Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಇರಾನ್ ಯುದ್ದ : ಮತ್ತೆ ಏರಿಕೆಯಾಯ್ತು ಪೆಟ್ರೋಲ್, ಡಿಸೇಲ್ ದರ...

Advertisement

ನವದೆಹಲಿ: ಇರಾನ್ ಯುದ್ಧದ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೂ ತಟ್ಟಿದ್ದು, ಸಾರ್ವಜನಿಕ ವಲಯದ ತೈಲ ಕಂಪನಿಗಳು ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ಸುಮಾರು 90 ಪೈಸೆಗಳಷ್ಟು ಹೆಚ್ಚಳ ಮಾಡಿವೆ. ಕೇವಲ ಮೂರು ದಿನಗಳ ಅವಧಿಯಲ್ಲಿ ಇದು ಎರಡನೇ ಬಾರಿ ದರ ಪರಿಷ್ಕರಣೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ಕಳೆದ ಶುಕ್ರವಾರವಷ್ಟೇ (ಮೇ 15) ತೈಲ ಕಂಪನಿಗಳು ಪ್ರತಿ ಲೀಟರ್ ಇಂಧನಕ್ಕೆ ಬರೊಬ್ಬರಿ 3 ರೂಪಾಯಿ ಹೆಚ್ಚಳ ಮಾಡಿದ್ದವು. ಈ ಬರೆ ಮಾಸುವ ಮುನ್ನವೇ ಸಾರ್ವಜನಿಕರಿಗೆ ಮತ್ತೊಂದು ದರ ಏರಿಕೆಯ ಶಾಕ್ ನೀಡಲಾಗಿದೆ.

ರಾಜಧಾನಿ ದೆಹಲಿಯಲ್ಲಿ ದರ ವಿವರ
ಶುಕ್ರವಾರದ ದರ ಏರಿಕೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.77 ರೂ. ನಿಂದ 97.77 ರೂ.ಗೆ ಹಾಗೂ ಡೀಸೆಲ್ ಬೆಲೆ 87.67 ರೂ. ನಿಂದ 90.67 ರೂ.ಗೆ ತಲುಪಿತ್ತು. ಇದೀಗ ಮಂಗಳವಾರದ ಪರಿಷ್ಕೃತ ದರದ ಅನ್ವಯ ಪೆಟ್ರೋಲ್ ಬೆಲೆಯಲ್ಲಿ 87 ಪೈಸೆ ಏರಿಕೆಯಾಗಿದ್ದು, 98.64 ರೂ. ತಲುಪಿದೆ. ಡೀಸೆಲ್ ದರ 91 ಪೈಸೆ ಹೆಚ್ಚಳವಾಗುವುದರೊಂದಿಗೆ ಪ್ರತಿ ಲೀಟರ್‌ಗೆ 91.58 ರೂ. ಗೆ ಮುಟ್ಟಿದೆ.

ದರ ಏರಿಕೆಗೆ ಕಾರಣವೇನು?
ಪಶ್ಚಿಮ ಏಷ್ಯಾದಲ್ಲಿ, ಪ್ರಮುಖವಾಗಿ ಇರಾನ್‌ನಲ್ಲಿ ನಡೆಯುತ್ತಿರುವ ಭೀಕರ ಯುದ್ಧದಿಂದಾಗಿ ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿನೇ ದಿನೇ ಏರುತ್ತಿದೆ.

ಭಾರತವು ತನ್ನ ಇಂಧನ ಅಗತ್ಯದ ಬಹುಪಾಲು ಭಾಗವನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುವುದರಿಂದ, ಜಾಗತಿಕ ಮಾರುಕಟ್ಟೆಯ ಏರಿಳಿತಗಳು ನೇರವಾಗಿ ದೇಶದ ಮೇಲೂ ಪರಿಣಾಮ ಬೀರುತ್ತಿವೆ. ಮೂಲಗಳ ಪ್ರಕಾರ, ಕಳೆದ ವಾರ ಮಾಡಲಾದ 3 ರೂಪಾಯಿ ಏರಿಕೆಯಿಂದಲೂ ತೈಲ ಮಾರುಕಟ್ಟೆ ಕಂಪನಿಗಳ ನಷ್ಟ ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಕಳೆದ 10 ವಾರಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾಗುತ್ತಿದ್ದರೂ ಕಂಪನಿಗಳು ಹಳೇ ದರದಲ್ಲೇ ಇಂಧನ ಮಾರಾಟ ಮಾಡಿದ್ದವು. ಆದರೆ ನಷ್ಟದ ಪ್ರಮಾಣ ತಡೆಯಲು ಸಾಧ್ಯವಾಗದ ಹಂತ ತಲುಪಿದಾಗ ಈಗ ದರ ಹೆಚ್ಚಳ ಅನಿವಾರ್ಯವಾಗಿದೆ ಎನ್ನಲಾಗಿದೆ.

ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬರೆ; ಹೆಚ್ಚಿದ ಹಣದುಬ್ಬರ ಭೀತಿ
ಇಂಧನ ದರ ಏರಿಕೆಯು ಕೇವಲ ವಾಹನ ಸವಾರರಿಗಷ್ಟೇ ಅಲ್ಲದೆ, ದಿನಬಳಕೆ ವಸ್ತುಗಳ ಬೆಲೆಯ ಮೇಲೂ ನೇರ ಪರಿಣಾಮ ಬೀರಲಿದೆ. ಸಾರಿಗೆ ವೆಚ್ಚ ದುಬಾರಿಯಾಗುವುದರಿಂದ ತರಕಾರಿ, ಹಾಲು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯರಿದ್ದಾರೆ...ಏನಿದರ ಅರ್ಥ ?ವಿದ್ಯಾರ್ಥಿನಿಗೆ ಕಿರುಕುಳ: ಕವಿವಿ ಪ್ರಾಧ್ಯಾಪಕ ಡಾ. ದೇವರಾಜನ್ ತಂಗದುರೈ ಅಮಾನತುಇರಾನ್‌-ಅಮೆರಿಕ ಶಾಂತಿ ಒಪ್ಪಂದಕ್ಕೆ ಪೆಜೆಶ್ಕಿಯಾನ್-ಟ್ರಂಪ್ ಸಹಿ ; ತಕ್ಷಣದಿಂದ ಹಾರ್ಮುಜ್ ಜಲಸಂಧಿ ಓಪನ್‌ ; 14 ಅಂಶಗಳ ಒಪ್ಪಂದದಲ್ಲಿ ಏನಿದೆ?ಜಿಂಕೆಯನ್ನೇ ನುಂಗಿದ ಹೆಬ್ಬಾವು !ಪುಸ್ತಕ ಅವಲೋಕನ ಕಾರ್ಯಕ್ರಮಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..! ಶತಮಾನದ ಇತಿಹಾಸ ಹೊಂದಿದೆ ಈ ಪ್ರತಿಷ್ಠಿತ ಶಾಲೆಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!