ಬೆಳಗಾವಿ: ನಗರದ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ದಿನಾಂಕ 15/08/2026 ರಂದು ಬೆಳಗ್ಗೆ 8:೦೦ ಗೆ 80 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಕಾಲೇಜಿನ ಆವರಣದಲ್ಲಿ 80 ನೆಯ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಜ್ಯೋತಿ ಎಸ್ ಕವಳೇಕರ ಮಾತನಾಡಿ, ಹಿಂದಿನ ಆಚರಣೆಗಿಂತ ಇಂದು ಭಿನ್ನ ಹಾಗೂ ಐತಿಹಾಸಿಕವಾಗಿದೆ. ಈ ಬಾರಿ ಸ್ವಾತಂತ್ರೋತ್ಸವವು ಒಂದೇ ಮಾತರಂ ಗೀತೆಗೆ 150 ನೇ ವರ್ಷ ಹಾಗೂ ವಿಕಸಿತ ಭಾರತ 2047 ನಿರ್ಮಾಣದಲ್ಲಿ ಯುವಶಕ್ತಿ ಎಂಬ ಎರಡು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ. ಪ್ರತಿಯೊಬ್ಬ ಭಾರತೀಯರು ಭಾರತ ದೇಶದ ಮೇಲೆ ಸ್ವಾಭಿಮಾನ ಹಾಗೂ ದೇಶಭಕ್ತಿಯನ್ನು ಇಟ್ಟುಕೊಳ್ಳಬೇಕು. ಇಂದಿನ ಯುವಕರು ಹಿಂದಿನ ಹುತಾತ್ಮರ ಹೋರಾಟದ ಹೆಜ್ಜೆಗಳನ್ನು ಮೆಲುಕು ಹಾಕಬೇಕು.ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ಜವಾಬ್ದಾರಿ ಯುವಶಕ್ತಿ ಮೇಲಿದೆ ಎಂದು ಹೇಳಿದರು.
ಕೆ ಎಲ್ ಇ ಸಂಸ್ಥೆಯ ಆಜೀವ ಸದಸ್ಯರಾದ ಎಸ್. ಜಿ. ನಂಜಪ್ಪನವರ,ಡಾ.ಸತೀಶ ಎಂ ಪಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ. ಸಿ.ಕಾಮಗೋಳ ಹಾಗೂ ಎನ್ ಸಿ ಸಿ ಅಧಿಕಾರಿ ಡಾ.ಶಿವಾನಂದ ಬುಲಬುಲಿ, ಎನ್ ಎಸ್ ಎಸ್ ಅಧಿಕಾರಿ ಪ್ರೊ.ಶಶಿಕಾಂತ ತಾರದಾಳೆ, ಸಿಬ್ಬಂದಿಗಳು ಎನ್ ಸಿ ಸಿ ಕೆಡೆಟ್ ಗಳು, ಎನ್ ಎಸ್ ಎಸ್ ಸ್ವಯಂ ಸೇವಕರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.