ಕೊಚ್ಚಿ :
ಇಂಗ್ಲೆಂಡ್ ತಂಡದ ಹೆಸರಾಂತ ಆಲ್ ರೌಂಡರ್ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕ್ಯಾಪಿಟಲ್ ಫ್ರಾಂಚೈಸಿ 18.50 ಕೋಟಿ ನೀಡಿ ಖರೀದಿ ಮಾಡಿದೆ. ಐಪಿಎಲ್ ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ ಎಂಬ ಶ್ರೇಯಸಿಗೆ ಅವರು ಪಾತ್ರರಾಗಿದ್ದಾರೆ. ಈ ಮೊದಲು 2021 ರಲ್ಲಿ ದಕ್ಷಿಣ ಆಫ್ರಿಕಾದ ಆಲ್-ರೌಂಡರ್ ಕ್ರಿಸ್ ಮಾರಿಸ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 16.25 ಕೋಟಿ ನೀಡಿ ಖರೀದಿಸಿತ್ತು. ಕೊಚ್ಚಿಯಲ್ಲಿ ನಡೆಯುತ್ತಿರುವ ಹರಾಜಿಗೆ ಒಟ್ಟು 405 ಆಟಗಾರರು ಲಭ್ಯವಿದ್ದಾರೆ. 273 ಭಾರತೀಯರು ಮತ್ತು 132 ವಿದೇಶಿ ಆಟಗಾರರಿದ್ದಾರೆ. ಅಪಘಾನಿಸ್ತಾನದ ಸ್ಪಿನ್ನರ್ ಅಲ್ಹಾ ಮಹಮ್ಮದ್ ಫಝನ್ಫರ್ ಅತ್ಯಂತ ಕಿರಿಯ ಆಟಗಾರರು. ಭಾರತದ 40 ವರ್ಷದ ಅಮಿತ್ ಮಿಶ್ರಾ ಅತ್ಯಂತ ಹಿರಿಯ ಆಟಗಾರ. ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸ್ ಅವರಿಗೆ ಗುಜರಾತ್ ಟೈಟನ್ಸ್ ಎರಡು ಕೋಟಿ ನೀಡಿ ಖರೀದಿಸಿದೆ. ಮಾರಾಟವಾದ ಆಟಗಾರರ ವಿವರ ಇಂತಿದೆ.
ಕೇನ್ ವಿಲಿಯಮ್ಸ್ (ನ್ಯೂಜಿಲ್ಯಾಂಡ್) 2 ಕೋಟಿ, ಗುಜರಾತ್ ಟೈಟನ್ಸ್, ಹ್ಯಾರಿ ಬ್ರೂಕ್ (ಇಂಗ್ಲೆಂಡ್) 13.5 ಕೋಟಿ ಸನ್ ರೈಸರ್ಸ್ ಹೈದರಾಬಾದ್, ಮಾಯಾಂಕ್ ಅಗರವಾಲ್ ( ಭಾರತ) 8.25 ಕೋಟಿ ಸನ್ ರೈಸಸ್ ಹೈದ್ರಾಬಾದ್, ಅಜಿಂಕ್ಯ ರಹಾನೆ (ಭಾರತ) 50 ಲಕ್ಷ ಚೆನ್ನೈ ಸೂಪರ್ ಕಿಂಗ್ಸ್, ಸ್ಯಾಮ್ ಕರನ್ (ಇಂಗ್ಲಂಡ್)ಚೆನ್ನೈ ಸೂಪರ್ ಕಿಂಗ್ಸ್ 18.50 ಕೋಟಿ,
ಒಡಿಯನ್ ಸ್ಮಿತ್(ವೆಸ್ಟ್ ಇಂಡೀಸ್) 50 ಲಕ್ಷ ಗುಜರಾತ್ ಟೈಟನ್ಸ್), ಸಿಕಂದರ್ ರಾಜಾ (ಜಿಂಬಾಬ್ವೆ )ಪಂಜಾಬ್ ಕಿಂಗ್ಸ್ 50 ಲಕ್ಷ, ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್) 5.75 ಕೋಟಿ ರಾಜಸ್ಥಾನ ರಾಯಲ್,
ಕೆಮರೂನ್ ಗ್ರೀನ್ (ಆಸ್ಟ್ರೇಲಿಯಾ) 17.50 ಕೋಟಿ ಮುಂಬಯಿ ಇಂಡಿಯನ್ಸ್.
ಇಂಗ್ಲೆಂಡಿನ ಜೋ ರೂಟ್ ಮೂಲ ಬೆಲೆ ಒಂದು ಕೋಟಿ ಹಾಗೂ ದಕ್ಷಿಣ ಆಫ್ರಿಕದ ರೈಲಿ ರುಸ್ಸೋ ಮೂಲ ಬೆಲೆ ಎರಡು ಕೋಟಿಗೆ ಮಾರಾಟವಾಗದ ಆಟಗಾರರಾಗಿದ್ದಾರೆ.