Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಿಂಡಾಲ್ಕೋ ಕಂಪನಿಯಲ್ಲಿ ಮುತ್ಯಾನಟ್ಟಿ ಯುವಕ ಆತ್ಮಹತ್ಯೆ..!

ರಾಮಾಚಾರಿಗೆ 5 ಲಕ್ಷ ಕೊಟ್ಟರೂ ಪರ್ಮನೆಂಟ್ ಆಗದಿದ್ದಕ್ಕೆ ಪ್ರಾಣಬಿಟ್ಟ ತಳವಾರ.

ಹಿಂಡಾಲ್ಕೋ ಕಂಪನಿಯಲ್ಲಿ ಮುತ್ಯಾನಟ್ಟಿ ಯುವಕ ಆತ್ಮಹತ್ಯೆ..!

ರಾಮಾಚಾರಿಗೆ 5 ಲಕ್ಷ ಕೊಟ್ಟರೂ ಪರ್ಮನೆಂಟ್ ಆಗದಿದ್ದಕ್ಕೆ ಪ್ರಾಣಬಿಟ್ಟ ತಳವಾರ.

 

ರೊಚ್ಚಿಗೆದ್ದ ಮುತ್ಯಾನಟ್ಟಿ ಮಂದಿ, ಕಂಪನಿ ಮೇಲೆ ದಾಳಿ,  ಪುಡಿ ಪುಡಿಯಾದ ಕಚೇರಿ..?

ಬೆಳಗಾವಿ : ನೌಕರಿ ಖಾಯಂ ಗೊಳಿಸುವುದಾಗಿ ಹೇಳಿ ಯುವಕನಿಂದ ಐದು ಲಕ್ಷ ಲಪಟಾಯಿಸಿ, ಕೊನೆಗೆ ಹೆಚ್ಚಿನ ಶಿಕ್ಷಣ ಬೇಕೆಂದು ಹೇಳಿ ಹಣ ಮರಳಿಸದೆ ಯುವಕನಿಗೆ ಮೋಸ ಮಾಡಿದ್ದಕ್ಕಾಗಿ ಮನನೊಂದ ಯುವಕ ಬೆಳಗಾವಿಯ ನಗರದ ಹಿಂಡಾಲ್ಕೋ ಕಂಪನಿಯಲ್ಲಿ  ನೇಣು ಬಿಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಂದು ಬೆಳಗಿನ ಜಾವ ನಡೆದಿದೆ.

ಮುತ್ಯಾನಟ್ಟಿ ಗ್ರಾಮದ 31 ವರ್ಷದ ಶಂಕರ ತಳವಾರ ಆತ್ಮಹತ್ಯೆಗೆ ಶರಣಾದ ಯುವಕ.

ಅದೇ ಗ್ರಾಮದ ರಾಮಾಚಾರಿ ಹಾಲಭಾವಿ ಎಂಬಾತ ಯುವಕನಿಗೆ ಮೋಸ ಮಾಡಿರುವ ಆರೋಪಿ. 

ಆಗಿದ್ದೇನು..?

ಮುಖ್ಯಾನಟ್ಟಿ ಗ್ರಾಮದ ಶಂಕರ್ ತಳವಾರ ಎನ್ನುವ ಯುವಕ ನಾಲ್ಕು ವರ್ಷದ ಹಿಂದೆ ಹಿಂಡಾಲ್ಕೋ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ. ನಂತರ ಆತನನ್ನು ಅದೇ ಕಂಪನಿಯಲ್ಲಿ ಕಾಯಂಗೊಳಿಸುವುದಾಗಿ ಹೇಳಿ ಮುತ್ಯಾನಟ್ಟಿ ಗ್ರಾಮದ ರಾಮಾಚಾರಿ ಎಂಬ ಏಜೆಂಟ್ 5 ಲಕ್ಷ ಪಡೆದಿದ್ದ ಆದರೆ ಮೂರು ವರ್ಷ ಕಳೆದರೂ ಈತನ ನೌಕರಿ ಕಾಯಂ ಆಗಿರಲಿಲ್ಲ ಅದಕ್ಕಾಗಿ ಈತ ರಾಮಾಚಾರಿಗೆ ನೌಕರಿ ಕಾಯಂಗೊಳಿಸು ಇಲ್ಲ ಹಿಡಿದಿದ್ದ ಹಣ ವಾಪಸ ನೀಡುವಂತೆ ಕೇಳಿಕೊಂಡಿದ್ದ ಆದರೆ ಇದಕ್ಕೆ ರಾಮಾಚಾರಿ ಇಲ್ಲ ಸಲ್ಲದ ನೆಪ ಹೇಳಿ ಹಣ ಮರಳಿಸಲು ನಿರಾಕರಿಸಿದ್ದ. ಇತ್ತ ನೌಕರಿನೂ ಇಲ್ಲ, ಹಣವೂ ವಾಪಸ ಸಿಗದಿದ್ದಕ್ಕೆ ಮನನೊಂದು ಶಂಕರ್ ಇಂದು ಹಿಂಡಾಲ್ಕೋ ಕಂಪನಿಯಲ್ಲಿಯೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ಇತ್ತ ಯುವಕ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ತಕ್ಷಣ ಕಂಪನಿಗೆ ಬಂದ ಮುತ್ಯಾನಟ್ಟಿ ಗ್ರಾಮಸ್ಥರು ರೊಚ್ಚಿಗೆದ್ದು ಕಂಪನಿ ಮೇಲೆ ದಾರಿ ನಡೆಸಿದ್ದಾರೆ ಕಚೇರಿಗಳನ್ನು ಒಡೆದು ಧ್ವಂಸ ಮಾಡಿದ್ದಾರೆ. 

