ಬೆಳಗಾವಿ: ಬೆಳಗಾವಿಯಿಂದ ಬೆಂಗಳೂರಿಗೆ ವಿಮಾನ ಮೂಲಕ ಯಕೃತ್ ರವಾನೆ ಮಾಡಲಾಗಿದೆ. ಬೆಳಗಾವಿಯಲ್ಲಿ ದಾನಿ ಒಬ್ಬರು ನೀಡಿದ ಯಕೃತ್ ನ್ನು ರಸ್ತೆ ಮೂಲಕ ಹುಬ್ಬಳ್ಳಿವರೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಯಶವಂತಪುರ ಸ್ಪರ್ಶ ಆಸ್ಪತ್ರೆಯಲ್ಲಿ ಲಿವರ್ ಕಸಿ ಅಗತ್ಯವಿದ್ದ ರೋಗಿ ಒಬ್ಬರಿಗೆ ಬೆಳಗಾವಿಯ ದಾನಿ ನೀಡಿರುವ ಯಕೃತ್ತನ್ನು ಜೋಡಣೆ ಮಾಡಲಾಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಯಶವಂತಪುರ ಸ್ಪರ್ಶ ಆಸ್ಪತ್ರೆವರೆಗೆ ಜೀರೋ ಟ್ರಾಫಿಕ್ ಮೂಲಕ ಯಕೃತ್ ಕಳಿಸುವ ವ್ಯವಸ್ಥೆ ಮಾಡಲಾಯಿತು.
ಜೀರೋ ಟ್ರಾಫಿಕ್ : ಬೆಂಗಳೂರಿಗೆ ವಿಮಾನದ ಮೂಲಕ ಯಕೃತ್ ರವಾನೆ
