Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮೊಬೈಲ್ ಟಾರ್ಚ್ ಬೆಳಕಲ್ಲಿ‌ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಚಾಲನೆ....!

ಮೊಬೈಲ್ ಟಾರ್ಚ್ ಬೆಳಕಲ್ಲಿ‌ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಚಾಲನೆ....!

ಚಿಂಚೋಳಿ (ಕಲಬುರಗಿ ಜಿಲ್ಲೆ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಂಚೋಳಿ ಘಟಕದ ಬಸ್‌ ಮೊಬೈಲ್‌ ಟಾರ್ಚ್ ಬೆಳಕಿನಲ್ಲಿ ಓಡಿಸುತ್ತಿರುವುದು ಬೆಳಕಿಗೆ ಬಂದಿದೆ.

ಕಲಬುರಗಿಯಿಂದ ಚಿಂಚೋಳಿಗೆ ಬರುವ ಬಸ್ಸಿನ‌ ಹೆಡ್‌ಲೈಟ್‌ನ‌ ಮಂದ ಬೆಳಕಿನ‌ ಕಾರಣ ಮೊಬೈಲ್‌ ಟಾರ್ಚ್‌ ಹಾಕಿ‌ಕೊಂಡು ಓಡಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಾತ್ರಿ 7.30ಕ್ಕೆ ಕಲಬುರಗಿಯಿಂದ ಹೊರಟ ಬಸ್‌ ತಡರಾತ್ರಿ ಚಿಂಚೋಳಿ ತಲುಪಿತು. ಬಸ್ಸಿನಲ್ಲಿ 8 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ. ಈ ಬಸ್‌ ಕಳೆದ ಮೂರು ದಿನಗಳಿಂದ ಇದೇ ಸ್ಥಿತಿಯಲ್ಲಿ ಓಡಿಸುತ್ತಿರುವುದು ಗೋಚರಿಸಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

‘ಕಲಬುರಗಿಯಿಂದ ಚಿಂಚೋಳಿಗೆ ಬರುವ ದಿನದ ಕಡೆಯ(ಲಾಸ್ಟ್‌) ಬಸ್ ಇದಾಗಿದ್ದು, ನಿತ್ಯ ಸಂಚರಿಸುವವರು ಇದೇ ಬಸ್ ಅವಲಂಬಿಸಿದ್ದಾರೆ. ಆದರೆ, ಬಸ್ಸಿನ ಸ್ಥಿತಿ‌ಮಾತ್ರ ಅಯೋಮಯವಾಗಿದೆ’ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

‘ಕಲಬುರಗಿಯಿಂದ ಚಿಂಚೋಳಿಗೆ ಬರುವ ಲಾಸ್ಟ್‌ ಬಸ್ಸಿನ ಲೈಟ್‌ ಮಂದವಾಗಿ ಬೆಳಗುತ್ತಿರುವುದರಿಂದ ನಿರ್ವಾಹಕನ ಮೊಬೈಲ್‌ ಟಾರ್ಚ್‌ ಬೆಳಕಿನಲ್ಲಿ‌ ಚಿಂಚೋಳಿಗೆ ಬಸ್‌ ಓಡಿಸಿಕೊಂಡು ಬರುತ್ತಿರುವುದು‌ ಗಮನಕ್ಕೆ ಬಂದಿದೆ. ಬಸ್ಸಿನ ಹೆಡ್‌ಲೈಟ್‌ ತಂತಿಗಳ ಜೋಡಣೆಯಲ್ಲಿ ದೋಷವಿತ್ತು. ಸರಿಪಡಿಸಿ‌ದ್ದೇವೆ. ಆದರೆ, ಶನಿವಾರ ಲೈಟ್‌ಗಳು ಬೆಳಗದೇ ಇರುವ ಕುರಿತು ಪ್ರಯಾಣಿಕ‌ರೇ ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ನೋಡಿ ಸಂಸ್ಥೆಯ ಉನ್ನತ ಅಧಿಕಾರಿಗಳು‌ ನನ್ನೊಂದಿಗೆ ಮಾತನಾಡಿದ್ದಾರೆ. ಈ ಬಸ್‌ ಬದಲಿಸಿ‌ ಬೇರೆ ಬಸ್‌ ಹಾಕುತ್ತೇನೆ’ ಎಂದು ಘಟಕ ವ್ಯವಸ್ಥಾಪಕ ಸುರೇಶ ತೇಗಲತಿಪ್ಪಿ ಪ್ರತಿಕ್ರಿಯಿಸಿದ್ದಾರೆ.

