ಬೆಳಗಾವಿ : ಕೆ ಎಲ್ ಇ ಸಂಸ್ಥೆಯ, ಬೆಳಗಾವಿ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ ಸಂವಿಧಾನ ದಿನವನ್ನು ದಿನಾಂಕ:26-11-2026 ರಂದು ಮಧ್ಯಾಹ್ನ 12:೦೦ ಕ್ಕೆ ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಸಂವಿಧಾನ ದಿನಾಚರಣೆ ಪ್ರಯುಕ್ತ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಸಂವಿಧಾನ ಗ್ರಂಥದ ಭಾವಚಿತ್ರಕ್ಕೆ ಪೂಜೆ ಕೈಂಕರ್ಯವನ್ನು ನೆರವೇರಿಸಿ ಮಾತನಾಡಿದ ಪ್ರಾಚಾರ್ಯೆ ಜ್ಯೋತಿ ಕವಳೇಕರ, ಪ್ರಜಾಪ್ರಭುತ್ವದಲ್ಲಿ ಭಾರತ ಸಂವಿಧಾನಕ್ಕೆ ಬಹಳ ಮಹತ್ತರವಾದ ಸ್ಥಾನವಿದೆ. ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯರು ಓದಿ ವಿಷಯವನ್ನು ತಿಳಿದುಕೊಳ್ಳಬೇಕು. ಅದರ ಘನತೆ ಗೌರವವನ್ನು ಕಾಪಾಡಬೇಕು. ಪ್ರತಿಯೊಬ್ಬರ ಮನೆಯಲ್ಲಿ ಸಂವಿಧಾನದ ಹೊತ್ತಿಗೆಯನ್ನು ಇಟ್ಟುಕೊಳ್ಳಬೇಕು. ಪ್ರತಿಯೊಬ್ಬ ಭಾರತೀಯರು ಸಂವಿಧಾನದಲ್ಲಿದ್ದ ಅಧಿನಿಯಮಗಳನ್ನು ಅಧ್ಯಯನ ಮಾಡಿಕೊಂಡು ಅದರ ಹಾಗೆ ಬದುಕಬೇಕೆಂದು ಕರೆ ನೀಡಿದರು.
ಎನ್ ಎಸ್ ಎಸ್ ಕಾರ್ಯಕ್ರಮಾ ಧಿಕಾರಿಯಾದ ಪ್ರೊ. ಶಶಿಕಾಂತ ತಾರದಾಳೆ,
ಎನ್ ಸಿ ಸಿ
ಅಧಿಕಾರಿ ಡಾ. ಶಿವಾನಂದ ಬುಲಬುಲಿ ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ಎನ್ ಎಸ್ ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.