This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆಗೆ ಯುವ ನಾಯಕ ರಾಹುಲ ಜಾರಕಿಹೊಳಿ ಚಾಲನೆ Young leader Rahul led the sled for Chhatrapati Shivaji Maharaj's procession


 

ಯುವಕರ ಹೃದಯ ಸಾಮ್ರಾಟ ಯುವ ನಾಯಕ ರಾಹುಲ ಜಾರಕಿಹೊಳಿ ಅವರಿಗೆ ಅದ್ದೂರಿ ಸ್ವಾಗತ, ಹೊನಗಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವರೂಢ ಮೂರ್ತಿ ಲೋಕಾರ್ಪಣೆ

ಹೊನಗಾ ಮತ್ತು ಬೆನ್ನಾಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಠಿ

ಬೆಳಗಾವಿ:
ಯಮಕನಮರಡಿ ಮತಕ್ಷೇತ್ರದ ಹೊನಗಾ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜರ ಅವರ ಮೆರವಣಿಗೆಯನ್ನು ಯುವ ನಾಯಕ ರಾಹುಲ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಗ್ರಾಮದ ಸರ್ವಗಣ್ಯರ ಸಮ್ಮುಖದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅವರ ಪುತ್ಥಳಿಗೆ ಯುವ ನಾಯಕ ರಾಹುಲ ಜಾರಕಿಹೊಳಿ ಅವರು ಪುಷ್ಪ ನಮನ ಸಲ್ಲಿಸಿದರು.

ಯುವಕರ ಹೃದಯ ಸಾಮ್ರಾಟ ಯುವ ನಾಯಕ ರಾಹುಲ ಜಾರಕಿಹೊಳಿ ಭರ್ಜರಿ ಸ್ವಾಗತ: ಈ ಭಾಗದ ಅಭಿವೃದ್ಧಿ ಹರಿಕಾರ, ಸ್ನೇಹಜೀವಿ- ಸಹಕಾರ ಮನೋಭಾವುಳ್ಳ ಕೆಪಿಸಿಸಿಕಾರ್ಯಾಧ್ಯಕ್ಷ ಸತೀಶ ಜಾಕಿರಹೊಳಿ ಅವರ ಪುತ್ರ ಯುವ ನಾಯಕ ರಾಹುಲ ಜಾರಕಿಹೊಳಿ ಅವರಿಗೆ ಕಾಕತಿ ಹೊನಗಾ ಗ್ರಾಮಕ್ಕೆ ಹೆಜ್ಜೆ ಇಡುತ್ತಿದಂತೆ, ಗ್ರಾಮಸ್ಥರು ಆತ್ಮೀಯತೆಯಿಂದ ಬರಮಾಡಿಕೊಂಡು, ಪ್ರೀತಿಯ ಜೈಕಾರ ಮೊಳಗಿಸಿದರು. ಕ್ಷೇತ್ರದ ಜನತೆಯ ಆತ್ಮೀಯತೆಗೆ ರಾಹುಲ್‌ ಪುಳಕಿತರಾದರು.

