Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಾಟ್ಸಾಪ್ ಜಾಗತಿಕ ಮುಖ್ಯಸ್ಥರಾಗಿ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ

ನ್ಯೂಯಾರ್ಕ್ :

ಜಾಗತಿಕ ಟೆಕ್‌ ದೈತ್ಯ  ‘ಮೆಟಾ ಪ್ಲಾಟ್‌ಫಾರ್ಮ್ಸ್’ ಭಾರತೀಯ ಫಿನ್‌ಟೆಕ್ ಸಂಸ್ಥೆಯಾದ ‘ಕ್ರೆಡ್’ (CRED) ನಲ್ಲಿ ಸರಣಿ-ಹೆಚ್ (Series H) ಹೂಡಿಕೆ ಸುತ್ತಿನ ಭಾಗವಾಗಿ ಬರೋಬ್ಬರಿ 900 ಮಿಲಿಯನ್ ಡಾಲರ್ (ಸುಮಾರು ₹8,550 ಕೋಟಿ) ಭಾರಿ ಹೂಡಿಕೆ ಮಾಡಿದೆ. ಈ ಐತಿಹಾಸಿಕ ಒಪ್ಪಂದದ ಬೆನ್ನಲ್ಲೇ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ಅವರು ವಾಟ್ಸಾಪ್‌ನ ಜಾಗತಿಕ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಕಳೆದ ಏಳು ವರ್ಷಗಳಿಂದ ಮೆಸೇಜಿಂಗ್ ದೈತ್ಯ ವಾಟ್ಸಾಪ್ ಅನ್ನು ಮುನ್ನಡೆಸುತ್ತಿದ್ದ ವಿಲ್ ಕ್ಯಾಥ್‌ಕಾರ್ಟ್ ಅವರ ಸ್ಥಾನಕ್ಕೆ ಕುನಾಲ್ ಶಾ ಅವರನ್ನು ನೇಮಕ ಮಾಡಲಾಗಿದೆ.
ಈ ಒಪ್ಪಂದದ ನಿಯಮಗಳ ಪ್ರಕಾರ, ಮೆಟಾ ಸಂಸ್ಥೆಯು ಕ್ರೆಡ್‌ನಲ್ಲಿ ಸರಿಸುಮಾರು ಶೇ. 20ರಷ್ಟು  ಪಾಲನ್ನು ಹೊಂದಲಿದೆ. ಹೊಸ ಹೂಡಿಕೆಯ ನಂತರ ಕ್ರೆಡ್ ಕಂಪನಿಯ ಒಟ್ಟು ಮೌಲ್ಯವು ₹43,239 ಕೋಟಿ (ಸುಮಾರು 4.5 ಬಿಲಿಯನ್ ಡಾಲರ್) ತಲುಪಿದೆ.
ಈ ಪ್ರಮುಖ ಬೆಳವಣಿಗೆಯಿಂದಾಗಿ ಕುನಾಲ್ ಶಾ ಅವರು ಕ್ರೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹುದ್ದೆಯಿಂದ ಕೆಳಗಿಳಿಯಲಿದ್ದು, ಮೆಟಾ ಸಂಸ್ಥೆಯ ಜಾಗತಿಕ ನಾಯಕತ್ವ ತಂಡವನ್ನು ಸೇರಲಿದ್ದಾರೆ.  ವಾಟ್ಸಾಪ್‌ನಿಂದ ಹೊರನಡೆಯಲಿರುವ ವಿಲ್ ಕ್ಯಾಥ್‌ಕಾರ್ಟ್ ಅವರು ಮೆಟಾ ಸಂಸ್ಥೆಯ ಕೃತಕ ಬುದ್ಧಿಮತ್ತೆ (AI) ಉಪಕ್ರಮಗಳ ವಿಭಾಗದಲ್ಲಿ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ವಾಟ್ಸಾಪ್ ಅನ್ನು ಮುಂದಿನ ಹಂತದ ಬೆಳವಣಿಗೆಗೆ ಕೊಂಡೊಯ್ಯುವ ಹೊಣೆಗಾರಿಕೆಯನ್ನು ಕುನಾಲ್‌ ಶಾ ನಿಭಾಯಿಸಲಿದ್ದಾರೆ ಎಂದು ಮೆಟಾ ತಿಳಿಸಿದೆ. ಪ್ರಮುಖವಾಗಿ ಜಾಹೀರಾತು ಮತ್ತು ಚಂದಾದಾರಿಕೆ (Subscription) ಉತ್ಪನ್ನಗಳ ಮೂಲಕ ವಾಟ್ಸಾಪ್ ಆದಾಯವನ್ನು ಹೆಚ್ಚಿಸುವುದು ಹಾಗೂ ಪ್ಲಾಟ್‌ಫಾರ್ಮ್‌ನಲ್ಲಿ ಎಐ (AI) ಏಜೆಂಟ್‌ಗಳನ್ನು ಸಂಯೋಜಿಸುವತ್ತ ಕುನಾಲ್ ಶಾ ಗಮನ ಹರಿಸಲಿದ್ದಾರೆ.

