ಬೆಳಗಾವಿ : ಬೆಳಗಾವಿಯ ಪ್ರತಿಷ್ಠಿತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಸಿಂಡಿಕೇಟ್ ಸದಸ್ಯರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಡಾ.ಕಾವೇರಿ, ರವೀಂದ್ರ ಮಲ್ಲಪ್ಪ ನಾಯ್ಕರ್, ರಫೀಕ್ ಭಂಡಾರಿ, ಡಾ.ಮಾರುತಿ ಎಚ್., ಮಹಾಂತೇಶ ಕಂಬಾರ, ಎಸ್.ಎಸ್.ಅಂಗಡಿ ಇವರನ್ನು ರಾಜ್ಯ ಸರಕಾರ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.