Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿ: ಬೆಂಬಲಿಗರ ಪ್ರತಿಭಟನೆ

Advertisement

ಬೆಳಗಾವಿ: ಮಾಜಿ ಡಿಸಿಎಂ ಹಾಗೂ ಹಾಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು  ಗಾಣಿಗ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ

ಬೆಳಗಾವಿಯಲ್ಲಿ ಗಾಣಿಗ ಸಮಾಜ ಮುಖಂಡರು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು‌. ಪ್ರತಿಭಟನಾ ರ್ಯಾಲಿಯನ್ನು ನಗರದ ರಾಣಿ ಚನ್ನಮ್ಮ ವೃತ್ತದಿಂದ ನಡೆಸಲಾಯಿತು. ಬಳಿಕ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಸಮಾಜದ ಮುಖಂಡರು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸಂಪುಟದ ವಿಸ್ತರಣೆಯ ವೇಳೆ ಸಚಿವ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿದರು.

ಸಂಪುಟ ವಿಸ್ತರಣೆಯ ವೇಳೆ ಗಾಣಿಗ ಸಮಾಜದ ಹಿರಿಯರಾದ ಮಾಜಿ ಡಿಸಿಎಂ ಮತ್ತು ಹಾಲಿ ಅಥಣಿಯ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು. ಕರ್ನಾಟಕದಲ್ಲಿ ಸುಮಾರು 40 ರಿಂದ 50 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಸ್ವಾತಂತ್ರ್ಯ ನಂತರ ನಮ್ಮ ಸಮಾಜಕ್ಕೆ ಇಲ್ಲಿಯವರೆಗೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸಚಿವ ಸ್ಥಾನವನ್ನು ನೀಡಿಲ್ಲ. ಒಂದು ವೇಳೆ ಗಾಣಿಗ ಸಮಾಜಕ್ಕೆ ಸಚಿವ ಸ್ಥಾನ ನೀಡದಿದ್ದರೇ, ಮುಂಬರುವ ದಿನಗಳಲ್ಲಿ ಗಾಣಿಗ ಸಮಾಜದಿಂದ ಕಠಿಣ ತಿರ್ಮಾನ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.

ಗಾಣಿಗ ಸಮಾಜದ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಈ ಸಮಾಜದವರೇ ಆದ ಲಕ್ಷ್ಮಣ ಸವದಿ ಅವರು ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ತನ್ನ ಸಂಪುಟ ವಿಸ್ತರಣೆಯಲ್ಲಿ ಲಕ್ಷ್ಮಣ ಸವದಿ ಅವರನ್ನು ಗಂಭೀರವಾಗಿ ಪರಿಗಣಿಸಬೇಕು. 

ಸಂಪೂರ್ಣ ಸಮಾಜ ಅವರ ಬೆಂಬಲಿಕ್ಕಿದು, ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೇ ರಾಜ್ಯಾದ್ಯಂತ ಗಾಣಿಗ ಸಮಾಜದಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಕೆಯನ್ನು ನೀಡಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಕ್ಷ್ಮಣ ಸವದಿ ಡಿಸಿಎಂ ಆಗಿದ್ದವರು. ಕಷ್ಟ ಕಾಲದಲ್ಲಿ ಪಕ್ಷಕ್ಕೆ ಬಂದರು. ಅವರಿಗೆ ಮಾತು ಕೊಟ್ಟಿದ್ದೆವು. ಅವರು ಕೇಳುತ್ತಿದ್ದಾರೆ" ಎಂದ ಸಿಎಂಡಾ.ಪ್ರಭಾಕರ ಕೋರೆಯವರಿಗೆ ಮಂಗಳವಾರ ಪದ್ಮಶ್ರೀ ಪ್ರಶಸ್ತಿ ಪ್ರದಾನಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ನೀಡಿ : ಗಾಣಿಗ ಸಮಾಜದ ಶಾಸಕರಿಗೆ ಸ್ಥಾನಮಾನ ನೀಡಲು ಹಕ್ಕೋತ್ತಾಯ ಮಂಡಿಸಿದ ಗಾಣಿಗ ಸಮಾಜದ ಮುಖಂಡರುಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿ: ಬೆಂಬಲಿಗರ ಪ್ರತಿಭಟನೆಇನ್ನುಂದೆ  ಗೃಹಕಚೇರಿ 'ಕೃಷ್ಣಾ' ದಲ್ಲಿ ಸಿಎಂ ಭೇಟಿ : ಸದಾಶಿವನಗರ ನಿವಾಸಕ್ಕೆ ಬಾರದಂತೆ ಮನವಿನೈಲ್ ನದಿಗೆ ಅಣೆಕಟ್ಟು ಕಥೆ...ಮುಂಗಾರಿನ ಉಲ್ಟಾ ಪಲ್ಟಾ ಆಟ : ರಾಜಸ್ಥಾನದ ಮರುಭೂಮಿ ಹಸಿರಾಗುತ್ತಿದೆ, ಮಳೆ ಬೀಳುವ ಪ್ರದೇಶಗಳು ಒಣಗುತ್ತಿವೆ ಯಾಕೆ ?ಕರ್ನಾಟಕದ 13 ಜಿಲ್ಲೆಗಳಲ್ಲಿ ಮೂರು ದಿನ ಭಾರಿ ಮಳೆ ಮುನ್ಸೂಚನೆಇದೇ ವರ್ಷದಿಂದ ವಿದ್ಯಾರ್ಥಿ ಚುನಾವಣೆ: ಪಂಚಾಯ್ತಿ, ವಾರ್ಡ್ ಮಟ್ಟದ ಗ್ಯಾರಂಟಿ ಸಮಿತಿಗಳ ರಚನೆ: ಸಿಎಂ ಡಿ.ಕೆ. ಶಿವಕುಮಾರ್ಐಪಿಎಲ್ ಅಲ್ಲ ಎಂದಿದ್ದ ಲಂಕಾ ವಿರುದ್ಧ ವೈಭವ್ ಸೇಡಿನ ಆಟ: ಲಂಕೆ ಆಟಗಾರರ ಮನೆಯಂಗಳದಲ್ಲೇ ಅಬ್ಬರಿಸಿದ ಸೂರ್ಯ...!