ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು, ಹೈ ಕಮಾಂಡ್ ತೀರ್ಮಾನದ ಮೇರೆಗೆ ಅದು ನಡೆಯಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕೋಲಾರ ಮೂಲದವರಾದ ಸಚಿವ ಕೆಹೆಚ್ ಮುನಿಯಪ್ಪ ನಿವಾಸದಲ್ಲಿಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಸಭೆಯ ಅಜೆಂಡಾ ಏನೂ ಇರಲಿಲ್ಲ, ಕಳೆದ ಬಾರಿ ಬೆಳಗಾವಿ ತಿಂಡಿಯನ್ನು ಸವಿದಿದ್ದೆವು. ಈ ಬಾರಿ ಬದಲಾವಣೆಗೋಸ್ಕರ ಕೋಲಾರ ತಿಂಡಿ ತಿನ್ನುವ ಅಂತ ಸೇರಿದ್ದೆವು ಅಂತ ನಗುತ್ತಾ ಹೇಳಿದರು.
ಸತೀಶ್ ಜಾರಕಿಹೊಳಿ, ಮುನಿಯಪ್ಪ ಮತ್ತು ಮಹಾದೇವಪ್ಪ ಜೊತೆ ಸೇರಿದಾಗ ಏನಾದರೂ ಒಂದು ವಿಶೇಷ ಇರುತ್ತದೆ, ಈ ಬಾರಿಯ ವಿಶೇಷತೆ ಏನು ಅಂತ ಕೇಳಿದಾಗ ಕೋಲಾರ ತಿಂಡಿ ಬಿಟ್ಟರೆ ಮತ್ತೇನೂ ವಿಶೇಷವಿಲ್ಲ ಎಂದು ಜಾರಕಿಹೊಳಿ ಹೇಳಿದರು.