This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಸಾಂಬ್ರಾ ಜನರಿಗೆ ಗುಡ್ ನ್ಯೂಸ್: ಗ್ರಾಮ ಒನ್ ಕೇಂದ್ರ ಉದ್ಘಾಟಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ Good news for people of Sambra: MLA Lakshmi Hebbalkar inaugurates Village One Centre.


 

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದಲ್ಲಿ ನೂತನ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರವನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ಉದ್ಘಾಟಿಸಿದರು.

ಈ ಸೇವಾ ಕೇಂದ್ರದ ಮೂಲಕ ಸಾರ್ವಜನಿಕರು ಹತ್ತಾರು ರೀತಿಯ ಸೇವೆಗಳನ್ನು ಪಡೆಯಬಹುದು. ವಿವಿಧ ಬಗೆಯ ಪ್ರಮಾಣ ಪತ್ರಗಳು, ಬಸ್, ರೈಲ್ವೇ ಹಾಗೂ ವಿಮಾನ ಟಿಕೆಟ್ ಗಳನ್ನು ಪಡೆಯಬಹುದು., ಎಲ್ಲ ತರಹದ ಆನ್ ಲೈನ್ ಅರ್ಜಿಗಳನ್ನು ಭರ್ತಿ ಮಾಡಬಹುದು. ಇದರಿಂದಾಗಿ ಜನರ ಶ್ರಮ, ಸಮಯ ಉಳಿತಾಯವಾಗಲಿದೆ. ಇದನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಶಿವಕುಮಾರ ಬ್ಯಾಹಟ್ಟಿ, ರೂಪಾ ಶಿ ಬ್ಯಾಹಟ್ಟಿ, ಬಸಲಿಂಗಪ್ಪ ಅಕ್ಕತಂಗೇರಹಾಳ, ಗಂಗಾಧರ್ ತಿಮ್ಮಾಪೂರಮಠ್ ಮುಂತಾದವರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply