Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಾಸ್ಯ ಬರಹಗಾರ ಎಂ.ಎಸ್. ನರಸಿಂಹಮೂರ್ತಿಗೆ ರಂಗಸೃಷ್ಟಿ ಸನ್ಮಾನ

Advertisement

ಬೆಳಗಾವಿ : ಖ್ಯಾತ ಹಾಸ್ಯ ಬರಹಗಾರ ಎಂ.ಎಸ್.ನರಸಿಂಹ ಮೂರ್ತಿ ಅವರನ್ನು ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆ ವತಿಯಿಂದ ಸೋಮವಾರ ಸನ್ಮಾನಿಸಲಾಯಿತು.

ಕನ್ನಡಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಂಗಸೃಷ್ಟಿ ಪದಾಧಿಕಾರಿಗಳು ನರಸಿಂಹಮೂರ್ತಿ ಅವರನ್ನು ಸನ್ಮಾನಿಸಿದರು. ಇದಕ್ಕೂ ಮೊದಲು, ಮಂಗಳವಾರ ಪ್ರದರ್ಶನವಾಗಲಿರುವ ಎಂ.ಎಸ್ ನರಸಿಂಹ ಮೂರ್ತಿ ಅವರ ರಚನೆಯ ಸೆಕೆಂಡ್ ಹ್ಯಾಂಡ್ ಸದಾಶಿವ ನಾಟಕದ ರಂಗತಾಲೀಮನ್ನು ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. 

ಸೆಕೆಂಡ್ ಹ್ಯಾಂಡ್ ಸದಾಶಿವ ಅಮೇರಿಕದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡ ನಾಟಕವಾಗಿದ್ದು, ರಂಗಸೃಷ್ಟಿ ತಂಡದ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಿರ್ದೇಶನ ಮತ್ತು ಅಭಿನಯ ಎರಡೂ ಅತ್ಯುತ್ತಮವಾಗಿತ್ತು. ಸ್ಥಳೀಯವಾಗಿ ಭಾಷೆಗಳನ್ನು ಬದಲಾವಣೆ ಮಾಡಿಕೊಂಡಾಗ ನಾಟಕ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರುತ್ತದೆ. ಅದನ್ನು ಇಲ್ಲಿ ಮಾಡಿರುವುದು ಶ್ಲೀಘನೀಯ ಎಂದರು. 

ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ, ಉಪಾಧ್ಯಕ್ಷರಾದ ಎಂ.ಕೆ.ಹೆಗಡೆ, ಶೈಲಜಾ ಬಿಂಗೆ, ಕಾರ್ಯದರ್ಶಿ ಶರಣಗೌಡ ಪಾಟೀಲ, ಖಜಾಂಚಿ ಶಾಂತಾ ಆಚಾರ್ಯ, ನಿರ್ದೇಶಕರಾದ ಡಾ.ರಾಮಕೃಷ್ಣ ಮರಾಠೆ, ಶಿರೀಶ ಜೋಶಿ, ಶರಣಯ್ಯ ಮಠಪತಿ, ಕನ್ನಡ ಭವನದ ಕಾರ್ಯದರ್ಶಿ ಯ.ರು.ಪಾಟೀಲ, ಕಲಾವಿದರಾದ ವಾಮನ ಮಳಗಿ, ವಿಶ್ವನಾಥ ದೇಸಾಯಿ, ಅನುಶ್ರೀ ರಘುವೀರ, ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ, ಮುಜರಾಯಿ ಇಲಾಖೆಯ ನಿವೃತ್ತ ಅಧಿಕಾರಿ ರವಿ ಕೊಟಾರಗಸ್ತಿ ಮೊದಲಾದವರು ಇದ್ದರು. 

ಸೆಕೆಂಡ್ ಹ್ಯಾಂಡ್ ಸದಾಶಿವ ಹಾಸ್ಯ ನಾಟಕ ಮಂಗಳವಾರ (ಏ.28) ಸಂಜೆ 6.30ಕ್ಕೆ ಕನ್ನಡ ಭವನದಲ್ಲಿ ಪ್ರದರ್ಶನವಾಗಲಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತದ ಶೂಟಿಂಗ್ ದಂತಕಥೆ ಜಸ್ಪಾಲ್ ರಾಣಾ 49ನೇ ವಯಸ್ಸಿನಲ್ಲೇ ನಿಧನಭಾರತದ ಶೂಟಿಂಗ್ ದಂತಕಥೆ ಜಸ್ಪಾಲ್ ರಾಣಾ 49ನೇ ವಯಸ್ಸಿನಲ್ಲೇ ನಿಧನಅಮೆರಿಕ ಪಡೆಗಳಿಂದ 4 ದಿನದಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮೂರನೇ ಹಡಗಿನ ಮೇಲೆ ಕ್ಷಿಪಣಿ ದಾಳಿಹೋಗುವಾಗ 'ಸತೀಶ್'.. ವಾಪಾಸಾಗುವಾಗ 'ಸಲೀಂ'..! ಧರ್ಮಸ್ಥಳದಲ್ಲಿ ನಡೆದ 26 ವರ್ಷಗಳ ಹಿಂದಿನ ಕರುಳಿನ ಕತೆಯ ಮಹಾ ಪವಾಡ! ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ ಭಾರತದ ಈ ಮೂರು ನಗರಗಳಲ್ಲಿ ತಾಪಮಾನ ಏರಿಕೆಪೊಲೀಸರಿಂದ ತಪ್ಪಿಸಿಕೊಳ್ಳಲು ನೀರಿಗೆ ಧುಮುಕಿ ಪಾರಾಗಲು ಯತ್ನಿಸಿದ ಭೂಪ; ಆದ್ರೆ ಹೆಡೆಮುರಿ ಕಟ್ಟಿದ ಮೊಸಳೆ !ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಅಮೆರಿಕ ಸೇನೆ ದಾಳಿ: 3 ಭಾರತೀಯರು ನಾಪತ್ತೆ ; ಅಮೆರಿಕ ರಾಯಭಾರಿಗೆ ಭಾರತ ಸಮನ್ಸ್ವಿಶ್ವಮಟ್ಟದಲ್ಲಿ ಬೆಂಗಳೂರಿಗೆ ಮತ್ತೊಂದು ಗರಿ: ‘ವಿಶ್ವದ 20 ಅತ್ಯುತ್ತಮ ಆಹಾರ ನಗರಗಳ’ ಪಟ್ಟಿಯಲ್ಲಿ 13ನೇ ಸ್ಥಾನ ; 20 ನಗರಗಳ ಪಟ್ಟಿ…ಹಾರ್ಮುಜ್‌ನಲ್ಲಿ ಅಮೆರಿಕ ಪೈಲಟ್‌ಗಳ ಜೀವ ಉಳಿಸಿದ ಡ್ರೋನ್ ಬೋಟ್ ; ಇದರ ಹಿಂದಿನ ಮಾಸ್ಟರ್‌ಮೈಂಡ್ ಭಾರತದ ಮೂಲದ ʼವಿಭವʼ ಯಾರು ?