ಗೊಲ್ಲಪ್ರೋಲು: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ತಮ್ಮ ಸಂಬಳ ಮತ್ತು ಕಚೇರಿಗೆ ಒದಗಿಸುವ ಹೊಸ ಪೀಠೋಪಕರಣಗಳು ಸೇರಿದಂತೆ ಯಾವುದೇ ವಿಶೇಷ ಭತ್ಯೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಇತ್ತೀಚೆಗೆ ಅಧಿಕಾರಿಗಳು ತಮ್ಮ ಕಚೇರಿ ನವೀಕರಣ ಕುರಿತು ಪವನ್ ಕಲ್ಯಾಣ್ ಅವರೊಂದಿಗೆ ಚರ್ಚಿಸಿದಾಗ ಪವನ್ ವಿಶೇಷ ಸೌಲಭ್ಯಗಳನ್ನು ತಿರಸ್ಕರಿಸಿದ್ದಾರೆ. ಜತೆಗೆ ಅವರ ಹುದ್ದೆಗೆ ನೀಡುವ ಸಂಬಳವನ್ನೂ ನಿರಾಕರಿಸಿದ್ದಾರೆ ಎನ್ನಲಾಗಿದೆ.
ತಮ್ಮ ಕಚೇರಿಗೆ ಅಗತ್ಯವಿದ್ದರೆ ಪೀಠೋಪಕರಣಗಳನ್ನು ಸ್ವಂತ ಖರ್ಚಿನಲ್ಲಿ ಭರಿಸುವುದಾಗಿ ಹೇಳಿದ್ದಾರೆ. ಪಿಂಚಣಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಪವನ್ ಅವರನ್ನು ಭೇಟಿಯಾಗಿ ಅವರಿಗೆ ಅಗತ್ಯವಿರುವ ಸೌಕರ್ಯ ಹಾಗೂ ವಿಶೇಷ ಭತ್ಯೆ ಒದಗಿಸುವ ಕುರಿತು ಚರ್ಚಿಸಲು ಅಧಿಕಾರಿಗಳು ಬಂದಿದ್ದರು. ಈ ವೇಳೆ ಪವನ್ ಕಲ್ಯಾಣ್
ಹಣದ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಸದನಕ್ಕೆ ಹಾಜರಾಗಲು ನೀಡುವ ವಿಶೇಷ ಭತ್ಯೆವನ್ನು ನಿರಾಕರಿಸಿರುವ ಪಂಚಾಯತ್ ರಾಜ್ ಸಚಿವರೂ ಆಗಿರುವ ಪವನ್, ಇಲಾಖೆಯಲ್ಲಿ ಹಣದ ಕೊರತೆ ಎದುರಾಗಿದೆ ಎಂದು ಒತ್ತಿ ಹೇಳಿದ್ದಾರೆ.