ಮಧ್ಯಂತರ ಸಿಇಒ:
ದೈನಂದಿನ ವ್ಯವಹಾರಗಳಿಂದ ಕುನಾಲ್ ಶಾ ಹೊರಬರುತ್ತಿದ್ದಂತೆ, 2020 ರಿಂದ ಕ್ರೆಡ್‌ನ ಕಾರ್ಯತಂತ್ರ ಮತ್ತು ಹಣಕಾಸು ವಿಭಾಗವನ್ನು ಮುನ್ನಡೆಸುತ್ತಿದ್ದ ಮಿತೇನ್ ಸಂಪತ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಧ್ಯಂತರ ಸಿಇಒ ಆಗಿ ನೇಮಕ ಮಾಡಲಾಗಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಶೇರು ಮಾರುಕಟ್ಟೆ ಪ್ರವೇಶಿಸಲು (Stock Market Listing) ಸಜ್ಜಾಗುತ್ತಿದ್ದು, ಖಾಯಂ ಮ್ಯಾನೇಜ್‌ಮೆಂಟ್ ರಚನೆಯ ಕುರಿತು ಕ್ರೆಡ್ ಮಂಡಳಿ ಮತ್ತು ನಾಯಕತ್ವ ತಂಡವು ಕೆಲಸ ಮಾಡುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಕ್ರೆಡ್ ಸಾಧನೆಯ ಹಾದಿ:
2018 ರಲ್ಲಿ ಪ್ರಾರಂಭವಾದ ಕ್ರೆಡ್, ಆರಂಭದಲ್ಲಿ ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಬಳಕೆದಾರರಿಗೆ ಬಹುಮಾನ (ರಿವಾರ್ಡ್ಸ್) ನೀಡುವ ವೇದಿಕೆಯಾಗಿ ಗುರುತಿಸಿಕೊಂಡಿತ್ತು.
ಆದರೆ ಇಂದು ಪಾವತಿಗಳು, ಸಾಲ ವಿತರಣೆ (Lending), ವಿಮೆ, ಸಂಪತ್ತು ನಿರ್ವಹಣೆ (Wealth Management) ಮತ್ತು ಲೈಫ್‌ಸ್ಟೈಲ್ ಉತ್ಪನ್ನಗಳನ್ನು ಒಳಗೊಂಡ ಬೃಹತ್ ಹಣಕಾಸು ಸೇವಾ ವೇದಿಕೆಯಾಗಿ ಬೆಳೆದಿದೆ.
