This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Sports News

ಗಿಲ್ ಮತ್ತೊಂದು ಭರ್ಜರಿ ಶತಕ Another great century from Gill


 

ಹೈದರಾಬಾದ್ :                                                ಭಾರತ ಕ್ರಿಕೆಟ್ ತಂಡದ ಆರಂಭಿಕ
ಬ್ಯಾಟ್ಸ್ ಮನ್ ಶುಭಮನ್ ಗಿಲ್ ಸತತ ಎರಡನೇ ಶತಕ ಸಾಧನೆ ಮಾಡಿದ್ದಾರೆ.
ಹೈದರಾಬಾದ್‌ನಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಗಿಲ್ ಅಮೋಘ ಶತಕ ಗಳಿಸಿದರು.

ಈ ಮೂಲಕ ಏಕದಿನದಲ್ಲಿ ಅತಿ ವೇಗದಲ್ಲಿ ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟರ್ ಎನಿಸಿದ್ದಾರೆ.

ಇದೀಗಷ್ಟೇ ಅಂತ್ಯಗೊಂಡ ಶ್ರೀಲಂಕಾ ವಿರುದ್ಧ ತಿರುವನಂತಪುರದಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲೂ ಗಿಲ್ ಸೆಂಚುರಿ ಬಾರಿಸಿದ್ದರು.

ಅಮೋಘ ಬ್ಯಾಟಿಂಗ್ ಲಯ ಮುಂದುವರಿಸಿದ ಗಿಲ್, 86 ಎಸೆತಗಳಲ್ಲಿ ಶತಕ ಗಳಿಸಿದರು. ಈ ಮೂಲಕ ನ್ಯೂಜಿಲೆಂಡ್ ಬೌಲರ್‌ಗಳನ್ನು ಕಾಡಿದರು.

19 ಇನ್ನಿಂಗ್ಸ್‌ಗಳಲ್ಲಿ 3ನೇ ಶತಕ…

ಶುಭಮನ್ ಗಿಲ್, ಏಕದಿನದಲ್ಲಿ 19 ಇನ್ನಿಂಗ್ಸ್‌ಗಳಲ್ಲಿ ಮೂರನೇ ಶತಕ ಸಾಧನೆ ಮಾಡಿದ್ದಾರೆ. ಇತ್ತೀಚಿನ ವರದಿಗಳ ವರದಿಗಳ ಪ್ರಕಾರ ಗಿಲ್ 158 ರನ್ ಗಳಿಸಿ ಆಟವಾಡುತ್ತಿದ್ದಾರೆ.

ಈ ಮೊದಲು ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ರೋಹಿತ್ ಶರ್ಮಾ 34, ವಿರಾಟ್ ಕೊಹ್ಲಿ 8, ಇಶಾನ್ ಕಿಶನ್ 5 ಮತ್ತು ಸೂರ್ಯಕುಮಾರ್ ಯಾದವ್ 31 ರನ್ ಗಳಿಸಿ ಔಟ್ ಆದರು.


Jana Jeevala
the authorJana Jeevala

Leave a Reply