ಬೆಳಗಾವಿ :
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ರಾಜ್ಯದ 28 ಮತಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಇಷ್ಟರಲ್ಲೇ ಘೋಷಣೆ ಮಾಡಲಿದ್ದು ಇದರಲ್ಲಿ ಎಐಸಿಸಿ ನೇಮಕ ಮಾಡಿರುವ ಸಂಯೋಜಕರು ಮಹತ್ವದ ಪಾತ್ರ ನಿಭಾಯಿಸಲಿದ್ದಾರೆ. ಇದೀಗ ಪ್ರಭಾವಿ ಜನನಾಯಕಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೊನೆಗೂ ಈ ಮಹತ್ವದ ಸ್ಥಾನ ಸಿಕ್ಕಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಪ್ರಭಾವಿ ಜನನಾಯಕಿಯಾಗಿದ್ದಾರೆ ಜಿಲ್ಲೆಯಲ್ಲಿ ಅವರು ಬಿಗಿಹಿಡಿತ ಹೊಂದಿದ್ದಾರೆ. ಇದನ್ನು ಮನವರಿಕೆ ಮಾಡಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸಿ ಕೊನೆಗೂ ಹೆಬ್ಬಾಳ್ಕರ್ ಅವರಿಗೆ ಸಂಯೋಜಕ ಹುದ್ದೆಯನ್ನು ದಯಪಾಲಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತಕ್ಷೇತ್ರದಲ್ಲಿ ಅವರಿಗೆ ಸಂಯೋಜಕರ ಹುದ್ದೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ್ದಾರೆ. ಜೊತೆಗೆ ಎಐಸಿಸಿ ಪ್ರಕಟಿಸಿದ್ದ ಕೆಲ ಪಟ್ಟಿಯಲ್ಲಿ ಕೆಲ ಮಾರ್ಪಾಡುಗಳನ್ನು ಅವರು ಮಾಡಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ವೆಂಕಟೇಶ್ ಅವರನ್ನು ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.