This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ವಿಶ್ವ ಹಿಂದು ಅಂತರ್ಜಾತಿ ವಿವಾಹಿತರ ಸಮಾವೇಶ World Hindu Intercaste Married Conference


 

ಗೋಕಾಕ :
ವಿಶ್ವ ಹಿಂದು ಅಂತರ್ಜಾತಿ ವಿವಾಹ ಪ್ರೋತ್ಸಾಹ ಸಂಘ ವತಿಯಿಂದ ಜ.4 ಮತ್ತು ಜ.5 ರಂದು ಗೋಕಾಕ ತಾಲೂಕಿನ ಮನ್ನಿಕೇರಿಯ ಶ್ರೀ ಮಹಾಂತಲಿಂಗೇಶ್ವರ ಮಠದಲ್ಲಿ ವಿಶ್ವ ಹಿಂದು ಅಂತರ್ಜಾತಿ ವಿವಾಹಿತರ ಸಮಾವೇಶ ನಡೆಯಲಿದೆ.
ಸಂಘದ ವಾರ್ಷಿಕೋತ್ಸವ ಅಂಗವಾಗಿ ನಡೆಯಲಿರುವ ಸಮಾವೇಶವನ್ನು ಮಾಜಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಜ.4 ರ ರಾತ್ರಿ 7.30 ಕ್ಕೆ ನಡೆಯುವ ವಿರಾಟ್ ಹಿಂದು ಧರ್ಮ ಜಾಗೃತಿ ಸಮಾವೇಶಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡುವರು. ರಾಜ್ಯಸಭೆಯ ಸದಸ್ಯ ಈರಣ್ಣ ಕಡಾಡಿ , ಖ್ಯಾತ ವಾಗ್ಮಿ ಜಗದೀಶ ಕಾರಂತ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಮಠದ ಅಧ್ಯಕ್ಷ ಶ್ರೀ ವಿಜಯ ಸಿದ್ದೇಶ್ವರ ಸ್ವಾಮೀಜಿ, ಸಂಘದ ಗೌರವಾಧ್ಯಕ್ಷ ಶ್ರೀ ಆರೂಢ ಭಾರತಿ ಸ್ವಾಮೀಜಿ ಉಪಸ್ಥಿತರಿರುವರು. ಜಾತ್ಯಾತೀತ ಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜ.5 ರ ಬೆಳಗ್ಗೆ 11 ಕ್ಕೆ ಜಾತ್ಯಾತೀತ ಹಿಂದು ಸಮಾವೇಶವನ್ನು ಕನ್ಹೇರಿ ಮಠದ ಜಗದ್ಗುರು ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ , ಶಾಸಕ ಬಾಲಚಂದ್ರ ಜಾರಕಿಹೊಳಿ ಉಪಸ್ಥಿತರಿರುವರು. ಅಂದಾಜು 10 ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದುಸಂಘ ಮಾಹಿತಿ ನೀಡಿದೆ. 9480455594 ಇಲ್ಲಿಗೆ ಸಂಪರ್ಕಿಸಬಹುದು.


Jana Jeevala
the authorJana Jeevala

Leave a Reply