Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರೈತರ ಬೇಡಿಕೆ ಈಡೇರಿಸಲು ಆಗ್ರಹ

ಕಕ್ಕೇರಿ: ಖಾನಾಪುರ ತಾಲೂಕು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳು ಬರಪೀಡಿತ ಘೋಷಣೆ ಹಾಗೂ ತಕ್ಷಣ ಬರ ಪರಿಹಾರ ಹಣವನ್ನು ಮಂಜೂರು ಮಾಡಿ ಸೇರಿದಂತೆ  ರೈತರ ಹಲವಾರು ಸಮಸ್ಯೆಗಳ  ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರಿಗೆ ಮನವಿ ಪತ್ರವನ್ನು ಖಾನಾಪುರ ಗ್ರೇಡ್ 2‌. ಎಸ್ ಕೆ ತಂಗೋಳ್ಳಿ  ಇವರು ಮುಖಾಂತರ ಗುರುವಾರದಂದು  ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ ಹಾಗೂ ರೈತ ಮುಖಂಡರು ಮನವಿ ಪತ್ರ ರವಾನಿಸಿದರು.

    ರಾಜ್ಯದಲ್ಲಿ, ಹಾಗೂ ಖಾನಾಪುರ ತಾಲೂಕಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿದ್ದು ಇದರಿಂದ ಸಾಕಷ್ಟು ಬೆಳೆ ಬೆಳೆಯದೆ ಹಾನಿಯಾಗಿದ್ದು. ಇನ್ನು ಕೆಲವು ಪ್ರದೇಶಗಳಲ್ಲಿ ಬಿತ್ತನೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಖಾನಾಪುರ ತಾಲೂಕು ಹಾಗೂ ರಾಜ್ಯವನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ ಪ್ರತಿ ಎಕರೆಗೆ ಕನಿಷ್ಠ ರೂ.30,000 ರೂ ಪರಿಹಾರ ನೀಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಕೇಂದ್ರ ಫಸಲು ಭೀಮಾ ಯೋಜನೆ ಯಡಿ ಈ ಮೊದಲು ರೈತ ವಿಮಾ ಸಂಸ್ಥೆಗೆ ಹಣ ತುಂಬಿ ಬೆಳೆ ವಿಮಾ ಪರಿಹಾರ ನೀಡ ಬೇಕೆಂದು ಒತ್ತಾಯಿಸಿದರು.
ಮಹದಾಯಿ ಹೋರಾಟಗಾರರು ಹಾಗೂ ಬಿಡದಿ ಟೌನಶಿಪ ರೈತ ಹೋರಾಟಗಾರರ ಮೇಲೆ ಪೊಲೀಸ್ ಇಲಾಖೆಯಿಂದ ಸುಳ್ಳು ಪ್ರಕರಣಗಳು ದಾಖಲಿಸಿಕೊಂಡು ಎಫ್ಐ ಆರ್ ಮಾಡಿದ್ದನ್ನು ಕೂಡಲೇ ಹಿಂಪಡೆಯಬೇಕು.  ಮಲಪ್ರಭಾ ನದಿಗೆ ಆಣೆಕಟ್ಟು ಖಾನಾಪುರ ತಾಲೂಕಿನಲ್ಲಿ ನಿರ್ಮಾಣ ಮಾಡಿ ಖಾನಾಪುರ ತಾಲೂಕಿನ ರೈತ ಭೂಮಿಗಳಿಗೆ, ಕುಡಿಯಲು ನೀರಾವರಿ ಯೋಜನೆ ಜಾರಿಗೆ ಮಾಡಬೇಕು.
ಸರ್ಕಾರ ನೂತನ ವಿದ್ಯುತ್ ಖಾಸಗಿಕರಣವನ್ನು ಜಾರಿಗೆ ತಂದಿದ್ದನ್ನು ಕೈ ಬಿಟ್ಟು ಹಳೆ ವಿದ್ಯುತ್ ಕಾಯ್ದೆಯನ್ನು ಜಾರಿಗೆ ತರಬೇಕು. ರೈತರ ಬೇಡಿಕೆಗಳು ಈಡೇರಿಸದಿದ್ದಲ್ಲಿ . ವಿಧಾನಸೌಧ ಬೆಂಗಳೂರು ಚಲೋ ಚಳವಳಿ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. 
  ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷ ಕಿಶೋರ ಮಿಠಾರಿ ಮಾತನಾಡಿ. ರೈತರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ಆರೋಪಿಸಿದರು.
   ಪ್ರಾದೇಶಿಕ ಆಯುಕ್ತರು ಬೆಳಗಾವಿ, ಜಿಲ್ಲಾಧಿಕಾರಿಗಳು ಬೆಳಗಾವಿ, ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಐಜಿಪಿ ಬೆಳಗಾವಿ, ಎಸ್ ಪಿ ಬೆಳಗಾವಿ, ಸಹಾಯಕ ಕೃಷಿ ನಿರ್ದೇಶಕರು ಖಾನಾಪುರ, ಇವರೆಲ್ಲರಿಗೂ  ಮನವಿ ಪತ್ರ ಸಲ್ಲಿಸಲಾಗಿದೆ.
   ರೈತ ಮುಖಂಡರಾದ ಬಿಷ್ಟಪ್ಪ ಸುಂಬಳಿ, ಗೋಪಾಲ ಅಗಸಿಮನಿ, ಶಿವಲಿಂಗ ಚನ್ನಾಪುರ, ರುದ್ರಪ್ಪಾ ವೀರಾಪುರ, ಪುಂಡಲೀಕ ಕುರಗುಂದ, ಯಲ್ಲಪ್ಪ ಬೆಳಗಾಂಕರ, ಇತರರಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಿದ್ದರಾಮಯ್ಯರೈತರ ಬೇಡಿಕೆ ಈಡೇರಿಸಲು ಆಗ್ರಹಒಬ್ಬನನ್ನೇ ಮದುವೆಯಾದ ಮೂವರು ಸಹೋದರಿಯರು…! ವಿಡಿಯೊ ವೈರಲ್‌ ; ತೀವ್ರ ಚರ್ಚೆಗೆ ಗ್ರಾಸಮಳೆ ಕೊರತೆ : ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಹೊಸ ಬೋರ್ ವೆಲ್ ವಿಡಿಯೋ, ಫೋಟೊ, ಜಿಪಿಎಸ್ ಕಡ್ಡಾಯ: ಸಿಎಂಶ್ರೀ ಕ್ಷೇತ್ರ ಗೋಕರ್ಣ ದ್ವಿಭುಜ ಗಣಪ.......ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ; ರಾಜಕೀಯ ಹಿನ್ನಡೆಯೋ ಅಥವಾ ಲೆಕ್ಕಾಚಾರದ ನಡೆಯೋ..?ಪತ್ರಕರ್ತರ ಸೋಗಿನಲ್ಲಿ 1.60 ಲಕ್ಷ ರೂ.ಸುಲಿಗೆ: ಕೊನೆಗೂ ಯೂಟ್ಯೂಬರ್‌ಗಳ ಬಂಧನ..!!!ಕೊಲೆ ಕೇಸ್‌ನಲ್ಲಿ ಪರಾರಿಯಾಗಿದ್ದ ಆರೋಪಿ ಈಗ ಗಾಂಜಾ ಕೇಸ್‌ನಲ್ಲಿ ಸೆರೆಪ್ರಹ್ಲಾದ ಜೋಶಿಗೆ ಕೇಂದ್ರ ಶಿಕ್ಷಣ ಇಲಾಖೆ ಹೊಣೆ