ಕಾಕತಿ-ಹೊನಗಾ ಮತ್ತು ಬೆನ್ನಾಳಿ ಗ್ರಾಮಸ್ಥರ ಹಲವಾರು ದಶಕಗಳ ಕನಸಿನ ಕೂಸಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನಾ ಮಾಡುವ ಬೇಡಿಕೆಗೆ ಸ್ಪಂಧಿಸಿದ ಶಾಸಕ ಸತೀಶ ಜಾಕಿರಹೊಳಿ ಅವರು ಕನಸು ನನಸು ಮಾಡಿದ್ದು, ಅದ್ದೂರಿ ಕಾರ್ಯಕ್ರಮದಲ್ಲಿ ಯುವ ನಾಯಕ ರಾಹುಲ ಜಾರಕಿಹೊಳಿ ಅವರು ಭಾಗಿಯಾಗಿ, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೊನಗಾದಲ್ಲಿ ಹಬ್ಬದ ವಾತಾವರಣ ಸೃಷ್ಠಿ: ನಾಳೆ ಛತ್ರಪತಿ ಶಿವಾಜಿ ಮಹಾರಾಜ ಅಶ್ವರೂಢ ಮೂರ್ತಿ ಲೋಕಾರ್ಪಣೆಗೊಳ್ಳಲಿದ್ದು ಹೊನಗಾ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಸಾವಿರಾರು ಮುತ್ತೈದೆಯರಿಂದ ಪೂಜೆ: ತಾಲೂಕಿನ ಹೊನಗಾ ಮತ್ತು ಬೆನ್ನಾಳಿ ನಡೆಯುವ ಛತ್ರಪತಿ ಶಿವಾಜಿ ಮಹಾರಾಜರ ಅಶ್ವರೂಢ ಮೂರ್ತಿ ಕಾರ್ಯಕ್ರಮದಲ್ಲಿ ಸಾವಿರಾರು ಮುತ್ತೈದೆಯರಿಂದ ಪೂಜಾ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಹೊನಗಾ ಮತ್ತು ಬೆನ್ನಾಳಿ ಗ್ರಾಮದಲ್ಲಿ ಬೆಳ್ಳಗ್ಗೆಯಿಂದ ತಳಿರು ತೋರಣ, ಹೂಮಾಲೆಗಳಿಂದ ಶೃಂಗಾರಗೊಳಿಸಲಾಗಿದೆ. ಶ್ರೀ ಕಾಳಭೈರವನಾಥ ಮಂದಿರದಲ್ಲಿ ಪೂಜಾ ಕಾರ್ಯಕ್ರಮ ನೇರವೇರಲಿದ್ದು ಗ್ರಾಮದ ತುಂಬೆಲ್ಲ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

 

18 ರಂದು ನಡೆಯಲಿರುವ ಛತ್ರಪತಿ ಶಿವಾಜಿ ಮಹಾರಾಜ ಅಶ್ವರೂಢ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ಶ್ರೀ ಸದ್ಗುರು ವಿಠ್ಠಲ ವಾಸಕರಮಹಾರಾಜ, ಶಾಸಕ ಸತೀಶ ಜಾರಕಿಹೊಳಿ , ಯುವ ನಾಯಕ ರಾಹುಲ ಜಾರಕಿಹೊಳಿ,ಕೊಲ್ಲಾಪೂರದ ಛತ್ರಪತಿ ಶಿವಾಜಿ ಮಹಾರಾಜರ 13 ನೇ ವಂಶಸ್ಥರಾದ ಯುವರಾಜ ಸಂಭಾಜಿ ರಾಜೆ ಛತ್ರಪತಿ, ಸಮಾಜ ಸೇವಕರು ಶಿವಾಜಿ ಕಾಗನಿಕರ್‌, ವಿನಾಯಕ ಕೆಸರಕರ್‌ , ಪಂಡಿತ ನಾಗೇಶ ಹರ್ಲೇಕರ್‌ , ಶಾಸಕರಾದ ಅಂಜಲಿ ನಿಂಬಾಳಕರ್‌ , ಅನಿಲ ಬೆನಕೆ , ಲಖನ್‌ ಜಾರಕಿಹೊಳಿ, ಚನ್ನರಾಜ್‌ ಹಟ್ಟಿಹೊಳಿ, ಪ್ರಕಾಶ ಹುಕ್ಕೇರಿ ಮುಖಂಡರಾದ, ಮದುಕರ್‌ ಮುಕ್ಕುಂದ್‌ ಪಾಟೀಲ, ಡಾ. ಮನೋಹರ್‌ ಎಸ್‌ ಪಾಟೀಲ್‌ , ಎಂ ಎಂ ಮುತ್ತೇಗೆಕರ್‌ , ಜೆಜೆ ಪಾಟೀಲ, ಬೈರು ಲುಮುಣಾ ಟಕ್ಕೇಕರ್‌ ಇನ್ನಿತರ ಮುಖಂಡರು ಭಾಗಿಯಾಗಲಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಆಪ್ತ ಸಹಾಯಕರು ಯುವಕರು ಊರಿನ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply