ಹೈದರಾಬಾದ್: ಹೈದರಾಬಾದ್ ತೆಲಂಗಾಣ ಮತ್ತು ಆಂಧ್ರಪ್ರದೇಶದ ಅಧಿಕೃತ ಜಂಟಿ ರಾಜಧಾನಿ ಎಂಬ ಹಣೆಪಟ್ಟ ಕಳೆದುಕೊಂಡಿದೆ.
ತೆಲಂಗಾಣವು ಆಂಧ್ರದಿಂದ ವಿಭಜನೆಗೊಂಡಾಗ ಹೈದರಾಬಾದ್ ನಗರವು 10 ವರ್ಷಕ್ಕೆ ಮೀರದಂತೆ ತೆಲಂಗಾಣ ಹಾಗೂ ಆಂಧ್ರದ ಜಂಟಿ ರಾಜಧಾನಿ ಆಗಿರಬೇಕು ಎಂಬ ಕಾಯ್ದೆ ರೂಪಿಸಲಾಗಿತ್ತು. ತೆಲಂಗಾಣ ರಚನೆ ಆಗಿ ಭಾನುವಾರ 10 ವರ್ಷ ಆದ ಕಾರಣ ಹೈದರಾಬಾದ್ ಈಗ ಕೇವಲ ತೆಲಂಗಾಣ ರಾಜಧಾನಿಯಾಗಿ ಮುಂದುವರಿಯಲಿದೆ.
ಅವಿಭಜಿತ ಆಂಧ್ರಪ್ರದೇಶಕ್ಕೆ ರಾಜಧಾನಿಯಾಗಿದ್ದ ಹೈದರಾಬಾದ್ ಕೇವಲ ತೆಲಂಗಾಣಕ್ಕೆ ಮಾತ್ರ ರಾಜಧಾನಿಯಾಗಿ ಉಳಿದಿದೆ. 2014ರಲ್ಲಿ ಆಂಧ್ರ ವಿಭಜನೆಗೊಂಡು ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯಾಗಿದ್ದ ಸಂದರ್ಭದಲ್ಲಿ 10 ವರ್ಷಗಳಿಗೆ ಅನ್ವಯವಾಗುವಂತೆ ಹೈದರಾಬಾದ್ ಅನ್ನು ಎರಡೂ ರಾಜ್ಯಗಳಿಗೆ ರಾಜಧಾನಿ ಎಂದು ನಿರ್ಣಯಿಸಲಾಗಿತ್ತು. ಅದರಂತೆ ಜೂ.2ರಿಂದ ಅನ್ವಯವಾಗುವಂತೆ ಮುತ್ತಿನ ನಗರಿ ಕೇವಲ ತೆಲಂಗಾಣಕ್ಕೆ ರಾಜಧಾನಿಯಾಗಿ ಮುಂದುವರಿಯಲಿದೆ.