‘ಮೊಬೈಲ್‌ ಟಾರ್ಚ್‌ ಬೆಳಿಕಿನಲ್ಲಿ ಬಸ್‌ ಓಡಿಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ’ ಎಂದು‌ ಸಾಮಾಜಿಕ‌ ಕಾರ್ಯಕರ್ತ ಹಾಗೂ ಹೋರಾಟಗಾರ ಮಾರುತಿ ಗಂಜಗಿರಿ‌ ದೂರಿದ್ದಾರೆ.

‘ಕಲ್ಯಾಣ ಕರ್ನಾಟಕ‌ ಪ್ರದೇಶ ಅಭಿವೃದ್ಧಿ‌ ಮಂಡಳಿಯ ಅನುದಾನದಿಂದ ಖರೀದಿಸಿದ ಬಸ್‌ಗಳನ್ನು ಕಲ್ಯಾಣ ಕರ್ನಾಟಕದ ಎಲ್ಲಾ ಘಟಕಗಳಿಗೆ ನೀಡಲಾಗಿದೆ. ಆದರೆ, ಚಿಂಚೋಳಿ ಮತಕ್ಷೇತ್ರದ ವ್ಯಾಪ್ತಿಯ ಘಟಕಗಳಿಗೆ ನೀಡದೇ ಮಲತಾಯಿ ಧೋರಣೆ ತಾಳಲಾಗಿದೆ. ಇದರಿಂದ ಅಧಿಕಾರಿಗಳು ಗುಜರಿಗೆ ಹಾಕುವ ಬಸ್‌ ಓಡಿಸುವುದು ಅನಿವಾರ್ಯವಾಗಿದ್ದು, ಪ್ರಯಾಣಿಕರು ಹಿಡಿ ಶಾಪಹಾಕುತ್ತಲೇ ಪ್ರಯಾಣಿಸುವ ದುಸ್ಥಿತಿ ಎದುರಾಗಿದೆ’ ಎಂದು ಬಿಜೆಪಿ‌ ಮಂಡಲ ಪ್ರಧಾನ‌ ಕಾರ್ಯದರ್ಶಿ ರಾಮರೆಡ್ಡಿ‌ ಪಾಟೀಲ ಆರೋಪಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾವತಿಸಿ ಬಸ್‌ ಪಾಸ್ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನಕಾಲಾಯ ತಸ್ಮೈ ನಮಃ !!  ಪತ್ರಿಕಾ ರಂಗದಲ್ಲೂ ತೆರೆಯ ಮರೆಗೆ ಸರಿದು ಹೋದ "ಗುರು ಸಂಪ್ರದಾಯ"!!  ಬೆಳಗಾವಿಯ ಕೆಲ ಪತ್ರಕರ್ತರು ವ್ಯಾಟ್ಸಪ್ ಗ್ರುಪ್ ಗಳಲ್ಲಿ ಪರಸ್ಪರರು " ಅಣ್ಣಾ" ಎಂದು ಸಂಬೋಧನೆ ಮಾಡುವ ರೀತಿ...ಕರ್ನಾಟಕ ಪರ ಗೊತ್ತುವಳಿ : ವರದಿ ಕೇಳಿದ ಸರ್ಕಾರ33 ದಿನಗಳ ಶಿವಯೋಗ ಸಮಾಧಿಯಿಂದ ಹೊರಬಂಧ ರಾಚೋಟೀಶ್ವರ ಶ್ರೀಕಾಲ್ನಡಿಗೆಯಲ್ಲೇ ತಿರುಪತಿಯ ತಿರುಮಲ ಬೆಟ್ಟದ 3550 ಮೆಟ್ಟಿಲು ಏರಿದ ಕರ್ನಾಟಕದ 116 ವರ್ಷದ ವೃದ್ಧೆ !ಬಾಲಕಿಗೆ ಲೈಂಗಿಕ ಕಿರುಕುಳ, ಎಸ್‌ಐ ಬಂಧನಮೊಬೈಲ್ ಟಾರ್ಚ್ ಬೆಳಕಲ್ಲಿ‌ ಸರಕಾರಿ ಬಸ್ ಚಾಲನೆ....!ಮೊಬೈಲ್ ಟಾರ್ಚ್ ಬೆಳಕಲ್ಲಿ‌ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಚಾಲನೆ....!ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮತ್ತಷ್ಟು ಜೋರು ; 4 ದಿನ ಭಾರೀ ಮಳೆವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ- ಕಾಸರಗೋಡು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ: ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾದ ಮಾದರಿಯಲ್ಲಿ  ಕನ್ನಡ ಎಂ.ಎ ಶಿಕ್ಷಣ