ವಿಷಯ ತಿಳಿಯುತ್ತಿದ್ದಂತೆ ಮಾಳಮಾರುತಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಗೊಳಿಸಿದ್ದಾರೆ. 

ಏಜೆಂಟ್ ರಾಮಾಚಾರಿ ನೌಕರಿ ಆಕಾಂಕ್ಷಿಗಳಾದ ಶಂಕರನಂತಹ ಹತ್ತಾರು ಯುವಕರಿಂದ ನೌಕರಿ ಖಾಯಂಗೊಳಿಸುವುದಾಗಿ ಹೇಳಿ ಸುಮಾರು 50 ಲಕ್ಷಕ್ಕೂ ಹೆಚ್ಚು ಹಣವನ್ನು ವಸೂಲಿ ಮಾಡಿರುವುದಾಗಿ ತಿಳಿದು ಬಂದಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡೇಟಿಂಗ್ ಆ್ಯಪ್‌ನಲ್ಲಿ ಸ್ನೇಹ, ಖಾಸಗಿ ಫೋಟೋಗಳಿಂದ ಬ್ಲ್ಯಾಕ್‌ಮೇಲ್: ₹6 ಕೋಟಿ ಸುಲಿಗೆ ಮಾಡಿದ ಖತರ್ನಾಕ್‌ ಮಹಿಳೆಇರಾನ್‌ ಸುಪ್ರೀಂ ಲೀಡರ್‌ ಮೊಜ್ತಬಾ ಖಮೇನಿ ಸ್ಥಿತಿ ಗಂಭೀರ ; ಆಸ್ಪತ್ರೆಗೆ ದಾಖಲು : ಇಸ್ರೇಲಿ ಮಾಧ್ಯಮ ವರದಿಎನ್‌ಕ್ರಿಪ್ಟೆಡ್‌ ಕಾಲ್‌, ರಹಸ್ಯ ಕಡತ, ತೀವ್ರ ನಿಗಾ : ಪೊಲೀಸರು ವಾಯುಪಡೆಯ ಹನಿಟ್ರ್ಯಾಪ್–ಗೂಢಚಾರಿಕೆ ಜಾಲ ಭೇದಿಸಿದ್ದು ಹೇಗೆ…?ತವರಿನಲ್ಲಿ ಸಚಿವ ಲಕ್ಷ್ಮಣ ಸವದಿಗೆ ಅದ್ಧೂರಿ ಸ್ವಾಗತ : ಭಾವುಕರಾದ ಅಥಣಿ ಸಾಹುಕಾರ್...!14ರವರೆಗೆ ದಕ್ಷಿಣ ಭಾರತದಲ್ಲಿ ಮಳೆ : ಕರ್ನಾಟಕದ ಹಲವೆಡೆ ಭಾರಿ ಮಳೆ, ಗುಡುಗು–ಮಿಂಚು, ಜೋರಾದ ಗಾಳಿ ಮುನ್ಸೂಚನೆಸಚಿವರ ನೇಮಕ : ಮಹಿಳಾ ಕೋಟಾ ಶೀಘ್ರವೇ ಆಗಲಿದೆ ಎಂದ ಲಕ್ಷ್ಮಣ ಸವದಿಅಪರೂಪದ ಮಾದರಿ ಶಿಕ್ಷಕಿ : ಜನ ಮೆಚ್ಚಿದ ಶಿಕ್ಷಕಿ ಗೀತಾ ಗಾಣಗಿ ಅವರಿಗೆ ಹೃದಯಸ್ಪರ್ಶಿ ಯಾಗಿ ಬಿಳ್ಕೊಟ್ಟ ನಾರಾಯಣ ಕೇರಿ ಗ್ರಾಮಸ್ಥರು : ಭಾವುಕರಾಗಿ ಶಿಕ್ಷಕಿಯ ಸೇವೆ ನೆನೆಸಿಕೊಂಡ ಶಿಕ್ಷಣ ಪ್ರೇಮಿಗಳುನೂತನ ಡಿಡಿಪಿಐ ಆಗಿ ಮನ್ನಿಕೇರಿ ನೇಮಕ ಯಾವುದೇ ದೇಶದ ಮೇಲೆ ದಾಳಿ ನಡೆದರೂ ಅದು ಮೂರು ದೇಶಗಳ ಮೇಲೆ ನಡೆದ ದಾಳಿ : ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಪಾಕಿಸ್ತಾನಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಭಾರತದಿಂದ ಅಧಿಕೃತ ಹೆಸರು: ಚೀನಾಕ್ಕೆ ತಿರುಗೇಟು