ಬೆಂಗಳೂರು: ಅರ್ಹರಿಗೆ ಗ್ಯಾರಂಟಿ ಯೋಜನೆಗಳು ಸಿಗಬೇಕು. ಅಲ್ಲದೇ ಗ್ಯಾರಂಟಿ ಯೋಜನೆಗಳ ಬಗ್ಗೆ ಪರಿಷ್ಕರಣೆ ಮಾಡಲು ಹಾಗೂ ಜನರ ಅಭಿಪ್ರಾಯವನ್ನು ಹೈಕಮಾಂಡ ಮುಂದೆ ತಿಳಿಸಲಾಗಿದೆ ಹೊರತು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂದು ನಾನು ಹೇಳಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರ್ಹರಿಗೆ ಗ್ಯಾರಂಟಿ ಯೋಜನೆಗಳು ಸಿಗಬೇಕು. ಅಲ್ಲದೇ ಗ್ಯಾರಂಟಿ ಯೋಜನೆಗಳ ಬಗ್ಗೆ ಪರಿಷ್ಕರಣೆ ಮಾಡಲು ತಿಳಿಸಲಾಗಿದೆ ಹೊರತು ವಿರೋಧ ಪಕ್ಷದರ ರೀತಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂದು ನಾನು ಹೇಳಿಲ್ಲ ಎಂದರು.
ಗ್ಯಾರಂಟಿ ಯೋಜನೆಯಿಂದ ಎಲ್ಲ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳಿಗೆ ಅನುದಾನ ಕೊರತೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಗ್ಯಾರಂಟಿ ಯೋಜನೆಯಿಂದ ಯಾವುದೇ ಶಾಸಕರಿಗೆ ಅನುದಾನದ ಕೊರತೆ ಆಗಿಲ್ಲ. ಒಂದು ವೇಳೆ ಅನುದಾನದ ಕೊರತೆ ಆಗಿದೆ ಎಂದು ಹೇಳುವ ಶಾಸಕರು ಒಂದು ಭಾರಿ ಸಿಎಂ ಮಂಡಿಸಿದ ಬಜೆಟ್ ಬುಕ್ ತೆಗೆದು ಓದಲಿ ಎಂದು ವಿರೋಧ ಪಕ್ಷದ ಶಾಸಕರಿಗೆ ಮಾತಿನ ಚಾಟಿ ಬೀಸಿದರು.
ನಾನು ಮುಖ್ಯಮಂತ್ರಿ-ಕೆಪಿಸಿಸಿ ಅಧ್ಯಕ್ಷ ರೇಸ್ನಲ್ಲಿ ನಾನಿಲ್ಲ: ಸದ್ಯ ನಾನು ಯಾವುದೇ ಸಿಎಂ-ಕೆಪಿಸಿಸಿ ಅಧ್ಯಕ್ಷ ರೇಸ್ನಲ್ಲಿ ನಾನಿಲ್ಲ. ಏನೆ ಇದ್ದರೂ ಪಕ್ಷ ಬಲಿಷ್ಠಗೊಳಿಸುವಲ್ಲಿ ನಾವು ಮುಂದಾಗುತ್ತಿದೇವೆ ಹೊರತು ಈ ಇಂತಹ ಯಾವುದೇ ರೇಸ್ ನಲ್ಲಿ ನಾನಿಲ್ಲ ಎಂದು ಹೇಳಿದರು.