ಪ್ರಸ್ತುತ ಕ್ರೆಡ್ ಸಂಸ್ಥೆಯು 1.7 ಕೋಟಿ ಮಾಸಿಕ ಸಕ್ರಿಯ ಸದಸ್ಯರನ್ನು (Monthly Active Members) ಹೊಂದಿದ್ದು, ಭಾರತದ ಒಟ್ಟು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳ ಪೈಕಿ ಶೇ. 40 ಕ್ಕಿಂತ ಹೆಚ್ಚಿನ ಪಾಲನ್ನು ನಿರ್ವಹಿಸುತ್ತಿದೆ. ಪಾಲುದಾರ ಹಣಕಾಸು ಸಂಸ್ಥೆಗಳ ಪರವಾಗಿ ಕ್ರೆಡ್‌ನ ಸಾಲದ ವ್ಯವಹಾರವು ₹24,000 ಕೋಟಿ ಮೌಲ್ಯದ ಆಸ್ತಿಯನ್ನು (AUM) ನಿರ್ವಹಿಸುತ್ತಿದೆ. ಕಂಪನಿಯು ವಾರ್ಷಿಕ ಸುಮಾರು ₹3,200 ಕೋಟಿ ಆದಾಯವನ್ನು ಗಳಿಸಿದ್ದು, ಲಾಭದಾಯಕವಾಗಿ ಹೊರಹೊಮ್ಮಿದೆ ಎಂದು ವರದಿ ಮಾಡಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆ ಮನೆಯಲ್ಲಿ ಪೊಲೀಸ್ ಅಧಿಕಾರಿ ಹತ್ಯೆ ; ಹೆಸರು ಬದಲಿಸಿಕೊಂಡು ನಕಲಿ ವೈದ್ಯನಾಗಿ ಬದುಕಿದ್ದ ಆರೋಪಿ 28 ವರ್ಷಗಳ ನಂತರ ಸೆರೆ…!ಕರ್ನಾಟಕದ 4 ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಮುನ್ಸೂಚನೆ ; ಆರೆಂಜ್‌ ಅಲರ್ಟ್‌ ಘೋಷಣೆಪುತ್ರಿಯರಿಗಾಗಿ ಜೀವನ ಮುಡಿಪಾಗಿಟ್ಟಿದ್ದ ತಂದೆ ವೃದ್ಧಾಶ್ರಮದಲ್ಲಿ ನಿಧನ ; ₹5100 ಕಳುಹಿಸಿ ವಿಡಿಯೊ ಕಾಲ್‌ನಲ್ಲಿ ಕೊನೆ ವಿದಾಯ ಹೇಳಿದ ಪುತ್ರಿಯರು...!ಯುವಜನತೆ  ಪಠ್ಯ ಮತ್ತು ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ಕುಲಪತಿ ತ್ಯಾಗರಾಜಗುರಿ, ಶಿಸ್ತು ಮತ್ತು ಸಾಧನೆಯಿಂದ ಯಶಸ್ಸು ಸಾಧ್ಯ: ಡಾ. ಸಿದ್ದು ಹುಲ್ಲೊಳ್ಳಿ  ಲಕ್ಷ್ಮೀ ಇದ್ದರೆ DK ಸಂಪುಟಕ್ಕೆ ಶೋಭೆ:  ಹೆಬ್ಬಾಳ್ಕರ್ ಯಾಕೆ ಸಂಪುಟಕ್ಕೆ ಅತ್ಯಂತ ಅವಶ್ಯಕ ಗೊತ್ತೇ ? ಬೆಳಗಾವಿಗೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದ ಮಹಾನಾಯಕಿಲಕ್ಷ್ಮೀ ಇದ್ದರೆ ಶೋಭೆ:  ಹೆಬ್ಬಾಳ್ಕರ್ ಯಾಕೆ ಸಂಪುಟಕ್ಕೆ ಅತ್ಯಂತ ಅವಶ್ಯಕ ಗೊತ್ತೇ ? ಬೆಳಗಾವಿಗೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದ ಮಹಾನಾಯಕಿಬಸ್‌ನಲ್ಲೇ ಮಹಿಳೆಗೆ ಹೃದಯಾಘಾತ ; ನೇರ ಆಸ್ಪತ್ರೆಗೆ ಬಸ್‌ ಚಲಾಯಿಸಿಕೊಂಡು ಬಂದು ಸಮಯಪ್ರಜ್ಞೆ ಮೆರೆದ ಚಾಲಕಭೀಕರ ಕೊಲೆ ; 2 ತಿಂಗಳ ಸಂಚು… ಶಿಕ್ಷಕಿಗೆ 27 ಬಾರಿ ಚಾಕುವಿನಿಂದ ಇರಿದು ಕೊಂದ ಆರೋಪಿವಿಶ್ವಾಸಾರ್ಹ ಸಾಕ್ಷ್ಯಗಳಿಲ್ಲದೆ 22 ವರ್ಷ ಜೈಲು; ಕೊಲೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ ಸುಪ್ರೀಂ ಕೋರ್ಟ್