ತಿರುವನಂತಪುರ :
ಭಾರತ ಎದುರು ಶ್ರೀಲಂಕಾ ಇಂದು ನಡೆದ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ 317 ರನ್ ಗಳ ಬಹುದೊಡ್ಡ ಅಂತರದಿಂದ ಸೋಲು ಅನುಭವಿಸಿದೆ.
ಶ್ರೀಲಂಕಾ ತಂಡದ ಶನಕ, ರಜಿತ ಹಾಗೂ ಫರ್ನಾಂಡೊ ಹೊರತುಪಡಿಸಿದರೆ ಎಲ್ಲಾ ಆಟಗಾರರು ಒಂದಂಕಿ ರನ್ ದಾಟಲಿಲ್ಲ.
ಶ್ರೀಲಂಕಾ 317 ರನ್ ಅಂತರದಿಂದ ಸೋಲು ಅನುಭವಿಸಿತು. ಭಾರತೀಯ ಬೌಲರ್ ಮಹಮ್ಮದ್ ಸಿರಾಜ್ ಅವರ ನಾಲ್ಕು ವಿಕೆಟ್ ಪಡೆದರು. ಅವರ ಮಾರಕ ದಾಳಿಗೆ ತತ್ತರಿಸಿದ ಲಂಕೆ ಹೀನಾಯ ಸೋಲು ಕಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ ಅವರ ಅಮೋಘ ಶತಕಗಳ ನೆರವಿನಿಂದ 390 ರನ್ ಕಲೆ ಹಾಕಿತ್ತು.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾ ಇತಿಹಾಸ ಸೃಷ್ಟಿಸಿದೆ. ಶ್ರೀಲಂಕಾ ವಿರುದ್ಧದ 3 ನೇ ಏಕದಿನ ಪಂದ್ಯವನ್ನು 317 ರನ್ಗಳ ಅಂತರದಿಂದ ಗೆದ್ದುಕೊಂಡಿದೆ. 391 ರನ್ಗಳೊಂದಿಗೆ ಕಣಕ್ಕೆ ಇಳಿದ ಶ್ರೀಲಂಕಾ , 73 ರನ್ಗಳಿಗೆ ಆಲೌಟ್ ಆಯಿತು . ಇದಕ್ಕೂ ಮುನ್ನ ನ್ಯೂಜಿಲೆಂಡ್ ತಂಡವು ಐರ್ಲೆಂಡ್ ವಿರುದ್ಧ 290 ರನ್ ಗಳ ಜಯ ಸಾಧಿಸಿತ್ತು . ಈಗ ಈ ದಾಖಲೆಯನ್ನು ಭಾರತ ಮುರಿದಿದೆ . ಭಾರತ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿದೆ .