ಕಾಕತಿ ಅರಣ್ಯ ಸಿಬ್ಬಂದಿಗಳಿಂದ ಇಬ್ಬರು ಕಾಡುಗಳ್ಳರ ಬಂಧನ..!
ಮಧ್ಯರಾತ್ರಿ ಮರ ಕಡಿದು ಲಕ್ಷಾಂತರ ರೂ ಮಾಲಿನೊಂದಿಗೆ ಸಿಕ್ಕಿಬಿದ್ದ ರಾಜಕಟ್ಟಿ, ಬೆನಕೋಳಿ ಕಳ್ಳರು..!
ಬೆಳಗಾವಿ: ಕಾಕತಿ ವಲಯದ ಭೂತರಾಮನಹಟ್ಟಿ ಅರಣ್ಯದಲ್ಲಿ ತಡರಾತ್ರಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ನೀಲಗಿರಿ ಮರಗಳನ್ನು ಕಡಿಯುತ್ತಿದ್ದ ಇಬ್ಬರು ಕಿರಾತಕರನ್ನು ಕಾಕತಿ ಅರಣ್ಯ ಅಧಿಕಾರಿಗಳು ಬಲೆ ಬಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಕತಿ ಅರಣ್ಯ ವಲಯದ Beat Forester ರಾಹುಲ್ ಬೋಂಗಾಳೆ, ಶಂಕರ ಮನವಾಡಿ, ಚಾಮರಾಜ ಮುರುಗೋಡ, ರವಿ ಕಿಲಾರಿ ಸಿಬ್ಬಂದಿಗಳು ಸೇರಿಕೊಂಡು ನಡೆಸಿದ್ದ ಕಾರ್ಯಾಚರಣೆಯಲ್ಲಿ ರಾಜನಕಟ್ಟಿ ಗ್ರಾಮದ ಯಲ್ಲಪ್ಪಾ ಚಂದ್ರಪ್ಪಾ ಡುಮ್ಮನಾಯಕ ಹಾಗೂ ಬೆನಕನಹೊಳೆ ಗ್ರಾಮದ ಮಲ್ಲೇಶ ಮೇಖಲಿ ಎಂಬುವರು ನಿಲಗಿರಿ ಮರಗಳನ್ನು ಕಡಿದು TATA 407 ವಾಹನ ಸಂಖ್ಯೆ Ka22 B1533 ಯಲ್ಲಿ ಸಾಗಿಸುವಾಗ ನಿಲಗಿರಿ ಮಾಲಿನ ಸಮೇತ ವಾಹನವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ನಂತರ ಕರ್ನಾಟಕ ಅರಣ್ಯ ಕಾಯ್ದೆ 1963 ಹಾಗೂ ಕರ್ನಾಟಕ ಅರಣ್ಯ ನಿಯಮಗಳು 1969 ರ ಪ್ರಕಾರ ಕಾಕತಿ ವಲಯದ ಅರಣ್ಯ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿ ಬೆನಕನಹೊಳೆ ಗ್ರಾಮದಲ್ಲಿ ದಾಸ್ತಾನು ಮಾಡಿದ ನಿಲಗಿರಿ ಮಾಲನ್ನು ಸಹ ಜಪ್ತಿ ಪಡಿಸಿಕೊಳ್ಳಲಾಗಿದೆ.
ವಾಹನ ಸೇರಿ ಸುಮಾರು 4 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಬೆಳಗಾವಿಯ ACF ನಾಗರಾಜ ಬಾಳೆಹೊಸೂರು, RFO ಶಿವಕುಮಾರ ಮಾಳಿ, DRFO ಆನಂದ ಜಯಗೌಡರ, Beat Forester ರಾಹುಲ್ ಬೋಂಗಾಳೆ, ಶಂಕರ ಮನವಾಡಿ, ಚಾಮರಾಜ ಮುರುಗೋಡ, ರವಿ ಕಿಲಾರಿ, ಮಂಜುನಾಥ ಓಸಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಇವರ ಕಾರ್ಯಾಚರಣೆಗೆ DFO ಏನ್ ಎ ಕ್ರಾಂತಿ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.
ಇತ್ತೀಚಿಗೆ ನೀಲಗಿರಿ ಮರಗಳಿಗೆ ಬೇಡಿಕೆ ಅತಿ ಹೆಚ್ಚಾಗಿದ್ದು, ಖಾಸಗಿ ಜಮೀನಿನಲ್ಲಿ ನೀಲಗಿರಿ ಮರಗಳು ಇಲ್ಲದ ಕಾರಣ ಕಿರಾತಕರು ಅರಣ್ಯ ಪ್ರದೇಶದಲ್ಲಿ ಬೆಳೆದಿರುವ ಮರಗಳನ್ನು ಸಹ ಕದ್ದು ಮಾರುವ ಪ್ರವೃತ್ತಿಗೆ ಮುಂದಾಗಿದ್ದಾರೆ. ಈ ಕಾಡು ಕಳ್ಳ ಕಿರಾತಕರಿಗೆ ಕೆಲ ಯೂಟ್ಯೂಬರ್ಸ್ ಹಾಗೂ ಮರಿ ಪುಡಾರಿ ರಾಜಕಾರಣಿಗಳು ಬೆಂಬಲವಾಗಿ ನಿಂತಿದ್ದಾರೆಂದು ತಿಳಿದುಬಂದಿದೆ.


