ಜನ ಜೀವಾಳ ಜಾಲ: ಬೆಳಗಾವಿ :
ಎರೆ…ಎರೆ ಪೌಸಾ…!
ತುಲಾ ದೇತೋ ಪೈಸಾ…!!
ಅಮಚಾ ವೋಟ್ ನೋಟಾ…!
ಜಗದೀಶ ಶೆಟ್ಟರ್ ಖೋಟಾ…!!!
ಇದು ವ್ಯಂಗ್ಯಭರಿತ ಹಾಡು. ಬೆಳಗಾವಿ ಜನ ಕಟ್ಟಿದ ಗೀತೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇದೀಗ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ಸ್ಪರ್ಧೆಗೆ ಅಣಿಯಾಗಿದ್ದಾರೆ. ಆದರೆ, ಅವರ ವಿರುದ್ಧ ಬಿಜೆಪಿ ನಾಯಕರು ಹಾಗೂ ಜನತೆ ಸಿಡಿದೆದ್ದಿದ್ದು ಅವರ ವಿರುದ್ಧ ಟೀಕೆ ಮಾಡುವ, ವ್ಯಂಗ್ಯಭರಿತ ಪ್ರಾಸಬದ್ಧ ಗೀತೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಮ್ಮ ಮತ ಖೋಟಾ, ನಮ್ಮ ಮತ ನೋಟಾ ಎಂಬ ಸಂದೇಶ ವೈರಲ್ ಮಾಡಲಾಗಿದೆ.
ಬೆಳಗಾವಿ ಕ್ಷೇತ್ರಕ್ಕೆ ಸಂಬಂಧ ಪಡದೆ ಇರುವ ಜಗದೀಶ ಶೆಟ್ಟರ್ ಅವರನ್ನು ಬೆಳಗಾವಿಗೆ ಕರೆ ತರಬೇಡಿ ಎಂಬ ಅಭಿಯಾನವನ್ನು ಈ ಮೂಲಕ ಮಾಡಲಾಗಿದೆ.
ಒಟ್ಟಾರೆ ಈ ಬಾರಿ ಬಿಜೆಪಿ ಪಾಳಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು ಬೆಳಗಾವಿ ಬಿಜೆಪಿ ಬೆಂಬಲಿಗರು ಭ್ರಮನಿರಸನಗೊಂಡಿದ್ದಾರೆ. ಶೆಟ್ಟರ್ ಹೆಸರು ಘೋಷಣೆಯಾಗುವ ಮುನ್ನವೇ ಅಸಮಾಧಾನ ಭುಗಿಲೆದಿದ್ದು ಬಿಜೆಪಿ ಪಾಲಿಗೆ ಬೆಳಗಾವಿ ಲೋಕಸಭಾ ಕ್ಷೇತ್ರ ಈ ಸಲ ಕಬ್ಬಿಣದ ಕಡಲೆಯಾಗುವುದು ಖಚಿತ ಎನಿಸಿದೆ.
ಅಭಿಯಾನವೂ ಬಲುಜೋರು..! ಶೆಟ್ಟರ್ ವಿರುದ್ಧ ಸಿಡಿದು ಗೀತೆ ರಚಿಸಿದ ಬೆಳಗಾವಿಗರು !
