22 ವರ್ಷಗಳ ಹಿಂದೆ ನರೇಂದ್ರ ಮೋದಿಯ ರಾಜಕೀಯ ಜೀವನದ ದಿಕ್ಕನ್ನೇ ಬದಲಾಯಿಸಿದ ದಿನ
ನವದೆಹಲಿ: ರಾಜ್ಕೋಟಕ್ಕೆ ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೋಟ್ ನಗರದಲ್ಲಿ ತಮ್ಮ ಮೊದಲ ಚುನಾವಣಾ ಕದನದ ಪ್ರಚಾರದ ಥ್ರೋಬ್ಯಾಕ್ ವೀಡಿಯೊವನ್ನು ಇಂದು, ಶನಿವಾರ ಹಂಚಿಕೊಂಡಿದ್ದಾರೆ. ಇದು ನರೇಂದ್ರ ಮೋದಿಯವರ ರಾಜಕೀಯ ಜೀವನವನ್ನೇ ಬದಲಿಸಿದ ದಿನವಾಗಿದೆ. ಹೀಗಾಗಿಯೇ ಅವರು ಈ ವೀಡಿಯೊ ಹಂಚಿಕೊಂಡಿದ್ದಾರೆ.
2002ರ ಇದೇ ಫೆ.24ರ ದಿನ, ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಗುಜರಾತ್ ವಿಧಾನಸಭೆಯ ಸದಸ್ಯರಾದರು, ರಾಜ್ಕೋಟದಿಂದ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಅವರು ಈಗಾಗಲೇ ಅವರು ನಾಲ್ಕು ತಿಂಗಳು ಮೊದಲು 2001ರ ಅಕ್ಟೋಬರ್ನಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು ಮತ್ತು ಹುದ್ದೆಯಲ್ಲಿ ಮುಂದುವರಿಯಲು ಆರು ತಿಂಗಳೊಳಗೆ ಶಾಸಕಾಂಗ ಸಭೆಯ ಸದಸ್ಯರಾಗಬೇಕಾಗಿತ್ತು. ಈ ರಾಜ್ಕೋಟ್ ಉಪಚುನಾವಣೆ ಅವರಿಗೆ ಅವಕಾಶ ನೀಡಿತು.
ಥ್ರೋಬ್ಯಾಕ್ ವೀಡಿಯೊವನ್ನು ಮೋದಿ ಆರ್ಕೈವ್ ಹಂಚಿಕೊಂಡಿದೆ, ಇದು ಟ್ವಿಟರ್ ಹ್ಯಾಂಡಲ್ ಆಗಿದ್ದು ಅದು ಆರ್ಕೈವಲ್ ಫೋಟೋಗಳು, ವೀಡಿಯೊಗಳು ಮತ್ತು ವೃತ್ತಪತ್ರಿಕೆ ತುಣುಕುಗಳ ಮೂಲಕ ಪ್ರಧಾನಿಯವರ ರಾಜಕೀಯ ಜೀವನ ಪ್ರಯಾಣವನ್ನು ವಿವರಿಸುತ್ತದೆ. ಮೋದಿ ತಮ್ಮ ಜೀವನದ ಮೊದಲ ಚುನಾವಣೆಯಲ್ಲಿ ರಾಜ್ಕೋಟ್ನಲ್ಲಿ ಸ್ಪರ್ಧಿಸಿ 15000 ಮತಗಳಿಂದ ಗೆದ್ದಿದ್ದರು.
ಮೋದಿ ಗೆಲುವಿನ ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡರು. ರಾಜ್ಕೋಟ್ ವಿಧಾನಸಭಾ ಉಪಚುನಾವಣೆಯಲ್ಲಿ ಗೆದ್ದ ನಂತರ ನರೇಂದ್ರ ಮೋದಿ ಹಿಂತಿರುಗಿ ನೋಡಲಿಲ್ಲ. ಅವರು ಒಂದರ ನಂತರ ಒಂದರಂತೆ ಚುನಾವಣೆಗಳನ್ನು ಗೆಲ್ಲುತ್ತ ದೇಶದ ಪ್ರಧಾನಿ ಹುದ್ದೆ ವರೆಗೂ ಏರಿದರು. ಸರ್ಕಾರವನ್ನು ನಡೆಸುವ ಮತ್ತು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಉತ್ಸಾಹದ ಮೇಲೆ ಕೇಂದ್ರೀಕರಿಸಿದರು. ತಮ್ಮ ವಿಜಯದ ನಂತರ ರಾಜ್ಕೋಟ್ನ ಜನರನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
22 ವರ್ಷಗಳ ಹಿಂದೆ ಮೋದಿಯವರ ಗೆಲುವು ಮತ್ತು ಆ ನಂತರ ಅವರು ರಾಜ್ಕೋಟ್ ಜನರಿಗೆ ಏನು ಹೇಳಿದರು ಎಂಬುದು ಈ ವೀಡಿಯೊದಲ್ಲಿದೆ.
ಇದನ್ನು ಹಂಚಿಕೊಂಡ ಪ್ರಧಾನಿ ಮೋದಿ, “ರಾಜ್ಕೋಟ್ ಯಾವಾಗಲೂ ನನ್ನ ಹೃದಯದಲ್ಲಿ ಬಹಳ ವಿಶೇಷವಾದ ಸ್ಥಾನವನ್ನು ಹೊಂದಿದೆ. ಈ ನಗರದ ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ, ನನ್ನ ಮೊದಲ ಚುನಾವಣಾ ಗೆಲುವನ್ನು ನನಗೆ ನೀಡಿದರು. ಅಂದಿನಿಂದ ಜನತಾ ಜನಾರ್ದನರ ಆಶಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾನು ಯಾವಾಗಲೂ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಕೋಟ್ನಲ್ಲಿ ಅವರು ನಾಮಪತ್ರ ಸಲ್ಲಿಸುವ, ಪ್ರಚಾರ ಮಾಡುವ ಮತ್ತು ಭಾಷಣ ಮಾಡುವ ಕ್ಲಿಪ್ಗಳು ಮತ್ತು ಚಿತ್ರಗಳ ಒಂದು ಸಂಯೋಜಕ ವೀಡಿಯೊವಾಗಿದೆ.