ನವದೆಹಲಿ: ಈ ವರ್ಷ ದೇಶದಲ್ಲಿ ನೈರುತ್ಯ ಮುಂಗಾರು ಹಂಗಾಮಿನ (ಜೂನ್ನಿಂದ ಸೆಪ್ಟೆಂಬರ್) ಮಳೆಯು ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.
ಈ ಹಂಗಾಮಿನಲ್ಲಿ ಭಾರತವು ಸರಾಸರಿ 80 ಸೆಂ.ಮೀ. ಮಳೆಯನ್ನು ಪಡೆಯುವ ಸಾಧ್ಯತೆಯಿದೆ. ಆದರೆ, ಈ ಅವಧಿಯಲ್ಲಿ ಭಾರತದ ಸರಾಸರಿ ಮಳೆ 87 ಸೆಂ.ಮೀ. ಆಗಿದೆ. ಜಾಗತಿಕವಾಗಿ ಎಲ್ ನಿನೊ ಪರಿಸ್ಥಿತಿಯ ಉದ್ಭವಿಸಿರುವುದು, ದೇಶದಲ್ಲಿ ಕಡಿಮೆ ಮಳೆಗೆ ಕಾರಣವಾಗುತ್ತಿದೆ. ಹವಾಮಾನ ಮಾದರಿಗಳ ಪ್ರಕಾರ, ಜೂನ್ ತಿಂಗಳ ಸುಮಾರಿಗೆ ಎಲ್ ನಿನೊ ಪರಿಸ್ಥಿತಿಗಳು ಕಂಡುಬರುವ ಸಾಧ್ಯತೆಯಿದೆ.


