Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹೊರಬಿತ್ತು ಮತ್ತೊಂದು ಅಚ್ಚರಿ ಚುನಾವಣಾ ಫಲಿತಾಂಶ

ಬೆಂಗಳೂರು : 2024 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 22 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್ 2 ಸ್ಥಾನಗಳನ್ನು ಗೆಲ್ಲಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹ ಭವಿಷ್ಯ ನುಡಿದಿದೆ.
ಟಿವಿ-ಸಿಎನ್‌ಎಕ್ಸ್ ಒಪಿನಿಯನ್‌ ಪೋಲ್‌ ಸೋಮವಾರ (ಮಾರ್ಚ್ 4) ಪ್ರಕಟವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಮತ್ತು ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಕೇವಲ ನಾಲ್ಕು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆ ಅಂದಾಜಿಸಲಾಗಿದೆ.

ಕರ್ನಾಟಕದ 28 ಸ್ಥಾನಗಳಲ್ಲಿ ಎನ್‌ಡಿಎ ಒಟ್ಟು 24 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಕಾಂಗ್ರೆಸ್ 4 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.
ಕಾಂಗ್ರೆಸ್‌ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಜಯಭೇರಿ ಬಾರಿಸಿ ರಾಜ್ಯದಲ್ಲಿ ಬಹುಮತದ ಸರ್ಕಾರ ರಚಿಸಿತ್ತು, ಆದರೆ ಲೋಕಸಭೆಯ ಸ್ಪರ್ಧೆಯಲ್ಲಿ ಕಾಂಗ್ರೆಸ್‌ ಹಿಂದುಳಿದಿದೆ.
ಕರ್ನಾಟಕದಲ್ಲಿ ಸಮೀಕ್ಷೆ ಏನು ಹೇಳುತ್ತದೆ..?
ಒಟ್ಟು ಸೀಟುಗಳು: 28
ಬಿಜೆಪಿ: 22
ಕಾಂಗ್ರೆಸ್: 04
ಜೆಡಿಎಸ್:02

ತೆಲಂಗಾಣದಲ್ಲಿ ಬಿಜೆಪಿ 5 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಬಿಜೆಪಿ: 05
ಬಿಆರ್‌ಎಸ್‌ : 02
ಕಾಂಗ್ರೆಸ್: 09
ಎಐಎಂಐಎಂ : 01

ತಮಿಳುನಾಡಿನಲ್ಲಿ, ಡಿಎಂಕೆ 20 ಸ್ಥಾನಗಳನ್ನು ಗೆಲ್ಲಬಹುದು, ಆದರೆ ಬಿಜೆಪಿ ದೊಡ್ಡ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ.
ತಮಿಳುನಾಡು+ಪುದುಚೇರಿ ಒಟ್ಟು ಸ್ಥಾನಗಳು: 40
ಡಿಎಂಕೆ: 20
ಕಾಂಗ್ರೆಸ್: 06
ಬಿಜೆಪಿ: 05
ಎಐಎಡಿಎಂಕೆ: 04
ಇತರೆ: 05

ಇಂಡಿಯಾ ಟಿವಿ ಮತ್ತು ಸಿಎನ್‌ಎಕ್ಸ್ ಸಮೀಕ್ಷೆಯು ಬಿಜೆಪಿ ಕೇರಳದಲ್ಲಿ ಮೂರು ಸ್ಥಾನಗಳನ್ನು ಗೆಲ್ಲಬಹುದು ಭವಿಷ್ಯ ನುಡಿದಿದೆ. ಇಂಡಿಯಾಟಿವಿ-ಸಿಎನ್‌ಎಕ್ಸ್ ಒಪಿನಿಯನ್‌ ಪೋಲ್‌ ಪ್ರಕಾರ, ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಮೈತ್ರಿಕೂಟ 11 ಸ್ಥಾನಗಳಲ್ಲಿ ಪ್ರಾಬಲ್ಯ ಸಾಧಿಸಬಹುದು, ಎಲ್‌ಡಿಎಫ್ ಆರು ಸ್ಥಾನಗಳಲ್ಲಿ ಗೆಲ್ಲಬಹುದು. ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಿದೆ. ತಿರುವನಂತಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೀವ ಚಂದ್ರಶೇಖರ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಕಳೆದ ಚುನಾವಣೆಯಲ್ಲಿ ಯುಡಿಎಫ್ ಕೇರಳದ 20 ಲೋಕಸಭಾ ಸ್ಥಾನಗಳ ಪೈಕಿ 19 ಸ್ಥಾನಗಳನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧಿಸಿತ್ತು.
ಕೇರಳ
ಒಟ್ಟು ಸ್ಥಾನಗಳು-20
ಯುಡಿಎಫ್‌-11 ಸ್ಥಾನಗಳು
ಬಿಜೆಪಿ-3 ಸ್ಥಾನಗಳು
ಎಲ್‌ಡಿಎಫ್‌-6 ಸ್ಥಾನಗಳು
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆಇನ್ಫೋಸಿಸ್‌ಗೆ ನೂತನ ಸಾರಥಿ: ಸಲೀಲ್ ಪಾರೇಖ್ ಸ್ಥಾನಕ್ಕೆ ಆಶಿಶ್ ಕುಮಾರ ದಾಸ್ ಸಿಇಒ ಆಗಿ ನೇಮಕಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪನೆ: ಪ್ರಧಾನಿ ಮೋದಿಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ? ಸಾರ್ವಜನಿಕರನ್ನು ಸತಾಯಿಸುತ್ತಿರುವ ಬಿ ಎಲ್ ಒ ಗಳ ವಿರುದ್ಧ ಕ್ರಮಕ್ಕೆ ಅಗ್ರಹಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ?ದೇಶಾದ್ಯಂತ ಆವರಿಸಿದ ಮೋಡಗಳು ; ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟ ; ಮುಂಗಾರು ಬಲಗೊಳ್ಳುತ್ತಿದೆ ಎಂದ ಹವಾಮಾನ ಇಲಾಖೆನೀಟ್‌ ಹೋರಾಟ : ಯುವ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಭರವಸೆ ನೀಡಿದ್ರೆ ಉಪವಾಸ ಅಂತ್ಯ ; ಕೇಂದ್ರಕ್ಕೆ ವಾಂಗ್ಚುಕ್ ಷರತ್ತುಕೋಚಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರುಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸಂಚಾರ