸಬೇಕು. ಇತಿಹಾಸದಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಇದ್ದಾರೆ. ಸಮಾಜ ಒಳ್ಳೆಯವರನ್ನು ಸದಾ ಸ್ಮರಿಸಿಕೊಳ್ಳುತ್ತದೆ. ಒಬ್ಬ ಉತ್ತಮ ವ್ಯಕ್ತಿಯಾಗಲು ಇದೊಂದು ಉತ್ತಮ ವೇದಿಕೆ. ವಿದ್ಯೆ ಜೊತೆಗೆ ಸಂಸ್ಕಾರವು ಇರಲಿ. ಗುರುವಿನ ಮಾರ್ಗದರ್ಶನದಲ್ಲಿ ಸಾಗಿದ ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಸಮಾಜಕ್ಕೆ ಒಳ್ಳೆಯವರಾಗಿ, ಉತ್ತಮ ನಾಗರಿಕರಾಗಿ ಎಂದು ಕಿವಿಮಾತು ಹೇಳಿದರು.
 
ಮಹಾವಿದ್ಯಾಲಯದ ವಾಯುದಳ ಸೈನಿಕ ದಳ ಎನ್ಎಸ್ಎಸ್ ,
ರೆಡ್ ಕ್ರಾಸ್, ಪರೀಕ್ಷಾ ವಿಭಾಗದ ವಿವಿಧ ಮಾಹಿತಿಗಳನ್ನು ಹಾಜರಾತಿ ಮಹತ್ವವನ್ನು, ಶಿಷ್ಯ ವೇತನ, ಗ್ರಂಥಾಲಯ, ಪ್ರಯೋಗಾಲಯ, ಕಿರು ಪರೀಕ್ಷೆಗಳ, ಸೆಮಿಸ್ಟರ್ ಪರೀಕ್ಷೆಗಳ ಸಮಗ್ರ ವಾದ ಮಾಹಿತಿಯನ್ನು ನೀಡಿದರು.

ಸ್ನೇಹಾ  ಪ್ರಾರ್ಥಿಸಿದರು. ಡಾ. ಶಿವಾನಂದ  ಬುಲಬುಲೆ ಸ್ವಾಗತಿಸಿ ಪ್ರಾಸ್ತಾವಿಕ, ಪರಿಚಯಿಸಿದರು. ಡಾ. ವಿನಯಕುಮಾರ್ ಎಂ. ವಂದಿಸಿದರು, ಪ್ರೊ.   ಪ್ರಾಜಕ್ತಾ ಹಾಗೂ  ಗೌರಿ  ನಿರೂಪಿಸಿದರು.

ಸಮಾರಂಭದಲ್ಲಿ ಮಹಾವಿದ್ಯಾಲಯದ ಎಲ್ಲಾ ಸಿಬ್ಬಂದಿಯವರು ಹಾಗೂ ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
RCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರು