ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧೆಗೆ ಇಡೀ ಬಿಜೆಪಿ ಪಡೆ ಬೆಚ್ಚಿಬಿದ್ದಿದೆ. ಮಾಜಿ ಮುಖ್ಯಮಂತ್ರಿ ಆಗಿರುವ ಜಗದೀಶ್ ಶೆಟ್ಟರ್ ಅವರಂತಹ ಘಟಾನುಘಟಿಯನ್ನೇ ಕಣಕ್ಕಿಳಿಸಿದರೂ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ವ್ಯಕ್ತವಾಗುತ್ತಿರುವ ಭಾರೀ ಜನ ಬೆಂಬಲದಿಂದ ಆತ್ಮವಿಶ್ವಾಸವನ್ನು ಕಳೆದುಕೊಂಡಿದೆ. ಮದಗಜವನ್ನೇ ರಣಾಂಗಣದಲ್ಲಿ ಮಣಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಅಷ್ಟೊಂದು ಪ್ರಭಾವಶಾಲಿಯಾದ ರೀತಿಯಲ್ಲಿ ಈ ಬಾರಿ ಮೃಣಾಲ್ ಹೆಬ್ಬಾಳ್ಕರ್ ಎದುರಾಳಿ ಬಿಜೆಪಿ ಪಾಲಿಗೆ ಸಿಂಹಸ್ವಪ್ನರಾಗಿದ್ದಾರೆ.
⏩ ಹೋದಲ್ಲಿ ಬಂದಲ್ಲಿ ಬೆಳಗಾವಿಯಲ್ಲೀಗ ಮೃಣಾಲ್ ಅವರದ್ದೇ ಸುದ್ದಿ
⏩ ಸಂಚಲನ ಸೃಷ್ಟಿಸಿದ ಯುವ ನಾಯಕನ ಸ್ಪರ್ಧೆ
⏩ ಚೊಚ್ಚಲ ಪ್ರಯತ್ನದಲ್ಲೇ ಸಂಸತ್ ಪ್ರವೇಶದ ಹೊಂಗನಸು
⏩ ಪಾದರಸದಂತೆ ಚುರುಕು, ಉತ್ಸಾಹಿ ಕ್ರಿಯಾಶೀಲ ಯುವಕನ ಚಟುವಟಿಕೆಗೆ ನಿಬ್ಬೆರಗಾದ ಜನತೆ
⏩ ಸವಾಲನ್ನು ಮೆಟ್ಟಿ ನಿಂತು ಮುನ್ನುಗ್ಗುತ್ತಿರುವ ವರ್ಚಸ್ವಿ ಯುವ ನಾಯಕ
ಜನ ಜೀವಾಳ ಜಾಲ: ಬೆಳಗಾವಿ : ಬೆಳಗಾವಿಯಲ್ಲಿ ಇದೀಗ ಲಕ್ಷ್ಮೀ ಸುಪುತ್ರನದ್ದೇ ಸದ್ದು. ಬೆಳಗಾವಿ ಲೋಕಸಭಾ ಕ್ಷೇತ್ರ ಅತ್ಯಂತ ಎರಡು ದಶಕಗಳ ನಂತರ ಮತ್ತೆ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆ ಕಾರಣ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮೃಣಾಲ್ ಹೆಬ್ಬಾಳಕರ ಅವರ ವರ್ಚಸ್ವಿ ನಾಯಕತ್ವ.
ಅವರ ಸ್ಪರ್ಧೆ ಇದೀಗ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಗಮನ ಸೆಳೆದಿದೆ. ರಾಜ್ಯದ ಜನತೆಯ ಪಾಲಿಗೆ ಮನೆಮಾತಾಗಿರುವ ಅವರ ತಾಯಿಯಾಗಿರುವ ರಾಜ್ಯದ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸುಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರು ಮುನ್ನುಗ್ಗುತ್ತಿದ್ದು ಬೆಳಗಾವಿ ಲೋಕಸಭಾ ಕ್ಷೇತ್ರ ಈ ಬಾರಿ ಕಾಂಗ್ರೆಸ್ ಕೈವಶವಾಗುವುದರಲ್ಲಿ ಯಾವ ಸಂದೇಹವು ಇಲ್ಲ ಎಂಬ ಅನುಮಾನಗಳು ಗೋಚರಿಸುತ್ತಿವೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದ ಟಿಕೆಟ್ ಘೋಷಣೆಯಾಗುವ ಮುನ್ನವೇ ಅವರಿಗೆ ಟಿಕೆಟ್ ಎಂದು ಖಚಿತವಾಗಿತ್ತು. ಹೀಗಾಗಿ ಸ್ವತಃ ರಣಕಣಕ್ಕೆ ಇಳಿದು ಜನರನ್ನು ಭೇಟಿಯಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ತನ್ನ ಸ್ಪರ್ಧೆಯ ನೈಜ ಉದ್ದೇಶವಾಗಿದೆ ಎಂದು ಮತದಾರರಿಗೆ ಮನವರಿಕೆ ಮಾಡಿದ್ದರು.
ಬೆಳಗಾವಿ ಲೋಕಸಭಾ ಮತ ಕ್ಷೇತ್ರದಲ್ಲಿ ತಾಯಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ಮಾವನಾಗಿರುವ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರೊಂದಿಗೆ ಪಾದರಸದಂತೆ ಸಂಚರಿಸಿ ಸಂಚಲನ ಸೃಷ್ಟಿಸಿದ್ದಾರೆ. ಅವರು ಹೋದಲ್ಲೆಲ್ಲ ಅಪಾರ ಜನ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ಕಂಡು ವಿರೋಧಿಗಳ ನಿದ್ರಾಭಂಗವಾಗುತ್ತಿರುವುದು ಕಟು ಸತ್ಯ!
ಬೆಳಗಾವಿ ಲೋಕಸಭಾ ಮತಕ್ಷೇತ್ರಾದ್ಯಂತ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಈ ಬಾರಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಬೆಳಗಾವಿ ಬಿಜೆಪಿಯ ಭದ್ರಕೋಟೆ ಎಂದೇ ಕರೆದುಕೊಳ್ಳುತ್ತಿದ್ದು ಅದು ಈ ಬಾರಿ ಛಿದ್ರಗೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಬಿಜೆಪಿ ನಾಯಕರು ಎಷ್ಟೇ ಒಗ್ಗಟ್ಟಿನ ಮಂತ್ರ ಹೇಳಿದರೂ ಅವರ ಕೋಟೆಯಲ್ಲಿ ಈ ಬಾರಿ ಹಿಂದೆಂದೂ ಕಾಣದ ಬಿರುಕು ಕಾಣಿಸಿರುವುದು ಸುಸ್ಪಷ್ಟವಾಗಿದೆ. ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧೆ ಬಿಜೆಪಿಗರ ಆಟವನ್ನು ಕೆಡಿಸಿದೆ. ಎಷ್ಟೇ ಪ್ರಚಾರ ಮಾಡಿದರೂ ಮೃಣಾಲ್ ಹೆಬ್ಬಾಳ್ಕರ್ ಅವರ ಅಬ್ಬರ ನಿಲ್ಲುತ್ತಿಲ್ಲ. ಈ ಬಾರಿ ಅವರ ಗೆಲುವು ನಿಶ್ಚಿತ ಎಂದೆ ಎಲ್ಲರೂ ಮಾತನಾಡಿಕೊಳ್ಳುತ್ತಿರುವುದು ಈಗ ಬೆಳಗಾವಿಯಲ್ಲಿ ಕಂಡು ಬರುತ್ತಿದ್ದು ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಸುಪುತ್ರನನ್ನು ಚೊಚ್ಚಲ ಲೋಕಸಭಾ ಚುನಾವಣೆ ಮೂಲಕ ದೆಹಲಿಗೆ ಕಳಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಬೆಳಗಾವಿ ಜನತೆ ಈ ಯುವನಾಯಕನನ್ನು ದೆಹಲಿಗೆ ತಮ್ಮ ಪ್ರತಿನಿಧಿಯಾಗಿಯನ್ನಾಗಿ ಕಳಿಸುವ ಮೂಲಕ ಅತ್ಯಂತ ಸಮರ್ಥ ವ್ಯಕ್ತಿಯನ್ನು ಆಯ್ದುಕೊಳ್ಳುವುದಂತು ನಿಶ್ಚಿತ.
ಒಟ್ಟಾರೆ ರಾಜ್ಯದ ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಬೆಳಗಾವಿ ಲೋಕಸಭಾ ಕ್ಷೇತ್ರ ಈ ಬಾರಿ ಕೈ ವಶವಾಗುವ ಎಲ್ಲಾ ಸಾಧ್ಯತೆಗಳನ್ನು ಎಲ್ಲಾ ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿದ್ದು ಅದು ಕೆಲವೇ ತಿಂಗಳುಗಳಲ್ಲಿ ಸಾಕಾರವಾಗುವುದರಲ್ಲಿ ಎರಡು ಮಾತಿಲ್ಲ.