ಬೆಳಗಾವಿ : ನಗರದ ಕೆಎಲ್ ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಬಿ ಎಸ್ ಸಿ ಹಾಗೂ ಎಂ ಎಸ್ ಸಿ ರಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗಾಗಿ ಮಾಲಿಕ್ಯೂಲ್ ವಿನ್ಯಾಸ ಆಧುನಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಕೈಪಿಡಿ ತರಬೇತಿ ಕುರಿತು “ಆಧುನಿಕ ತಂತ್ರಾಂಶ ಉಪಕರಣಗಳ ಮೂಲಕ ಅಣುಗಳ ವಿನ್ಯಾಸ ಮತ್ತು ದೃಶ್ಯೀಕರಣ “ಎಂಬ ವಿಷಯದ ಮೇಲೆ ಕೇಮ್ ವಿಷನ್ ಕೈಪಿಡಿ ತರಬೇತಿ ಕಾರ್ಯಾಗಾರವನ್ನು ಅಯೋಜಿಸಲಾಗಿತ್ತು .
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ಸದಸ್ಯ ಸಂದೀಪ್ ನೇತಾಲ್ಕರ ಮಾತನಾಡಿ, ಸಿದ್ದಾಂತ ಆಧಾರಿತ ರಸಾಯನಶಾಸ್ತ್ರ ಮತ್ತು ಆಧುನಿಕ ಗಣಕಯಂತ್ರ ಆಧಾರಿತ ತಂತ್ರಜ್ಞಾನಗಳ ನಡುವಿನ ಅಂತರ ಕಡಿಮೆ ಮಾಡುವ ಕೌಶಲ್ಯಗಳನ್ನು ತಿಳಿಸಿದರು.
ವಿದ್ಯಾರ್ಥಿಗಳಿಗೆ ಅಣುಗಳ ವಿನ್ಯಾಸ ಮಾದರೀಕರಣ ಮತ್ತು ದೃಶ್ಯೀಕರಣಕ್ಕೆ ಅಗತ್ಯವಾದ ತಂತ್ರಾಂಶಗಳ ಕೌಶಲ್ಯಗಳ ಪ್ರಾಯೋಗಿಕ ಬಳಕೆ ಬಗ್ಗೆ ಹೇಳಿದರು.
ವಿದ್ಯಾರ್ಥಿಗಳಲ್ಲಿ ರಸಾಯನ ಶಾಸ್ತ್ರದ ಸಂಯೋಜಿತ ತಿಳಿವಳಿಕೆಯನ್ನು ವೃದ್ಧಿಸುವ ಜೊತೆಗೆ ಸಂಶೋಧನೆ ಮತ್ತು ಉದ್ಯೋಗಾವಕಾಶಗಳಲ್ಲಿ ಅಗತ್ಯವಿರುವ ವಿವಿಧ ಕೌಶಲ್ಯಗಳನ್ನು ಬೆಳೆಸುವ ಮಾರ್ಗದಲ್ಲಿ ಮಹತ್ವದ ಹೆಜ್ಜೆಯಾಗಿದೆಂದರು.
ಬೆಳಗಾವಿ ಆರ್ ಎಲ್ ಎಸ್ ನಲ್ಲಿ ಕಾರ್ಯಾಗಾರ


