ಯಮಕನಮರಡಿ ಜೀನರಾಳ ಜೂಜಾಟ ಗ್ಯಾಂಗ್ ಬಗ್ಗುಬಡಿದ PI ಜಾವೀದ್..!
ಮುಷಾಪುರೆ ಬಲೆಗೆ ಬಿದ್ದು ಒದ್ದಾಡಿದ
ರಾತ್ರಿ ಜೂಜಾಟಗಾರರು..!
ಬೆಳಗಾವಿ : ಯಮಕನಮರಡಿ ಠಾಣಾ ವ್ಯಾಪ್ತಿಯಲ್ಲಿ ಜೂಜಾಟವನ್ನು ಸಂಪೂರ್ಣವಾಗಿ ಬಗ್ಗು ಬಿಡುವ ನಿಟ್ಟಿನಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿರುವ ಯಮಕನಮರಡಿ ಪಿ ಎ ಜಾವಿದ್ ಮುಷಾಪುರೆ ನಿನ್ನೆ ಜಿನರಾಳ ಗ್ರಾಮ ಹದ್ದಿನ ಬ್ಯಾಡರಟ್ಟಿ ಕ್ರಾಸ್ ಹತ್ತಿರ ಡೈಕ್ ರಸ್ತೆ ಪಕ್ಕ ಕುಳಿತು ಜೂಜಾಟ ಆಡುತಿದ್ದ ಒಂಬತ್ತು ಜನರ ಗ್ಯಾಂಬ್ಲಿಂಗ್ ಗ್ಯಾಂಗಿನ್ ಮೇಲೆ ಖುದ್ದು ತಡರಾತ್ರಿ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಲವು ದಿನಗಳಿಂದ ಈ ಗ್ಯಾಂಗ್ ಬಿಟ್ ಪೊಲೀಸರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸ್ಥಳ ಬದಲಾಯಿಸಿ ಆಟ ಆಡುತ್ತಿದ್ದರು. ಈ ವಿಷಯ ಸೂಕ್ಷ್ಮವಾಗಿ ಪಿಐ ಜಾವಿದ್ ಗಮನಕ್ಕೆ ಬರುತ್ತಿದ್ದಂತೆ ತಾವೇ ಖುದ್ದಾಗಿ ದಾಳಿ ನಡೆಸಿ ಜುಜಾಟಗಾರರನ್ನು ಬಂಧಿಸಿ ಬಿಸಿ ಮುಟ್ಟಿಸಿದ್ದಾರೆ.
ಕಲಂ 87 ಕೆ ಪಿ ಕೆಪಿ ಆಕ್ಟ್ ಪ್ರಕಾರ ದಾಳಿ ನಡೆಸಿದ ಇವರು..
1) ಸುಭಾಷ ಜಕ್ಕಪ್ಪಾ ಅಕ್ಕತಂಗೇರಹಾಳ
ಸಾ-ಹೊಸುರ ತಾ-ಹುಕ್ಕೇರಿ
2200/-
2) ಸಚಿನ ಶಿವಗೌಡ ಪಾಟೀಲ ಸಾ-ಯರನಾಳ ತಾ-ಹುಕ್ಕೇರಿ
1100/-
3) ಆಯುಬ ಕಾಶಿಮ್ ಖಲೀಪ ಸಾ-ಹಿಟ್ಟಿ ತಾ-ಗಡಹಿಂಗ್ಲಜ
3080/-
4) ರಾಜು ದುಂಡಪ್ಪಾ ಘಸ್ತಿ ಸಾ-ಯರನಾಳ ತಾ-ಹುಕ್ಕೇರಿ
3200/-
5) ಭರಮಪ್ಪಾ ಸತ್ತೆಪ್ಪಾ ಘಸ್ತಿ ಸಾ-ಯರನಾಳ ತಾ-ಹುಕ್ಕೇರಿ
2900/-
6) ನಿಂಗಪ್ಪಾ ಶಿವಪ್ಪಾ ಪಾಟೀಲ ಸಾ-ಯರನಾಳ ತಾ-ಹುಕ್ಕೇರಿ
2600/-
7) ರಾಜು ಬಾಬು ಪಟೋಳಿ ಸಾ-ಕಡಲಗಿ ತಾ-ಗಡಹಿಂಗ್ಲಜ
1600/-
8) ಮಹಾವೀರ ಭರಮಾ ಚೌಗಲಾ ಸಾ-ಯರನಾಳ ತಾ-ಹುಕ್ಕೇರಿ
3550/-
9) ಮಹಮ್ಮದ ದಸ್ತಗೀರ ಸನದಿ ಸಾ-ಯರನಾಳ ತಾ-ಹುಕ್ಕೇರಿ 3500/-
ಈ ಒಂಬತ್ತು ಜನ ಆರೋಪಿಗಳನ್ನು ಬಂಧಿಸಿ ಇವರಿಂದ ಒಟ್ಟು ಹಣ-23730/- ವಶಪಡಿಸಿಕೊಂಡು ತನಿಖೆ ಮುಂದುವರಿಸಿರುತ್ತಾರೆ.


