ಕುಂದಗೋಳ: ಸಾರಿಗೆ ಬಸ್‌ನ ಕೊನೆಯ ಆಸನದಲ್ಲಿ ಕೂತಿದ್ದ ವಿದ್ಯಾರ್ಥಿ ಫಕ್ಕಿರೇಶ ಮುತ್ತಳ್ಳಿ (17) ವಾಂತಿ ಮಾಡಲು ಕಿಟಿಕಿಯಿಂದ ತಲೆ ಹೊರಗಡೆ ಚಾಚಿದಾಗ, ಟಿಪ್ಪರ್ ಲಾರಿ ಗುದ್ದಿ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ಕೊಪ್ಪದವರ ಕೆರೆ ಬಳಿ ರಸ್ತೆಯಲ್ಲಿ (ಹುಬ್ಬಳ್ಳಿ-ಲಕ್ಷ್ಮೀಶ್ವರ ಮಾರ್ಗ) ಬುಧವಾರ ಸಂಜೆ ನಡೆದಿದೆ.
ಶಿರೂರು ಗ್ರಾಮದ ಫಕ್ಕಿರೇಶ, ಹುಬ್ಬಳ್ಳಿಯ ಐಟಿಐ ಕಾಲೇಜಿನ ವಿದ್ಯಾರ್ಥಿ. ಹುಬ್ಬಳ್ಳಿಯಿಂದ ಊರಿಗೆ ಬಸ್‌ನಲ್ಲಿ ಮರಳುತ್ತಿದ್ದರು. ಟಿಪ್ಪರ್ ಲಾರಿ ಡಿಕ್ಕಿ ರಭಸಕ್ಕೆ ರುಂಡ ಮತ್ತು ಮುಂಡ ಬೇರ್ಪಟ್ಟಿವೆ. ರಸ್ತೆಯಲ್ಲಿ ರುಂಡ ಮತ್ತು ಬಸ್‌ನಲ್ಲಿ ಮುಂಡ ಬಿದ್ದಿತ್ತು. ಬಸ್ ಹುಬ್ಬಳ್ಳಿಯಿಂದ ಕುಂದಗೋಳಕ್ಕೆ, ಟಿಪ್ಪರ್ ಲಾರಿ ಕುಂದಗೋಳದಿಂದ ಹುಬ್ಬಳ್ಳಿಗೆ ಹೊರಟಿತ್ತು' ಎಂದು ಕುಂದಗೋಳ ಠಾಣೆ ಪೊಲೀಸರು ತಿಳಿಸಿದ್ದಾರೆ.