ಬೆಳಗಾವಿ : ಬೆಳಗಾವಿ ವಕೀಲರ ಸಂಘದ ಹಿರಿಯರು, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ. ಜೆ. ಗಂಗಾಯಿ ಅವರನ್ನು
ಬೆಳಗಾವಿ ವಕೀಲರ ಸಂಘದ ಆಜೀವ ಸದಸ್ಯ, ಹಿರಿಯ ವಕೀಲ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ ಉಪ ಮಹಾಪೌರ ಹನುಮಂತ ಎ. ಕೊಂಗಾಲಿ ಸೋಮವಾರ ಆತ್ಮೀಯವಾಗಿ ಸನ್ಮಾನಿಸಿ ಶುಭಾಶಯ ಕೋರಿದರು
ಹಿರಿಯ ವಕೀಲ ಎ.ಆರ್. ಪಾಟೀಲ, ಜಗದೀಶ ಪಾಟೀಲ ಮತ್ತು ಉಪಾಧ್ಯಕ್ಷರಾದ ಮಂದ್ರೋಲಿ, ಕಳ್ಳಿಮನಿ, ಜಗದೀಶ ಯಳ್ಳೂರು ಬೆಳಗಾವಿ ವಕೀಲರ ಸಂಘದ ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.