Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಭಾರಿ ಬೆಂಕಿ ಅವಘಡ; 68 ಪ್ರಯಾಣಿಕರ ಸ್ಥಳಾಂತರ

ಇಂದೋರ್ (ಮಧ್ಯಪ್ರದೇಶ):ತಿರುವನಂತಪುರಂ-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್‌ನ ಎಸಿ ಬೋಗಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ರೈಲು ಮಧ್ಯಪ್ರದೇಶದ ರತ್ತಂ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

68 ಪ್ರಯಾಣಿಕರಿದ್ದ ರೈಲಿನ (12431) ಬಿ-1 ಬೋಗಿಯಲ್ಲಿ ಬೆಳಿಗ್ಗೆ 5.15ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ರೈಲ್ವೆಯ ಹಿರಿಯ ವಾಣಿಜ್ಯ ವ್ಯವಸ್ಥಾಪಕಿ ಸೌರ್ಬಾ ಜೈನ್‌ ತಿಳಿಸಿದ್ದಾರೆ.

ರೈಲ್ವೆಯ ಕೋಟ ವಿಭಾಗದ ಅಡಿಯಲ್ಲಿ ಅಲೋಟ್ ಮತ್ತು ಲುನಿರಿಚಾ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ ಎಂದು ರತ್ನಂ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮುಖೇಶ್ ಕುಮಾ‌ರ್ ತಿಳಿಸಿದ್ದಾರೆ.

ಬೆಂಕಿ ಹೊತ್ತಿಕೊಂಡಿದ್ದ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಓವರ್‌ಹೆಡ್‌ ವಿದ್ಯುತ್‌ ಸರಬರಾಜನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು ಎಂದು ತಿಳಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ​ಡಾ. ಮಹಾದೇವಪ್ಪ ಮಡ್ಡೆಪ್ಪ ದಳವಾಯಿ ಪ್ರೌಢಶಾಲೆಯಲ್ಲಿ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆ: "ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ: ಡಾll ಶಿವಾನಂದ ಪಾಟೀಲ ಬೆಳಗಾವಿ ಆರ್ ಎಲ್ ಎಸ್ : ಸ್ವಾತಂತ್ರ್ಯ ದಿನಾಚರಣೆಬ್ರಿಕ್ಸ್‌ ಶೃಂಗಸಭೆಗಾಗಿ ಇರಾನ್ ಅಧ್ಯಕ್ಷರು ಭಾರತಕ್ಕೆ : ಯುದ್ಧದ ನಡುವೆ ಪೆಝೆಶ್ಕಿಯನ್ ಭೇಟಿ ಯಾಕೆ ಮಹತ್ವದ್ದು ?ಅಮಿತ್ ಶಾ ವಿರುದ್ಧದ ಹೇಳಿಕೆ: ರಾಹುಲ್ ಗಾಂಧಿಗೆ ಹಕ್ಕುಚ್ಯುತಿ ನೋಟಿಸ್, ಆ.28ರೊಳಗೆ ಉತ್ತರಿಸಲು ಲೋಕಸಭೆ ಸಚಿವಾಲಯ ಸೂಚನೆಪಾಕಿಸ್ತಾನದಿಂದ ಹಿಡಿದು ಅಮೆರಿಕದವರೆಗೆ ಜಗತ್ತು ʼಭಾರತʼವನ್ನು ಹೇಗೆ ನೋಡುತ್ತದೆ ? 36 ದೇಶಗಳ ಸಮೀಕ್ಷೆಯಲ್ಲಿ ಬಹಿರಂಗಸಿಪಿಐ ಗಡ್ಡೆಕರ್‌ಗೆ ರಾಷ್ಟ್ರಪತಿ ಹಾಗೂ ಮೂವರು ಪೊಲೀಸ್ ಅಧಿಕಾರಿಗಳಿಗೆ ಡಿಜಿ, ಐಜಿಪಿ ಪದಕಮೂವರು ಮನೆಗಳ್ಳರನ್ನು ಬಂಧಿಸಿದ ಯಮಕನಮರಡಿ ಪೊಲೀಸರುಬೆಳಗಾವಿಗೆ ಸತೀಶ, ಉತ್ತರ ಕನ್ನಡಕ್ಕೆ ಲಕ್ಷ್ಮಣ ಸವದಿ ಉಸ್ತುವಾರಿ ಸಚಿವರಾಗಿ ನೇಮಕ ಬೆಳಗಾವಿಗೆ ಸತೀಶ, ಉತ್ತರ ಕನ್ನಡಕ್ಕೆ ಲಕ್ಷ್ಮಣ ಸವದಿ ಉಸ್ತುವಾರಿ ಸಚಿವರಾಗಿ ನೇಮಕ